Site icon Vistara News

Hassan News: ತಹಸೀಲ್ದಾರ್‌ ರಜೆ ನೀಡ್ತಿಲ್ಲ ಎಂದು ಆತ್ಮಹತ್ಯೆಗೆ ಯತ್ನಿಸಿದ ಎಸ್‌ಡಿಎ

SDA attempts Self harm

ಹಾಸನ: ತಹಸೀಲ್ದಾರ್ ರಜೆ ನೀಡುತ್ತಿಲ್ಲ ಎಂದು ಬೇಸತ್ತು ಪೆಟ್ರೋಲ್ ಮೈ ಮೇಲೆ ಸುರಿದುಕೊಂಡು ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ (Hassan News) ಚನ್ನರಾಯಪಟ್ಟಣ ತಾಲೂಕು ಕಚೇರಿಯಲ್ಲಿ ನಡೆದಿದೆ.

ಮಹೇಶ್ ಆತ್ಮಹತ್ಯೆಗೆ ಯತ್ನಿಸಿದ ನೌಕರ. ರಜೆ ಪಡೆಯುವುದಾದರೆ ಬೇರೆಯವರಿಗೆ ಚಾರ್ಜ್ ನೀಡಿ ಹೋಗಿ ಎಂದಿದ್ದಕ್ಕೆ ಸಿಟ್ಟಿಗೆದ್ದು ಪೆಟ್ರೋಲ್ ಸುರಿದುಕೊಂಡು ನೌಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಂತರ ಮಹೇಶ್‌ ಅವರನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು.

ಪರೀಕ್ಷಾ ಅಕ್ರಮ; 7 ಆರೋಪಿಗಳಿಗೆ ನ್ಯಾಯಾಂಗ ಬಂಧನ

ಯಾದಗಿರಿ: ಎಫ್‌ಡಿಎ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಸೋಮವಾರ ಬಂಧನವಾಗಿದ್ದ 7 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇವರಲ್ಲಿ ಓಂಕಾರ್ ಹಾಗೂ ನಾಮಕಾರ್ ಎಂಬ ಸಹೋದರೂ ಇದ್ದಾರೆ. ಪರೀಕ್ಷೆ ಬರೆಯುತ್ತಿದ್ದ ಓಂಕಾರನಿಗೆ ಹೊರಗಿನಿಂದ ಸಹಾಯ ಮಾಡಲು ಬಂದು ನಾಮಕಾರ್‌ ಸಿಕ್ಕಿಬಿದ್ದಿದ್ದ. ಮತ್ತೊಬ್ಬ ಆರೋಪಿ ಬಸವರಾಜ ಎಂಬಾತ ಯಾದಗಿರಿಯ ವಡಗೇರಾದಲ್ಲಿ ಎಫ್‌ಡಿಎ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಈತನನ್ನು ಪರೀಕ್ಷೆ ಬರೆಯುತ್ತಿದ್ದವರಿಗೆ ಸಹಕಾರ ನೀಡುತ್ತಿದ್ದ ಆರೋಪದಲ್ಲಿ ಬಂಧಿಸಲಾಗಿದೆ. ಈತ ಪಿಎಸ್‌ಐ ನೇಮಕಾತಿ ಅಕ್ರಮದ ಕಿಂಗ್‌ಪಿನ್ ಆರ್‌.ಡಿ. ಪಾಟೀಲ್‌ ಸ್ವ ಗ್ರಾಮದ ಸೋನ್ನ ನಿವಾಸಿಐೂ ಆಗಿದ್ದಾನೆ.

ಇದನ್ನೂ ಓದಿ | KEA Exam Scam: 80 ಸಾವಿರ ಸಂಬಳ ಬಿಟ್ಟು ಸರ್ಕಾರಿ ನೌಕರಿ ಆಸೆಗೆ ಬಿದ್ದು ಜೈಲು ಸೇರಿದ

ಯಾದಗಿರಿ ನಗರದ ಐದು ಪರೀಕ್ಷೆ ಕೇಂದ್ರಗಳಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿ ಭಾನುವಾರ 9 ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಇದೀಗ 7 ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version