ಮಂಡ್ಯ: ಸಾಮಾಜಿಕ ಜಾಲ ತಾಣದ (ಫೇಸ್ ಬುಕ್) ಮೋಸದ ಜಾಲಕ್ಕೆ ಸಿಲುಕಿ ಎಂಜಿನಿಯರ್ ವಿದ್ಯಾರ್ಥಿ (Engineer Student) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದಲ್ಲಿ (pandavapura town) ನಡೆದಿದೆ. ಮೃತ ಯುವಕನನ್ನು 20 ವರ್ಷದ ಷಣ್ಮುಖ ಎಂದು ಗುರುತಿಸಲಾಗಿದೆ. ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ(Self Harming Case).
ಆತ್ಮಹತ್ಯೆ ಮಾಡಿಕೊಂಡಿರುವ ಯುವಕ ಮಂಡ್ಯ ನಗರದ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದ. ಫೇಸ್‌ಬುಕ್‌ನಲ್ಲಿ ಈತನಿಗೆ ಅಮೆರಿಕದವನು ಎಂದು ಪರಿಚಯಿಸಿಕೊಂಡಿದ್ದ ವ್ಯಕ್ತಿಯೊಬ್ಬ ಸ್ನೇಹ ಬೆಳೆಸಿದ್ದ. ಮೋಸ ಮಾಡಲು ಹೊಂಚು ಹಾಕಿದ್ದ ವ್ಯಕ್ತಿಯನ್ನು ಷಣ್ಮುಖ ನಿಜವಾಗಲೂ ಅಮೆರಿಕ ವ್ಯಕ್ತಿಯೆಂದೇ ಭಾವಿಸಿದ್ದರು.
‘ಅಮೆರಿಕದ ವ್ಯಕ್ತಿ’ಗೆ ಅಗತ್ಯವಿದೆ ಎಂದು ಷಣ್ಮುಖ ತಮ್ಮ ತಾಯಿಯ ಚಿನ್ನಾಭರಣಗಳನ್ನು ಅಡವಿಟ್ಟು ಹಣವನ್ನು ಹೊಂದಿಸಿದ್ದರು. ಆತನಿಗೆ ಸುಮಾರು ನಾಲ್ಕೈದು ಲಕ್ಷ ರೂಪಾಯಿ ನೀಡಿದ್ದರು. ಆದರೆ, ತಾನು ಹಣ ನೀಡಿದ ವ್ಯಕ್ತಿ ಮೋಸ ಮಾಡಿದ್ದಾನೆ ಎಂಬುದು ಖಾತ್ರಿಯಾಗಿದೆ. ಇನ್ನು ಸಾಲ ನೀಡಿದ ಹಣ ವಾಪಸ್ ಬರುವುದಿಲ್ಲ ಎಂದು ಖಾತ್ರಿಯಾಗುತ್ತಿದ್ದಂತೆ ಡೆತ್ ನೋಟ್ ಬರೆದಿಟ್ಟು, ಷಣ್ಮುಖ ಸಾವಿಗೆ ಶರಣಾಗಿದ್ದಾನೆ.
ಈ ಸುದ್ದಿಯನ್ನೂ ಓದಿ: Self Harming : ಶಾಸಕ ಅಜಯ್ ಸಿಂಗ್ ಮನೆಯಲ್ಲೇ ವಾಚ್‌ಮನ್ ನೇಣು ಬಿಗಿದುಕೊಂಡು ಆತ್ಮಹತ್ಯೆ