ಚಾಮರಾಜ ನಗರ : ಅವನ ಊರು ಚಾಮರಾಜ ನಗರ (Chamaraja Nagara News). ಅವಳು ಬೆಂಗಳೂರು. ಅವರಿಬ್ಬರೂ ಬೆಂಗಳೂರಿನ ಒಂದೇ ಕಂಪನಿಯಲ್ಲಿ ಕೆಲಸಕ್ಕಿದ್ದರು. ಅಲ್ಲೇ ಪ್ರೀತಿ ಹುಟ್ಟಿತು, ಮದುವೆಯಾದರು (Love Marriage). ಅದ್ಯಾಕೋ ಏನೋ ಅವನಿಗೆ ಬೆಂಗಳೂರು ಸಾಕು ಅನಿಸಿತು, ಹೆಂಡತಿಯನ್ನು ಕೊಟ್ಟಿಕೊಂಡು ಊರಿಗೆ ಹೋದ. ಆದರೆ ಆಕೆಗೆ ಹಳ್ಳಿ ಜೀವನ (Village life) ಯಾಕೋ ಬೋರ್ ಅನಿಸಿತು. ಆಕೆ ಮತ್ತೆ ಬೆಂಗಳೂರಿಗೆ ಬಂದಳು. ನೀನೂ ಬಾ ಎಂದು ಅವನನ್ನು ಕರೆದಳು. ಅವನು ನೀನೂ ಹಳ್ಳಿಯಲ್ಲೇ ಇರು ಎಂದು ಗೋಗರೆದ. ಅವನ ಮಾತು ಅವನಿಗೆ ಕೇಳಿಸಲಿಲ್ಲ, ಅವಳ ಸಮಸ್ಯೆ ಅವನಿಗೆ ಅರ್ಥವಾಗಲಿಲ್ಲ. ಅಂತಿಮವಾಗಿ ಈಗ ಹೆಂಡ್ತಿ ಹಳ್ಳಿಗೆ ಬರುತ್ತಿಲ್ಲ ಎಂದು ತಾನೇ ನೇಣು ಬಿಗಿದುಕೊಂಡು ಆತ್ಮಹತ್ಯೆ (Young Man ends life) ಮಾಡಿಕೊಂಡಿದ್ದಾನೆ (Self Harming).
ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಚಾಮರಾಜ ನಗರ ಜಿಲ್ಲೆಯ ಹೊನ್ನಹಳ್ಳಿಯ ವಸಂತಕುಮಾರ್ ಎಂದು ಗುರುತಿಸಲಾಗಿದೆ. ವಸಂತ್ ಕುಮಾರ್ ಅವರು ಮೂರು ವರ್ಷದ ಹಿಂದೆ ಬೆಂಗಳೂರಿನಲ್ಲಿ ವಸಂತ ಕುಮಾರ್ ಕೆಲಸ ಮಾಡುತ್ತಿದ್ದಾಗ ಬೆಂಗಳೂರಿನ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದರು.
ಇಬ್ಬರ ಕುಟುಂಬವೂ ಚೆನ್ನಾಗಿಯೇ ಇದೆ. ವಸಂತ ಕುಮಾರ್ ಅವರಿಗೆ ಚಾಮರಾಜನಗರ ಜಿಲ್ಲೆಯ ಹೊನ್ನಹಳ್ಳಿಯಲ್ಲಿ ಮನೆ ಮತ್ತು ಜಮೀನು ಇದೆ. ಹೀಗಾಗಿ, ಬೆಂಗಳೂರಿನ ಕೆಲಸ ಬಿಟ್ಟು ಹಳ್ಳಿಗೆ ಹೋಗಿದ್ದಾರೆ. ಆರಂಭದಲ್ಲಿ ಹೆಂಡತಿ ಕೂಡಾ ಒಪ್ಪಿಕೊಂಡು ಗಂಡನ ಜತೆ ಹಳ್ಳಿಗೆ ಹೋಗಿದ್ದಾರೆ.
