Site icon Vistara News

Self Harming : ಯುವಕನ ಸಾವಿನಿಂದ ನೊಂದ ತಾಯಿ, ಸೋದರಿ ಆತ್ಮಹತ್ಯೆ

suicide in Sirsi

ಶಿರಸಿ: ಆ ಮನೆಯಲ್ಲಿ ಸೋಮವಾರ ಬೆಳಗ್ಗೆ ಒಂದು ಸಾವು ಸಂಭವಿಸಿತ್ತು. ರಾತ್ರಿ ಮತ್ತೆರಡು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದು ಶಿರಸಿ ತಾಲೂಕಿನ ಮಾತ್ನಳ್ಳಿ ಬಾಳಗಾರ ಗ್ರಾಮದಲ್ಲಿ ನಡೆದ ಘಟನೆ. ಅನಾರೋಗ್ಯಪೀಡಿತನಾಗಿದ್ದ ಯುವಕ ಮೃತಪಟ್ಟ ಬೆನ್ನಿಗೇ ಅದರ ನೋವು ತಾಳಲಾರದೆ ತಾಯಿ ಮತ್ತು ತಂಗಿ (Mother and daughter dead) ಪ್ರಾಣ ಕಳೆದುಕೊಂಡಿದ್ದಾರೆ (Self Harming).

ಉತ್ತರ ಕನ್ನಡ ಜಿಲ್ಲೆಯ (Uttara Kannada News) ಶಿರಸಿ ತಾಲೂಕಿನ ಸದಾಶಿವಳ್ಳಿ ಪಂಚಾಯ್ತಿ ವ್ಯಾಪ್ತಿಯ ಮಾತ್ನಳ್ಳಿ ಗ್ರಾಮದ ನರ್ಮದಾ ಬಾಲಚಂದ್ರ ಹೆಗಡೆ ಮತ್ತು ಅವರ ಮಗಳು ದಿವ್ಯಾ ಬಾಲಚಂದ್ರ ಹೆಗಡೆ ಮೃತಪಟ್ಟವರು. ನರ್ಮದಾ ಅವರ ಮಗ ಉದಯ ಬಾಲಚಂದ್ರ ಹೆಗಡೆ ಸೋಮವಾರ ಮೃತಪಟ್ಟಿದ್ದ. ಇದರಿಂದ ನೊಂದ ತಾಯಿ ಮತ್ತು ಸೋದರಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಮೂಲಕ ದೀಪಾವಳಿಯ ದಿನವೇ ಈ ಮನೆಯ ಮೂರು ದೀಪಗಳು ಆರಿ ಹೋದಂತಾಗಿದೆ.

ಉದಯ ಬಾಲಚಂದ್ರ ಹೆಗಡೆ ಎಂಬ ಯುವಕ ಇತ್ತೀಚೆಗೆ ಅಸ್ವಸ್ಥನಾಗಿದ್ದು, ಬಳಿಕ ಚಿಕಿತ್ಸೆ ನೀಡಿದರೂ ಆರೋಗ್ಯ ಸುಧಾರಿಸದೆ ಮೃತಪಟ್ಟಿದ್ದ. ಇದರಿಂದ ತಾಯಿ ಮತ್ತು ತಂಗಿಗೆ ತೀವ್ರ ಆಘಾತವಾಗಿತ್ತು. ಅವರು ಕೂಡಾ ಪ್ರಾಣ ಕಳೆದುಕೊಳ್ಳುವ ನಿರ್ಧಾರಕ್ಕೆ ಬಂದು ರಾತ್ರಿ ನೇಣು ಬಿಗಿದುಕೊಂಡಿದ್ದಾರೆ. ಶಿರಸಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ದಪ್ಪ ಇದೇನೆ ಎಂದು ಮನನೊಂದು MBBS ವಿದ್ಯಾರ್ಥಿನಿ ಆತ್ಮಹತ್ಯೆ

