Site icon Vistara News

Series Accident | ಯಾದಗಿರಿಯಲ್ಲಿ ಸರಣಿ ಅಪಘಾತ; ಕಾರಿನಲ್ಲಿದ್ದ ನಾಲ್ವರಿಗೆ ಗಂಭೀರ ಗಾಯ

Series Accident

ಯಾದಗಿರಿ: ಜಿಲ್ಲೆಯ ವಡಗೇರಾ ತಾಲೂಕಿನ ಗುರುಸಣಗಿ ಕ್ರಾಸ್ ಬಳಿ ಮಂಗಳವಾರ ಸರಣಿ ಅಪಘಾತ (Series Accident) ನಡೆದಿದ್ದು, ನಾಲ್ವರಿಗೆ ಗಂಭೀರ ಗಾಯಗಳಾಗಿವೆ.

ಮೊದಲಿಗೆ ಮುಖ್ಯರಸ್ತೆಯ ತಿರುವಿನಲ್ಲಿ ಗುರುಸಣಗಿ ಗ್ರಾಮದಿಂದ ಶಹಾಪುರ ಕಡೆ ತೆರಳುತ್ತಿದ್ದ ಕ್ಯಾಂಟರ್‌ಗೆ ಕಾರು ಡಿಕ್ಕಿಯಾಗಿದೆ. ಈ ವೇಳೆ ಪಕ್ಕದಲ್ಲಿ ಸಾಗುತ್ತಿದ್ದ ಟಾಟಾ ಏಸ್‌ ಮೇಲೆ ಕ್ಯಾಂಟರ್‌ ಉರುಳಿಬಿದ್ದಿದೆ. ಇದರಿಂದ ಪಕ್ಕದಲ್ಲಿ ಸಾಗುತ್ತಿದ್ದ ಎರಡು ದ್ವಿಚಕ್ರ ವಾಹನಗಳಿಗೆ ಟಾಟಾ ಏಸ್‌ ಹಾಗೂ ಕ್ಯಾಂಟರ್‌ ಡಿಕ್ಕಿಯಾಗಿವೆ. ಹೀಗಾಗಿ ಕಾರಿನಲ್ಲಿದ್ದ ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದ ರಭಸಕ್ಕೆ ಕಾರು ಭಾಗಶಃ ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ಟಾಟಾ ಏಸ್‌ ಹಾಗೂ ಬೈಕ್‌ಗಳು ಜಖಂಗೊಂಡಿವೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Suicide Case | ಕೃಷಿ ಹೊಂಡದಲ್ಲಿ ಯುವಕನ ಶವ; 1 ದಿನ ಕಳೆದರೂ ಮೃತದೇಹ ಮೇಲೆತ್ತಲು ಪೊಲೀಸರ ಮೀನಮೇಷ

Exit mobile version