Site icon Vistara News

Sedam Election Results: ಸೇಡಂ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಶರಣಪ್ರಕಾಶ್‌ ಪಾಟೀಲ್‌ಗೆ ಒಲಿದ ವಿಜಯ

sedam constituency winner congress sharan prakash patil

ಕಲಬುರಗಿ: ಕಲಬುರಗಿ ಜಿಲ್ಲೆಯ ಸೇಡಂ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಶರಣಪ್ರಕಾಶ್ ಪಾಟೀಲ್ ಗೆಲುವು ಸಾಧಿಸಿದ್ದಾರೆ.

ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಾ.ಶರಣಪ್ರಕಾಶ ಪಾಟೀಲ್‌, ಬಿಜೆಪಿ ಅಭ್ಯರ್ಥಿಯಾಗಿ ರಾಜಕುಮಾರ ಪಾಟೀಲ್, ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಬಾಲರಾಜ್‌ ಗುತ್ತೇದಾರ್‌, ಆಪ್‌ ಅಭ್ಯರ್ಥಿಯಾಗಿ ಶಂಕರ ಬಂಡಿ ಕಣದಲ್ಲಿದ್ದರು.

2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಇಲ್ಲಿ ಬಿಜೆಪಿಯ ರಾಜಕುಮಾರ ಪಾಟೀಲ ಅವರು 80,668 ಮತ ಪಡೆದು ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನ ಶರಣಪ್ರಕಾಶ್‌ ಪಾಟೀಲ 7,200 ಮತಗಳ ಅಂತರದಿಂದ ಸೋತಿದ್ದರು. ಇಲ್ಲಿ ಇರುವ ಒಟ್ಟು ಮತಗಳು 213,263. ಪುರುಷರ ಸಂಖ್ಯೆ 105,496 ಹಾಗೂ 107,745 ಮಹಿಳೆಯರು.

Exit mobile version