Site icon Vistara News

Education Policy : SEP ಅಂದರೆ ಸೋನಿಯಾ ಗಾಂಧಿ ಶಿಕ್ಷಣ ನೀತಿಯೇ? ಡಿಕೆಶಿಗೆ ಬಿ.ಸಿ. ನಾಗೇಶ್‌ ಪ್ರಶ್ನೆ

BC Nagesh question DK Shivakumar about NEP

ಬೆಂಗಳೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಶಿಕ್ಷಣ ನೀತಿ 2020 (National Education Policy 2020) ಅನ್ನು ರಾಜ್ಯದಲ್ಲಿ ರದ್ದು ಮಾಡಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೆ, ಈ ಬಗ್ಗೆ ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ (Former Education Minister BC Nagesh) ಟ್ವೀಟ್‌ (ಎಕ್ಸ್‌ನಲ್ಲಿ ಪೋಸ್ಟ್) ಮಾಡಿ, ಆಕ್ರೋಶವನ್ನು ಹೊರಹಾಕಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ಅವರೇ, ನೀವೀಗ ರಾಜ್ಯದಲ್ಲಿ ಎಸ್‌ಇಪಿ ಮೂಲಕ “ಸೋನಿಯಾ ಶಿಕ್ಷಣ ನೀತಿ”ಯನ್ನು (Sonia Education Policy) ಜಾರಿಗೆ ತರಲು ಹೊರಟಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ರಾಜ್ಯ ಶಿಕ್ಷಣ ನೀತಿಯನ್ನು (State Education Policy) ಬದಲಾಯಿಸಲು ಹೊರಟ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿದ್ದಾರೆ.

ರಾಜ್ಯ ಶಿಕ್ಷಣ ನೀತಿ (State Education Policy – SEP) ಯನ್ನು ರಾಜ್ಯದಲ್ಲಿ ಪ್ರತ್ಯೇಕವಾಗಿ ಜಾರಿಗೆ ತರಲಾಗುತ್ತದೆ. ಇದರಿಂದ ಮಕ್ಕಳಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತದೆ. ಮುಂದಿನ ಶಿಕ್ಷಣ ನೀತಿ ಹೇಗೆ ಇರಬೇಕು ಎಂಬ ನಿಟ್ಟಿನಲ್ಲಿ ಇನ್ನೊಂದು ವಾರದಲ್ಲಿ ಸಮಿತಿಯನ್ನು ರಚನೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ನೇತೃತ್ವದಲ್ಲಿ ನಡೆದಿದ್ದ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳ ಸಭೆಯಲ್ಲಿ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಈ ವರ್ಷ ಮಾತ್ರ ಯಥಾಸ್ಥಿತಿ ಇದ್ದು, ಮುಂದಿನ ವರ್ಷದಿಂದ ರಾಜ್ಯ ಶಿಕ್ಷಣ ನೀತಿಯನ್ನು (SEP) ಜಾರಿಗೆ ತರುವುದಾಗಿ ಘೋಷಣೆ ಮಾಡಲಾಗಿತ್ತು. ಇದಕ್ಕೆ ಈಗ ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸರಣಿ ಟ್ವೀಟ್ ಮೂಲಕ ಆಕ್ರೋಶವನ್ನು ಹೊರಹಾಕಿದ್ದು, ಡಿಸಿಎಂ‌ ಡಿ.ಕೆ. ಶಿವಕುಮಾರ್‌ಗೆ ಆರು ಪ್ರಶ್ನೆಯನ್ನು ಕೇಳಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ನು ರದ್ದುಗೊಳಿಸಿ, ಅಲ್ಪಾವಧಿಯೊಳಗೆ ರಾಜ್ಯಕ್ಕೆ ಪ್ರತ್ಯೇಕ ಶಿಕ್ಷಣ ನೀತಿಯನ್ನು ತರಲು ಪ್ಲ್ಯಾನ್ ಮಾಡುತ್ತಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಒಂದಷ್ಟು ಪ್ರಶ್ನೆಗಳು.

ಇದನ್ನೂ ಓದಿ: Operation Hasta : ಬಂಗಾರಪ್ಪ ಕುಟುಂಬ ಒಂದು ಮಾಡಲು ಡಿಕೆಶಿ ಪ್ಲ್ಯಾನ್!‌ ಕುಮಾರ್‌ಗೆ ಶಿವಮೊಗ್ಗ ಟಿಕೆಟ್?

ಬಿ.ಸಿ. ನಾಗೇಶ್‌ ಕೇಳಿದ ಆರು ಪ್ರಶ್ನೆಗಳು ಇವು

Exit mobile version