ಆದರೆ, ಅಲ್ಲಿ ಕೆಲವು ತಿಂಗಳು ಕಳೆದಾದ ಮೇಲೆ ಹೆಂಡತಿಗೆ ಹಳ್ಳಿ ಜೀವನ ಹಿಡಿಸಿಲ್ಲ. ಹೀಗಾಗಿ ಆಕೆ ಬೆಂಗಳೂರಿಗೆ ವಾಪಸ್ ಬಂದು ತಂದೆ ಮನೆಯಲ್ಲಿ ವಾಸವಾಗಿದ್ದಾರೆ. ಹಾಗಂತ ಸಂಬಂಧವೇನೂ ಹಾಳಾಗಿಲ್ಲ. ಹೆಂಡತಿ ನೀನು ಮತ್ತೆ ಬೆಂಗಳೂರಿಗೆ ಬಾ, ಇಲ್ಲೇ ಕೆಸಲ ಮಾಡೋಣ ಎಂದು ಹೇಳಿದ್ದಾಳೆ. ಆದರೆ, ಸಂತೋಷ್‌ಗೆ ಅದು ಇಷ್ಟವಾಗಿಲ್ಲ.
ಆತ ಪದೇಪದೆ ಹೆಂಡತಿಯನ್ನು ಹೊನ್ನಹಳ್ಳಿಯ ಮನೆಗೆ ಬರುವಂತೆ ಮನವಿ ಮಾಡಿದ್ದ. ಆದರೆ, ಆಕೆಗೂ ಮನಸು ಕರಗಲಿಲ್ಲ. ಹೀಗೆ ಒಬ್ಬಂಟಿಯಾದ ಸಂತೋಷ್, ಹೆಂಡತಿ ಹಳ್ಳಿಗೆ ಬರುತ್ತಿಲ್ಲ ಎಂಬ ಕಾರಣವನ್ನೇ ಮುಂದಿಟ್ಟುಕೊಂಡು ಈಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಯುವ ಮುನ್ನ ಬರೆದಿಟ್ಟ ಡೆತ್ ನೋಟ್‌ನಲ್ಲಿ ಈ ಅಂಶವನ್ನು ಹೇಳಿದ್ದಾನೆ. ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರಿಗೆ ಈ ಡೆತ್ ನೋಟ್ ಸಿಕ್ಕಿದೆ.
ಸಂತೋಷ್ ಕುಮಾರ್ ಮತ್ತು ಹೆಂಡತಿ ಕುಟುಂಬದ ನಡುವೆ ಬೇರೆ ಯಾವ ಭಿನ್ನಾಭಿಪ್ರಾಯಗಳೂ ಇರಲಿಲ್ಲ ಎನ್ನಲಾಗಿದೆ. ಆದರೆ, ಆಕೆಗೆ ಬೆಂಗಳೂರಿನಿಂದ ಅಲ್ಲಿಗೆ ಹೋಗಲು ಇಷ್ಟವಿರಲಿಲ್ಲ ಅಷ್ಟೆ. ಆದರೆ, ಈಗ ಒಬ್ಬ ಯುವಕನ ಜೀವನ ಅನ್ಯಾಯವಾಗಿ ಅಂತ್ಯಗೊಂಡಿದೆ. ಯಾರಾದರೂ ಮುಂದೆ ನಿಂತು ಇಬ್ಬರಲ್ಲಿ ಒಬ್ಬರನ್ನು ಸಮಾಧಾನ ಮಾಡಿದ್ದರೆ, ಅಥವಾ ಇಬ್ಬರಿಗೂ ಮನವರಿಕೆ ಮಾಡಿದ್ದರೆ ಇಂಥ ಕ್ಷುಲ್ಲಕ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುವುದು ತಪ್ಪುತ್ತಿತ್ತು.