Site icon Vistara News

Gold Recovery | ಗೋಲ್ಡ್‌ ರಿಕವರಿ ವೇಳೆ ಪೊಲೀಸ್‌-ಜ್ಯುವೆಲರಿ ಶಾಪ್‌ ಮಾಲೀಕರ ನಡುವೆ ಗಲಾಟೆ

ರಾಮನಗರ: ಗೋಲ್ಡ್‌ ರಿಕವರಿಗೆ (Gold Recovery) ಸಂಬಂಧಪಟ್ಟಂತೆ ಎಜಿಂ ರಸ್ತೆಯ ಜ್ಯುವೆಲರಿ ಶಾಪ್‌ನಲ್ಲಿ ಪೊಲೀಸರು ಮತ್ತು ಮಾಲೀಕರ ನಡುವೆ ವಾಗ್ವಾದ ನಡೆದಿದೆ. ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿದೆ. ಪೊಲೀಸರ ಈ ವರ್ತನೆಯನ್ನು ಸುತ್ತಮುತ್ತಲ ಜ್ಯುವೆಲರಿ ಶಾಪ್‌ ಮಾಲೀಕರು ಖಂಡಿಸಿದ್ದಾರೆ.

ಆರೋಪಿ ನೀಡಿದ ಮಾಹಿತಿ ಮೇರೆಗೆ ಇಲ್ಲಿನ ಹಲಗೂರು ಪೊಲೀಸರು ಎ ಜಿಂ ರಸ್ತೆಯಲ್ಲಿರುವ ಮಾರುತಿ ಜ್ಯುವೆಲರಿಗೆ ಗೋಲ್ಡ್ ರಿಕವರಿಗೆಂದು ಆಗಮಿಸಿದ್ದರು. ಇನ್ಸ್‌ಪೆಕ್ಟರ್ ಶ್ರೀಧರ್, ಸಬ್ ಇನ್ಸ್‌ಪೆಕ್ಟರ್ ರವಿಕುಮಾರ್ ಅವರು ಆಗಮಿಸಿದ್ದು, ಆರೋಪಿ ನೀಡಿರುವ ಚಿನ್ನಾಭರಣವನ್ನು ತೋರಿಸುವಂತೆ ತಾಕೀತು ಮಾಡಿದ್ದಾರೆ.

ಈ ವೇಳೆ ಜ್ಯುವೆಲರಿ ಮಾಲೀಕ ರಮೇಶ್‌ ನೋಟಿಸ್‌ ತೋರಿಸಿ ಎಂದು ಕೇಳಿದ್ದಾರೆ. ಆಗ ಪಿಎಸ್ಐ ರವಿಕುಮಾರ್ ಏಕಾಏಕಿ ಕ್ಯಾಶ್ ಕೌಂಟರ್ ಬಳಿ ಹೋಗಿ ಅಡವಿಟ್ಟ ಚಿನ್ನಾಭರಣವನ್ನು ಕೇಳಿದ್ದಾರೆ. ಪೊಲೀಸರ ವರ್ತನೆಗೆ ಮಾಲೀಕ ರಮೇಶ್‌ ಕಿಡಿಕಾರಿದ್ದು, ಈ ರೀತಿಯಾಗಿ ವರ್ತನೆ ಮಾಡಬಾರದು ಎಂದು ದಬಾಯಿಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಮಾಲೀಕರ ನಡುವೆ ಮಾತಿನ ಚಕಮಕಿ ಉಂಟಾಗಿದೆ.

45 ಗ್ರಾಂ ಚಿನ್ನಾಭರಣದ ವಿಚಾರವಾಗಿ ಜಟಾಪಟಿ ಶುರುವಾಗಿದ್ದು, ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿದೆ. ಜ್ಯುವೆಲರಿ ಶಾಪ್ ಮಾಲೀಕ ರಮೇಶ್‌ಗೆ ಇತರೆ ‌ಜ್ಯುವೆಲರಿ ಶಾಪ್‌ನ ಮಾಲೀಕರು ಸಾಥ್ ನೀಡಿ, ಪೊಲೀಸರ ದೌರ್ಜನ್ಯವನ್ನು ಖಂಡಿಸಿದ್ದಾರೆ.

ಇದನ್ನೂ ಓದಿ | Suicide Case : ಕೊಪ್ಪಳದ ಗ್ರಾಪಂ ಮಾಜಿ ಸದಸ್ಯ ಹೊಸಪೇಟೆ ಲಾಡ್ಜ್‌ನಲ್ಲಿ ಆತ್ಮಹತ್ಯೆಗೆ ಶರಣು

Exit mobile version