Site icon Vistara News

Self Harming : ಇಬ್ಬರು ಮಕ್ಕಳೊಂದಿಗೆ ತಾಯಿ ನಿಗೂಢ ಸಾವು; ಆತ್ಮಹತ್ಯೆ ಶಂಕೆ

Hasana death Mother and Children death

ಹಾಸನ: ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ನಿಗೂಢವಾಗಿ ಮೃತಪಟ್ಟಿರುವ (Mysterious death) ದಾರುಣ ಘಟನೆ ಹಾಸನ ನಗರದ (Hasana News) ದಾಸರಕೊಪ್ಪಲಿನಲ್ಲಿ ನಡೆದಿದೆ. ಶಿವಮ್ಮ (36) ಎಂಬ ಮಹಿಳೆ ತನ್ನ ಮಕ್ಕಳಾದ ಸಿಂಚು (7) ಹಾಗೂ ಪವನ (10) ಅವರೊಂದಿಗೆ ನಿಗೂಢವಾಗಿ ಮೃತಪಟ್ಟವರು (Self Harming).

ಶಿವಮ್ಮ ಮತ್ತು ತೀರ್ಥ ಅವರ ಮದುವೆ ಬಹು ವರ್ಷದ ಹಿಂದೆಯೇ ನಡೆದಿತ್ತು. ತೀರ್ಥ ಅವರು ಬೇರೆ ಊರಿನ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಕುಟುಂಬ ಒಂದು ಸಣ್ಣ ಮನೆಯಲ್ಲಿ ವಾಸ ಮಾಡುತ್ತಿದೆ. ಇವರಿಗೆ ಪವನ ಮತ್ತು ಸಿಂಚು ಎಂಬ ಇಬ್ಬರು ಮಕ್ಕಳಿದ್ದಾರೆ.

ಮಂಗಳವಾರ ಬೆಳಗ್ಗೆ ಕೆಲಸಕ್ಕೆ ಹೋದ ತೀರ್ಥ ಯಾವುದೋ ಕಾರಣಕ್ಕೆ ಪತ್ನಿಗೆ ಕರೆ ಮಾಡಿದ್ದಾರೆ. ಆದರೆ, ಪತ್ನಿ ಕರೆ ಸ್ವೀಕರಿಸಲಿಲ್ಲ. ಇದರಿಂದ ಅನುಮಾನಗೊಂಡ ತೀರ್ಥ ತಕ್ಷಣವೇ ಮನೆಗೆ ಓಡೋಡಿ ಬಂದಿದ್ದಾರೆ.

ಮನೆಗೆ ಬಂದರೆ ಬಾಗಿಲು ಹಾಕಿಕೊಂಡಿತ್ತು. ಕರೆದರೂ ತೆರೆಯದೆ ಇದ್ದಾಗ ತೀರ್ಥ ಬಾಗಿಲು ಮುರಿದು ಒಳಗೆ ಹೋಗಿದ್ದಾರೆ. ಆಗ ಪತ್ನಿ ಮತ್ತು ಇಬ್ಬರು ಮಕ್ಕಳು ಶವವಾಗಿ ಬಿದ್ದಿರುವುದು ಕಂಡುಬಂದಿದೆ.

ಮನೆಯ‌ ಹಾಲ್‌ ಮತ್ತು ಅಡುಗೆ ಕೋಣೆಯ ನಡುವಿನ ಜಾಗದಲ್ಲಿ ಮೂವರ ಶವ ಪತ್ತೆಯಾಗಿದೆ. ಶಿವಮ್ಮ ಅವರು ಅಂಗಾತ ಮಲಗಿದ್ದರೆ ಮಕ್ಕಳಲ್ಲಿ ಒಬ್ಬಳು ಕಾಲಿನ ಮೇಲೆ, ಇನ್ನೊಬ್ಬ ಕಾಲಿನ ಕೆಳಗೆ ಬಿದ್ದುಕೊಂಡಂತೆ ಇದ್ದಾರೆ.

ಮನೆಯಲ್ಲಿ ಗ್ಯಾಸ್‌ ಆನ್‌ ಆಗಿರುವುದು ಕಂಡುಬಂದಿದೆ. ಆದರೆ ಬೆಂಕಿ ಹತ್ತಿಕೊಂಡಿದ್ದು ಕಂಡುಬಂದಿಲ್ಲ. ಕೇವಲ ಗ್ಯಾಸ್‌ ಸಿಲಿಂಡರ್‌ ಗ್ಯಾಸ್‌ ಲೀಕೇಜ್‌ನಿಂದ ಇವರು ಸಾಯುವುದು ಸಾಧ್ಯವಿಲ್ಲ ಎನ್ನಲಾಗುತ್ತಿದೆ. ಹಾಗಿದ್ದರೆ ವಿಷ ಸೇವಿಸಿ ಪ್ರಾಣ ಕಳೆದುಕೊಂಡಿರಬಹುದೇ ಎಂಬ ಪ್ರಶ್ನೆಯೂ ಮೂಡಿದೆ

ಪೆನ್‌ಷನ್‌ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : Self Harming : ಎಲೆಕ್ಷನ್‌ನಲ್ಲಿ ಸೋಲು; ಕರ್ನಾಟಕ ವಿವಿ ಸೂಪರಿಂಟೆಂಡೆಂಟ್ ಸೂಸೈಡ್‌

ಎಲೆಕ್ಟ್ರಿಕ್‌ ಬಸ್‌- ಜೀಪ್‌ ಮಧ್ಯೆ ಭೀಕರ ಅಪಘಾತ; ನಾಲ್ವರು ಸಾವು

ಮೈಸೂರು: ಕೆಎಸ್‌ಆರ್‌ಟಿಸಿ ಎಲೆಕ್ಟ್ರಿಕ್‌ ಬಸ್‌ (KSRTC Electric Bus) ಮತ್ತು ಜೀಪ್‌ ಮಧ್ಯೆ ಸಂಭವಿಸಿದ ಭೀಕರ ರಸ್ತೆ ದುರಂತದಲ್ಲಿ (Road Accident) ನಾಲ್ವರು ಮೃತಪಟ್ಟಿದ್ದಾರೆ. ಹುಣಸೂರು ಪಟ್ಟಣದ ಹುಣಸೂರಿನ ಆರ್.ಟಿ.ಒ. ಕಚೇರಿ ಬಳಿ ಈ ಘಟನೆ ಸಂಭವಿಸಿದೆ. ಮೃತರಲ್ಲಿ ಜೀಪು ಚಾಲಕನ ಕೂಡಾ ಸೇರಿದ್ದಾನೆ.

ವಿರಾಜಪೇಟೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರ್ಕಾರಿ ಬ್ಯಾಟರಿ ಚಾಲಿತ ಬಸ್ ಮತ್ತು ಹುಣಸೂರಿನಿಂದ ಪಿರಿಯಾಪಟ್ಟಣಕ್ಕೆ ತೆರಳುತ್ತಿದ್ದ ಜೀಪ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಜೀಪಿನಲ್ಲಿ ಒಟ್ಟು ಆರು ಮಂದಿ ಪ್ರಯಾಣ ಬೆಳೆಸುತ್ತಿದ್ದರು. ಇವರಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮತ್ತೊಬ್ಬರು ಸಾವನ್ನಪ್ಪಿದ್ದಾರೆ. ಇನ್ನೂ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜೀಪಿನಲ್ಲಿದ್ದವರೆಲ್ಲರೂ ಕೂಲಿ ಕಾರ್ಮಿಕರಾಗಿದ್ದಾರೆ. ಹುಣಸೂರು ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version