Site icon Vistara News

Self Harming : ಇಬ್ಬರು ಹೆಣ್ಣು ಮಕ್ಕಳ ಜತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ; ಈಜಿ ಮೇಲೇರಿದ 7 ವರ್ಷದ ಗಂಗೋತ್ರಿ

Sucide case

ಚಿಕ್ಕಬಳ್ಳಾಪುರ: ತಾಯಿಯೊಬ್ಬಳು ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೆ (Self Harming) ಯತ್ನಿಸಿದ್ದು, ಅಮ್ಮ ಮತ್ತು ಒಬ್ಬ ಮಗಳು ಪ್ರಾಣ (Mother and daughter dead) ಕಳೆದುಕೊಂಡಿದ್ದರೆ, ಒಬ್ಬ ಮಗಳು ಈಜಿ ದಡ ಸೇರಿ (One girl survived) ಬದುಕುಳಿದಿದ್ದಾಳೆ.

ಚಿಕ್ಕಬಳ್ಳಾಪುರ ತಾಲೂಕಿನ (Chikkaballapura News) ಸೇಟ್ ದಿನ್ನೆ ಬಳಿ‌ ಈ ಘಟನೆ ನಡೆದಿದ್ದು, 5 ವರ್ಷದ ಹೆಣ್ಣು‌ ಮಗು ಶ್ರೀನಿಧಿ ಹಾಗೂ ತಾಯಿ ನಾಗಮ್ಮ (39) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಏಳು ವರ್ಷದ ಮಗು ಗಂಗೋತ್ರಿ ನೀರಿನಲ್ಲಿ ಮುಳುಗುವಾಗ ಭಯವಾಗಿ ಕೈಕಾಲು ಬಡಿದು ಈಜಿ ದಡ ಸೇರಿ ಬದುಕುಳಿದಿದ್ದಾಳೆ.

ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಮೃತದೇಹಗಳನ್ನು ಮೇಲಕ್ಕೆತ್ತುವ ಕಾರ್ಯಾಚರಣೆಯಲ್ಲಿ

ನಾಗಮ್ಮ ಅವರಿಗೆ ಎಂಟು ವರ್ಷದ ಹಿಂದೆ ಮದುವೆಯಾಗಿದ್ದು, ಮನೆಯಲ್ಲಿ ನಿತ್ಯ ಜಗಳ ಆಗುತ್ತಿತ್ತು ಎಂದು ಹೇಳಲಾಗುತ್ತಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮನನೊಂದಿದ್ದ ಆಕೆ ತನ್ನ ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು.

ಈ ನಡುವೆ ಅವರು ಮನೆಯಲ್ಲಿ ಯಾರಿಗೂ ಗೊತ್ತಿಲ್ಲದಂತೆ ಜಮೀನಿನ ಮಧ್ಯಭಾಗದಲ್ಲಿರುವ ದೊಡ್ಡ ಬಾವಿಯ ಬಳಿಗೆ ಬಂದಿದ್ದರು. ಅಲ್ಲಿ ತನ್ನ ಇಬ್ಬರೂ ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಹಾರಿದ್ದರು. ಪುಟ್ಟ ಮಗು ಮತ್ತು ತಾಯಿ ಮೃತಪಟ್ಟರು.

ಈ ನಡುವೆ, ಈ ಯಾವ ವಿಚಾರಗಳೂ ಗೊತ್ತಿಲ್ಲದ ಏಳು ವರ್ಷದ ಗಂಗೋತ್ರಿ ಒಮ್ಮಿಂದೊಮ್ಮೆಗೆ ಬಾವಿಗೆ ಬಿದ್ದಾಗ ಭಯಗೊಂಡಿದ್ದಳು. ಅಲ್ಲೇ ಕಾಲು ಬಡಿದಾಡಿಕೊಂಡು ಅತ್ತಿತ್ತ ಓಡಾಡಿದ್ದಾಳೆ.

ಇದು ಮೆಟ್ಟಿಲುಗಳಿರುವ ದೊಡ್ಡ ಬಾವಿ. ಗಂಗೋತ್ರಿ ಕಾಲು ಬಡಿಯುತ್ತಾ ಆ ಮೆಟ್ಟಿಲುಗಳ ಕಡೆಗೆ ಬಂದು ಆ ಮೆಟ್ಟಿಲು ಹತ್ತಿ ಮೇಲೆ ಬಂದು ಬೊಬ್ಬೆ ಹೊಡೆದಿದ್ದಾಳೆ. ಆಗ ಊರಿನ ಜನರಿಗೆ ವಿಷಯ ಗೊತ್ತಾಗಿದೆ.

ಕೂಡಲೇ ಅವರೆಲ್ಲ ಓಡೋಡಿ ಬಂದು ಇಣುಕಿದಾಗ ತಾಯಿ ಮತ್ತು ಮಗು ಸಾವನ್ನಪ್ಪಿದರು. ಈ ನಡುವೆ ಅಗ್ನಿಶಾಮಕ ದಳ ಹಾಗು ಇತರರು ಸೇರಿ ಶವವನ್ನು ಮೇಲಕ್ಕೆ ಎತ್ತಲಾಯಿತು.

ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು, ತನಿಖೆ ನಡೆಯುತ್ತಿದೆ. ಗಂಡನ ಮನೆಯವರ ವಿಚಾರಣೆ ನಡೆಯುತ್ತಿದೆ.

