Site icon Vistara News

Self Harming: ಇನ್‍ಸ್ಟಾಗ್ರಾಂ ಪ್ರೇಯಸಿ ಕೈಕೊಟ್ಟಿದ್ದಕ್ಕೆ ನೇಣಿಗೆ ಶರಣಾದ ಯುವಕ

Self Harming

ರಾಯಚೂರು: ಪ್ರೇಯಸಿ ಕೈಕೊಟ್ಟಿದ್ದಕ್ಕೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ (Self Harming) ಜಿಲ್ಲೆಯ ಮಾನ್ವಿ ಪಟ್ಟಣದ ಜನತಾ ಹೌಸ್‌ನಲ್ಲಿ ನಡೆದಿದೆ. ಮಾನ್ವಿ ನಿವಾಸಿ ವರುಣ್ (26) ಆತ್ಮಹತ್ಯೆ ಮಾಡಿಕೊಂಡ ಯುವಕ. ಮಾವನ ಜತೆ ಪ್ರೇಯಸಿಯ ಮದುವೆ ನಿಶ್ಚಯವಾಗಿದ್ದಕ್ಕೆ ಖಿನ್ನತೆಗೊಳಗಾಗಿದ್ದ ಯುವಕ, ಮನೆಯಲ್ಲಿ ಸೀರೆಯಿಂದ ನೇಣುಬಿಗಿದುಕೊಂಡಿದ್ದಾನೆ.

ಇನ್‌ಸ್ಟಾಗ್ರಾಂ ಮೂಲಕ ವರುಣ್‌ಗೆ ಕೊಪ್ಪಳ ಜಿಲ್ಲೆಯ ಗಂಗಾವತಿ ಮೂಲದ ದೇವಿಕಾ ಎಂಬ ಯುವತಿಯ ಪರಿಚಯವಾಗಿತ್ತು. 5 ವರ್ಷಗಳ ಹಿಂದೆಯೇ ಇನ್‌ಸ್ಟಾಗ್ರಾಂನಲ್ಲಿ ಪ್ರೀತಿ ಅರಳಿತ್ತು. ರಾಯಚೂರಿನಲ್ಲಿ 3 ವರ್ಷಗಳ ಕಾಲ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ದೇವಿಕಾಗೆ, ನಾಲ್ಕೈದು ತಿಂಗಳ ಹಿಂದೆ ಮದುವೆ ನಿಶ್ಚಯವಾಗಿತ್ತು. ಹೀಗಾಗಿ ವರುಣ್‌ನ ಯುವತಿ ದೂರ ಮಾಡಿದ್ದಳು.

ಪ್ರೇಯಸಿ ದೂರವಾಗಿದ್ದರಿಂದ ಮನನೊಂದು ಕೊನೆಯ ಬಾರಿ ಬಾರಿ ವಿಡಿಯೊ ಕಾಲ್ ಮಾಡಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ವರುಣ್ ಶವ ಮಾನ್ವಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ | Helicopter crashed: ನೇಪಾಳದಲ್ಲಿ ಹೆಲಿಕಾಪ್ಟರ್‌ ಪತನ; ನಾಲ್ವರ ದುರ್ಮರಣ

ಕೃಷ್ಣಾ ನದಿ ಹಿನ್ನೀರಿ‌ನಲ್ಲಿ ಮುಳಗಿ ವ್ಯಕ್ತಿ ಸಾವು

ಬಾಗಲಕೋಟೆ: ಕೃಷ್ಣಾ ನದಿ ಹಿನ್ನೀರಿ‌ನಲ್ಲಿ ಮುಳಗಿ ವ್ಯಕ್ತಿ ಮೃತಪಟ್ಟಿರುವುದು ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕಂಕನವಾಡಿಯಲ್ಲಿ ನಡೆದಿದೆ. ಸಂಬಂಧಿಕರ ಅಂತ್ಯಕ್ರಿಯೆಗೆ ತೆರಳಿ ಮನೆಗೆ ವಾಪಸ್ಸಾಗುವ ವೇಳೆ ದುರ್ಘಟನೆ ನಡೆದಿದೆ.