ಮಂಗಳೂರು: ರಾಜ್ಯದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ (Suicide Case) ಒಂದೇ ಸಮನೆ ಹೆಚ್ಚುತ್ತಿದೆ. ಅದರಲ್ಲೂ ಮುಖ್ಯವಾಗಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಪರೀಕ್ಷೆಯ ಒತ್ತಡಕ್ಕೋ, ವಯಸ್ಸಿನಲ್ಲಿ ಎದುರಾಗುವ ಮಾನಸಿಕ ಖಿನ್ನತೆಗೋ ಬಲಿಯಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮಂಗಳೂರಿನಲ್ಲಿ ಒಬ್ಬ ಎಂಬಿಬಿಎಸ್‌ ವಿದ್ಯಾರ್ಥಿನಿ (MBBS Student ends life) ಹಾಸ್ಟೆಲ್‌ ಕಟ್ಟಡದಿಂದ ಜಿಗಿದು ಪ್ರಾಣ ಕಳೆದುಕೊಂಡಿದ್ದಾಳೆ. ʻʻನಾನು ತೀರಾ ದಪ್ಪ ಇದ್ದೇನೆ, ನೋಡೋಕೆ ಚೆನ್ನಾಗಿ ಕಾಣ್ತಾ ಇಲ್ಲʼʼ ಎಂದು ನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Medical student death in Mangalore

ಮಂಗಳೂರಿನ ‌ಎ.ಜೆ ಆಸ್ಪತ್ರೆ ಮೆಡಿಕಲ್ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿರುವ ಪ್ರಕೃತಿ ಶೆಟ್ಟಿ (20) ಆತ್ಮಹತ್ಯೆ ಮಾಡಿಕೊಂಡ ಯುವತಿ. ಆಕೆ ಸೋಮವಾರ ಮುಂಜಾನೆ 3 ಗಂಟೆ ಹೊತ್ತಿಗೆ ಎಜೆ ಆಸ್ಪತ್ರೆಯ ಮಹಿಳಾ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಹಾಸ್ಟೆಲ್‌ನ 6ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಆಕೆ ಜೀವನದಲ್ಲಿ ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್‌ ನೋಟ್‌ ಬರೆದಿಟ್ಟಿದ್ದಾರೆ.

ಇದನ್ನೂ ಓದಿ: Naxal Activity : ವಯನಾಡಿನಲ್ಲಿ ನಕ್ಸಲ್‌ ಚಟುವಟಿಕೆ; ಕೇರಳ-ಕರ್ನಾಟಕ ಗಡಿಯಲ್ಲಿ ಕಟ್ಟೆಚ್ಚರ

ʻʻʻನಾನು ದಪ್ಪ ಇದ್ದೇನೆ. ನೋಡಲು ಚೆನ್ನಾಗಿ ಕಾಣ್ತಾ ಇಲ್ಲ.ʼʼ ಎಂದು ದೀರ್ಘ ಸುಸೈಡ್‌ ನೋಟ್‌ನಲ್ಲಿ ಅವರು ಹೇಳಿದ್ದಾರೆ. ʻʻಎಂ.ಬಿ.ಬಿಎಸ್‌. ಮುಗಿಸಬೇಕು ಅಂತ ತುಂಬಾ ಆಸೆ ಇತ್ತು. ಆದರೆ, ನನ್ನ ಸೌಂದರ್ಯಕ್ಕೆ ದಪ್ಪ ಜೀವ ಅಡ್ಡಿಯಾಗಿದೆ. ತೂಕ ಇಳಿಸಲು ಸಾಕಷ್ಟು ಪ್ರಯತ್ನಪಟ್ಟರೂ ಆಗಲಿಲ್ಲ. ಹೀಗಾಗಿ ಜೀವನದಲ್ಲಿ ಜಿಗುಪ್ಸೆಗೊಂಡಿದ್ದೇನ ಎಂದು ಅವರು ಹೇಳಿದ್ದಾರೆ.

Exit mobile version