ವೃದ್ಧೆಯನ್ನು ಕಟ್ಟಿ ಹಾಕಿ ಹಣ, ಒಡವೆ ದೋಚಿದ್ದ ಕಳ್ಳರ ಸೆರೆ

ತುಮಕೂರು: ವೃದ್ಧೆಯನ್ನು ಕಟ್ಟಿ ಹಾಕಿ ಹಣ, ಒಡವೆ ದೋಚಿದ್ದ ಖತರ್ನಾಕ್ ಕಳ್ಳರನ್ನು ಹುಲಿಯೂರುದುರ್ಗ ಪೊಲೀಸರು ಸಾಹಸಿಕ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.

ತುಮಕೂರು ಜಿಲ್ಲೆ, ಕುಣಿಗಲ್ ತಾಲ್ಲೂಕಿನ, ಸಂತೆಮಾವತ್ತೂರು ಗ್ರಾಮದಲ್ಲಿ ಕಳೆದ ವಾರ ಚಿಕ್ಕಮ್ಮ‌ ಎಂಬ ವೃದ್ಧೆಯ ಒಂಟಿ ಮನೆಯಲ್ಲಿ ಕಳ್ಳತನ ಮಾಡಲಾಗಿತ್ತು. ವೃದ್ಧೆಯನ್ನು ಕಟ್ಟಿಹಾಕಿ ಮನೆಯನ್ನು ದೋಚಲಾಗಿತ್ತು.

ಈ ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಮದ್ದೂರು ತಾಲ್ಲೂಕಿನ ನಿಲುವಾಗಿಲು ಗ್ರಾಮದ ಶರತ್, ಶಿವರಾಜು, ತ್ಯಾಮಗಂಡಲು ವಸಂತಕುಮಾರ್, ಮಧುಗಿರಿ ಐ.ಡಿ.ಹಳ್ಳಿಯ ಅಲೀಶಾ ಬಾಬು ಎಂಬವರನ್ನು ಬಂಧಿಸಿದ್ದಾರೆ.

ಕಳ್ಳರ ಕಾರ್ಯಾಚರಣೆ ಹೇಗಿತ್ತು?!

ಮದ್ದೂರು ತಾಲ್ಲೂಕಿನ ನಿಲುವಾಗಿಲು ಗ್ರಾಮದ ಶರತ್ ಎಟಿಎಂನ ಲಾಕರ್ ವಿಭಾಗದಲ್ಲಿ ಕೆಲಸ ಮಾಡುತ್ತಾನೆ. ಕಳೆದ ವಾರ ಚಿಕ್ಕಮ್ಮ ಅವರು ಬ್ಯಾಂಕ್‌ಗೆ ಹೋಗಿದ್ದಾಗ ಅಲ್ಲಿ ಅವರನ್ನು ಶರತ್ ಪರಿಚಯ ಮಾಡಿಕೊಂಡಿದ್ದ. ಈ ವೇಳೆ‌ ವೃದ್ಧೆ ಚಿಕ್ಕಮ್ಮ ಶರತ್ ಬಳಿ ತನ್ನ ಕಷ್ಟಸುಖಗಳನ್ನ ಹೇಳಿಕೊಂಡಿದ್ದರು. ಅಜ್ಜಿ ಒಬ್ಬಂಟಿ ಎಂದು ತಿಳಿದುಕೊಂಡಿದ್ದ ಶರತ್ ಇತರೆ ಮೂವರೊಂದಿಗೆ ಸೇರಿ ದರೋಡೆಗೆ ಪ್ಲಾನ್ ಮಾಡಿದ್ದರು. ಅದರಂತೆಯೇ ವೃದ್ಧೆಯ ಮನೆ ಮೇಲೆ ದಾಳಿ ಮಾಡಿತ್ತು ಶರತ್ ಅಂಡ್‌ ಟೀಮ್.

ಮನೆಯಿಂದ ಸುಮಾರು 54 ಸಾವಿರ ರೂ. ನಗದು ಹಾಗೂ 50 ಗ್ರಾಂ ಬಂಗಾರ ಕದ್ದು ಪರಾರಿಯಾಗಿತ್ತು.

ಸಿಕ್ಕಿಬಿದ್ದಿದ್ದು ಹೇಗೆ?

ಶರತ್‌ ಎಂಡ್‌ ಟೀಮ್‌ ತುಂಬ ಪ್ಲ್ಯಾನ್‌ ಮಾಡಿ ಈ ದರೋಡೆಯನ್ನು ಮಾಡಿತ್ತಾದರೂ ಅದೊಂದು ಸಿಸಿಟಿವಿ ಇವರೆಲ್ಲ ಕೃತ್ಯವನ್ನು ತೆರೆದಿಟ್ಟಿತ್ತು. ದರೋಡೆಯಾದ ದಿನವೇ ಪೊಲೀಸರು ಅಜ್ಜಿಯ ಮನೆ ಸಮೀಪ ಇದ್ದ ಅಂಗಡಿಯೊಂದರ ಸಿಸಿಟಿವಿ ದೃಶ್ಯವನ್ನು ಗಮನಿಸಿದ್ದರು. ಅದರಲ್ಲಿ ದಾಖಲಾದ ಬೈಕ್‌ ಒಂದು ನಂಬರ್ ಟ್ರೇಸ್ ಆಧರಿಸಿ ತನಿಖೆ ನಡೆಸಿದರು.

ಡಿವೈಎಸ್ ಪಿ ಲಕ್ಷ್ಮೀಕಾಂತ್ ಅವರ ನೇತೃತ್ವದಲ್ಲಿ ಕೇವಲ 6 ದಿನದಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹುಲಿಯೂರದುರ್ಗ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ : Self Harming : ನೇಣಿಗೆ ಶರಣಾದ ಗುಡಿಬಂಡೆ ಪಟ್ಟಣ ಪಂಚಾಯತಿ ಉಪಾಧ್ಯಕ್ಷ

Exit mobile version