ಈಶ್ವರ ಸಿದ್ದಣ್ಣವರ (65) ಮೃತ ದುರ್ದೈವಿ. ಹಿನ್ನೀರಿನಲ್ಲಿ ಈಜಿಕೊಂಡು ತಮ್ಮ ಮನೆಗೆ ಸೇರಲು ಯತ್ನಿಸಿದಾಗ ವ್ಯಕ್ತಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಬೋಟ್‌ನ ಸಹಾಯದಿಂದ ಈಶ್ವರ ಮೃತದೇಹವನ್ನು ಸ್ಥಳೀಯರು ಹೊರತೆಗೆದಿದ್ದಾರೆ. ಜಮಖಂಡಿ ತಹಸೀಲ್ದಾರ್‌ ಸದಾಶಿವ ಮಕ್ಕೋಜಿ, ಪಿಎಸ್‌ಐ ಗಂಗಾಧರ ಪೂಜಾರಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಜಮಖಂಡಿ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಬೀದಿ ನಾಯಿ ದಾಳಿಯಿಂದ ಬಾಲಕಿಗೆ ಗಂಭೀರ ಗಾಯ

ಕಲಬುರಗಿ: ಬೀದಿ ನಾಯಿ ದಾಳಿಯಿಂದ ಬಾಲಕಿಗೆ ಗಂಭೀರ ಗಾಯಗಳಾಗಿರುವ ಘಟನೆ ಶಹಾಬಾದ್ ಪಟ್ಟಣದಲ್ಲಿ ನಡೆದಿದೆ. ದೀಪಾಲಿ ಗಾಯಾಳು. ಮುಖ, ಕಣ್ಣು ಸೇರಿ ಹಲವು ಭಾಗಗಳಿಗೆ ನಾಯಿ ಕಚ್ಚಿದೆ. ಹೀಗಾಗಿ ಕಲಬುರಗಿ ನಗರದ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದಾಗ ಚಿಕಿತ್ಸೆ ನೀಡಿಲ್ಲ. ಆದ್ದರಿಂದ ಬಾಲಕಿಗೆ ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಶಹಾಬಾದ್‌ನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಿಯಂತ್ರಣ ಮಾಡಲು ಪುರಸಭೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ರಾಣೇಬೆನ್ನೂರಿನಲ್ಲಿ ವಿದ್ಯುತ್ ಶಾಕ್ ಹೊಡೆದು ತಂದೆ ಮಗ-ಸಾವು

Electric Shock

ಹಾವೇರಿ: ವಿದ್ಯುತ್ ಶಾಕ್ ಹೊಡೆದು ತಂದೆ-ಮಗ ಮೃತಪಟ್ಟಿರುವ ಘಟನೆ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಪತ್ತೆಪುರ ಗ್ರಾಮದಲ್ಲಿ ನಡೆದಿದೆ. ಮೋಟಾರ್ ಪಂಪ್‌ಸೆಟ್ ರಿಪೇರಿ ಮಾಡುತ್ತಿದ್ದಾಗ ಅವಘಡ (Electric Shock) ನಡೆದಿದ್ದು, ಸ್ಥಳಕ್ಕೆ ಹೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಇದನ್ನೂ ಓದಿ | Namma Metro: ಆ.6ರಂದು ನಮ್ಮ ಮೆಟ್ರೋದಲ್ಲಿ ದಾಖಲೆ ಸಂಖ್ಯೆಯಲ್ಲಿ ಪ್ರಯಾಣಿಕರ ಓಡಾಟ

ತಂದೆ ಕರಿಬಸಪ್ಪ (45), ಮಗ ದರ್ಶನ್‌ (25) ಮೃತರು. ತುಂಗಭದ್ರ ನದಿ ದಡದಲ್ಲಿ ಹಾಕಿದ್ದ ಪಂಪ್ ಸೆಟ್ ರಿಪೇರಿ ಮಾಡುತ್ತಿದ್ದಾಗ ವಿದ್ಯುತ್ ಶಾಕ್ ಹೊಡೆದು ತಂದೆ-ಮಗ ಮೃತಪಪಟ್ಟಿದ್ದಾರೆ. ಸ್ಥಳಕ್ಕೆ ಹೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version