ಬೀದರ್: ಪ್ರೇಮ ವೈಫಲ್ಯದಿಂದ (love failure) ನೊಂದ ಪೊಲೀಸ್ ಕಾನ್‌ಸ್ಟೇಬಲ್ (Police Constable) ಒಬ್ಬರು ಆತ್ಮಹತ್ಯೆಗೆ (Suicide case) ಶರಣಾಗಿದ್ದಾರೆ. ಬೀದರ್ ಜಿಲ್ಲೆಯ ಬಸವ ಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ (Basava Kalyana Police station) ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಕಾನ್‌ಸ್ಟೇಬಲ್ ಉಮೇಶ್ ನಾಯ್ಕ್ ಅವರೇ ಆತ್ಮಹತ್ಯೆ ಮಾಡಿಕೊಂಡವರು.
25 ವರ್ಷದ ಉಮೇಶ್ ನಾಯಕ್ ಅವರು ಬಸವಕಲ್ಯಾಣ ನಗರದ ಟೂರಿಸ್ಟ್ ಲಾಡ್ಜ್ ನಲ್ಲಿ ರೂಂ ಮಾಡಿಕೊಂಡು ಅಲ್ಲೇ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ.
ಉಮೇಶ್ ನಾಯಕ್ ಅವರು ಮೂಲತಃ ವಿಜಯನಗರ ಜಿಲ್ಲೆಯವರು. 2021ರಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಆಗಿ ಆಯ್ಕೆಯಾಗಿ ಬೀದರ್‌ನಲ್ಲಿ ನೇಮಕಾತಿ ಪಡೆದಿದ್ದರು. ಹಲವು ತಿಂಗಳಿನಿಂದ ಬಸವಕಲ್ಯಾಣ ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಸುತ್ತಿರುವ ಉಮೇಶ್ ನಾಯಕ್ ಅವರು ಪ್ರೇಮ ವೈಫಲ್ಯದಿಂದ ನೊಂದು ಪ್ರಾಣ ಕಳೆದುಕೊಂಡಿದ್ದಾರೆ ಎನ್ನುವುದು ಪ್ರಾಥಮಿಕ ಮಾಹಿತಿ.
ಉಮೇಶ್ ನಾಯಕ್ ಅವರು ಒಬ್ಬ ಹುಡುಗಿಯನ್ನು ಪ್ರೀತಿಸುತ್ತಿದ್ದು, ಆಕೆ ಈಗ ನಿರಾಕರಣೆ ಮಾಡಿದ್ದರಿಂದ ಅವರು ನೊಂದಿದ್ದರು ಎಂದು ಹೇಳಲಾಗಿದೆ. ಆದರೆ, ಈ ವಿಚಾರ ಅವರ ಮನೆಯವರಿಗೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ. ಇದೀಗ ಅವರ ಆತ್ಮಹತ್ಯೆಯ ಸುದ್ದಿ ತಿಳಿಯುತ್ತಲೇ ಪೋಷಕರು ವಿಜಯ ನಗರದಿಂದ ಆಗಮಿಸುತ್ತಿದ್ದಾರೆ.
ಬಸವ ಕಲ್ಯಾಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : Road Accident: ಆಂಧ್ರಪ್ರದೇಶದಲ್ಲಿ ಭಾರಿ ಅಪಘಾತ, ಹುಣಸೂರು ಅಬಕಾರಿ ಡಿಎಸ್‌ಪಿ ಗಂಭೀರ ಗಾಯ, ತಂದೆ ಸಾವು
ಚಿಕ್ಕಮಗಳೂರಿನಲ್ಲಿ ಎರಡು ದಿನದ ಅಂತರದಲ್ಲಿ ಇಬ್ಬರು ರೈತರು ಆತ್ಮಹತ್ಯೆ
ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಲ್ಲಿ ಮತ್ತೊಬ್ಬ ರೈತ ಆತ್ಮಹತ್ಯೆಗೆ (Farmer Death) ಶರಣಾಗಿದ್ದಾರೆ. ಪರಮೇಶ್ವರಪ್ಪ (52) ಆತ್ಮಹತ್ಯೆಗೆ ಶರಣಾದ ರೈತ. ಎರಡು ದಿನಗಳ ಅಂತರದಲ್ಲಿ ಇಬ್ಬರು ರೈತರು ಚಿಕ್ಕಮಗಳೂರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಳೆ ಇಲ್ಲದೆ ಬೆಳೆ ನಾಶವಾದ ಹಿನ್ನೆಲೆ ಮನನೊಂದು ಪರಮೇಶ್ವರಪ್ಪ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಜ್ಜಂಪುರ ತಾಲೂಕಿನ ಚಿಕ್ಕನಲ್ಲೂರು ಗ್ರಾಮದಲ್ಲಿ ನಡೆದಿದೆ. ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪರಮೇಶ್ವರಪ್ಪ 3 ಎಕರೆ ಜಮೀನನಲ್ಲಿ ಈರುಳ್ಳಿ ಬೆಳೆ ಹಾಕಿದ್ದರು. ಆದರೆ ಮಳೆಯಿಲ್ಲದೆ ಸಂಪೂರ್ಣ ನಾಶವಾಗಿತ್ತು. ಇತ್ತ ಕೃಷಿಗಾಗಿ ಬ್ಯಾಂಕ್, ಬಡ್ಡಿ ಹಾಗೂ ಕೈಸಾಲ ಸೇರಿ 5 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸಲಾಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎರಡು ದಿನದ ಹಿಂದೆ ಕಡೂರು ತಾಲೂಕಿನ ಗಿರಿಯಾಪುರ ಗ್ರಾಮದ ಸತೀಶ್ (48), ಮಾಡಿಕೊಂಡಿದ್ದರು.
ಸತೀಶ್ ಕೃಷಿ ಪತ್ತಿನ ಸಹಕಾರ ಸಂಘ, ಸೇರಿದಂತೆ ವಿವಿಧ ಕಡೆ ಸಾಲ ಮಾಡಿದ್ದರು. ಈರುಳ್ಳಿ ಬೆಳೆ ನೀರಿಲ್ಲದೆ ಒಣಗಿದ್ದರಿಂದ ಅವರು ಮುಂದೆ ಸಾಲ ಮರುಪಾವತಿ ಮಾಡುವುದು ಹೇಗೆ ಎಂದು ಭಯದಿಂದ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.