Site icon Vistara News

Self Harming: ಮೇಲಧಿಕಾರಿಗಳಿಗೆ ಪತ್ನಿ ದೂರು; ನೊಂದ ಕಾನ್‌ಸ್ಟೇಬಲ್‌ ಆತ್ಮಹತ್ಯೆ

police Constable suicide

ಹಾಸನ: ಕೌಟುಂಬಿಕ ಕಲಹದಿಂದ (Family Dispute) ನೊಂದ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರು ಆತ್ಮಹತ್ಯೆಗೆ (Police Constable suicide) ಶರಣಾಗಿದ್ದಾರೆ. ಹಾಸನ ಜಿಲ್ಲೆ, ಸಕಲೇಶಪುರ ಪಟ್ಟಣದ (Sakaleshpura town) ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ಕಾನ್ಸ್‌ಟೇಬಲ್ ಸೋಮಶೇಖರ್ (39) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಕಲೇಶಪುರದಲ್ಲಿ 112 ಪೊಲೀಸ್ ವಾಹನದ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸೋಮಶೇಖರ್ ಅವರ ವಿರುದ್ಧ ಅವರ ಪತ್ನಿ ಡಿವೈ‌ಎಸ್‌ಪಿ‌ಗೆ ದೂರು ನೀಡಿದ್ದರು. ಸೋಮಶೇಖರ್‌ ವಿಪರೀತ ಕಿರುಕುಳ ನೀಡುತ್ತಾರೆ. ಅವರಿಗೆ ಸ್ವಲ್ಪ ಬುದ್ಧಿ ಹೇಳಿ ಎಂದು ಅವರು ಮನವಿ ಮಾಡಿದ್ದರು. ಹಿರಿಯ ಅಧಿಕಾರಿಗಳು ಕೂಡಾ ಸೋಮಶೇಖರ್‌ ಅವರನ್ನು ಕರೆದು ಬುದ್ಧಿವಾದ ಹೇಳಿದ್ದರು. ಮನೆಯ ವಿಚಾರವನ್ನು ಕಚೇರಿ ತಂದಿದ್ದರಿಂದ ಮನ ನೊಂದ ಸೋಮಶೇಖರ್‌ ಸಾವಿಗೆ ಶರಣಾಗಿದ್ದಾರೆ.

ಸೋಮಶೇಖರ್ ಪತ್ನಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದು, ಮನೆಯಲ್ಲಿ ಸೋಮಶೇಖರ್‌ ವಿಪರೀತ ಕಿರುಕುಳ ನೀಡುತ್ತಿದ್ದರು ಎಂದು ಹೇಳಲಾಗಿದೆ. ಆತ್ಮಹತ್ಯೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಕಲೇಶಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರು ಪತ್ನಿಯನ್ನೂ ಕರೆಸಿ ವಿಚಾರಣೆ ನಡೆಸಲಿದ್ದಾರೆ.

ಇದನ್ನೂ ಓದಿ : Self Harming : ಇಬ್ಬರು ಹೆಣ್ಮಕ್ಕಳ ಜತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ; ಗಂಡನೇ ಕಿರಾತಕ!

ನೇಣಿನ ಕುಣಿಕೆಯಲ್ಲಿ ನೇತಾಡುತ್ತಿದ್ದ ಸುಂದರಿ: ಆತ್ಮಹತ್ಯೆನಾ? ಕೊಲೆನಾ?

ಶಿವಮೊಗ್ಗ : ಪತಿ ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ನವ ವಿವಾಹಿತೆ ಮೃತದೇಹ (Dead Body Found) ಪತ್ತೆಯಾಗಿದೆ. ಶಿವಮೊಗ್ಗದ (Shivamogga News) ತೀರ್ಥಹಳ್ಳಿ ತಾಲೂಕಿನ ದಾಸನಕೊಡಿಗೆ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಶರ್ಮಿತಾ.ಬಿ.ಯು (24) ಮೃತ ದುರ್ದೈವಿ.

ಶರ್ಮಿತಾಳ ರೂಮಿನ ಬಾಗಿಲು ಮುಚ್ಚಿತ್ತು. ಎಷ್ಟೇ ಬಾಗಿಲು ತಟ್ಟಿದ್ದರೂ ತೆರೆಯದೆ ಇದ್ದಾಗ, ಮನೆಯ ಕೆಲಸದವರು ಕಿಟಕಿಯಿಂದ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಬಿಜ್ಜಳ ಗ್ರಾಮದ ಶರ್ಮಿತಾ 2023ರ ಮಾರ್ಚ್‌ನಲ್ಲಿ ದಾಸನಕೊಡಿಗೆಯ ವಿದ್ಯಾರ್ಥ್‌ ಎಂಬಾತನೊಂದಿಗೆ ವಿವಾಹವಾಗಿದ್ದರು.

ವಿದ್ಯಾರ್ಥ್‌ ಸೋಮೇಶ್ವರ ವನ್ಯಜೀವಿ ಅಭಯಾರಣ್ಯ ವಿಭಾಗದ ಅಮಾವಾಸ್ಯೆಬೈಲು ವಲಯ ಅರಣ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾತ್ರಿ ಪಾಳಿ ಕೆಲಸಕ್ಕೆ ಪತಿ ವಿದ್ಯಾರ್ಥ್‌ ತೆರಳಿದ್ದರು ಎನ್ನಲಾಗಿದೆ. ಶರ್ಮಿತಾಳ ಈ ಸಾವು ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬ ಅನುಮಾನ ಮೂಡಿದೆ.

ಸದ್ಯ ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

Exit mobile version