ಬೆಂಗಳೂರು: ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ರಾಜ್ಯ ಧಾರ್ಮಿಕ ಪರಿಷತ್‌ನ ಪ್ರಥಮ ಸಭೆ ವಿಧಾನಸೌಧದಲ್ಲಿ ಶುಕ್ರವಾರ ನಡೆಯಿತು. ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ರಚನೆ, ಅರ್ಚಕರ ಖಾತೆಗೆ ತಸ್ತೀಕ್ ಹಣ ವರ್ಗಾವಣೆ, ಶಿವಾರಪಟ್ಟಣ, ಕೋಲಾರದಲ್ಲಿ ಶಿಲ್ಪಕಲಾ ತರಬೇತಿ ಕೇಂದ್ರ ಸ್ಥಾಪನೆ, ಮೃತ ಅರ್ಚಕರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ನೀಡುವುದು ಸೇರಿ ಹಲವು ಮಹತ್ವದ ನಿರ್ಧಾರಗಳನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ.
ಮುಜರಾಯಿ ಇಲಾಖೆ ಆಯುಕ್ತರು, ಅರ್ಚಕರ ಒಕ್ಕೂಟದ ಜತೆ ಸಚಿವರು ಸಭೆ ನಡೆಸಿದ್ದು, ಅರ್ಚಕರ ಹಲವು ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ.
ಸಭೆಯಲ್ಲಿ ಕೈಗೊಂಡ ಮಹತ್ವದ ನಿರ್ಧಾರಗಳು
- 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ನೇರ ದರ್ಶನ
- ಕಾಶಿಯಾತ್ರೆಗೆ 5 ಸಾವಿರ ರೂ. ಇದ್ದ ಸಹಾಯಧನ 7,500ಕ್ಕೆ ಏರಿಕೆ
- ಕಾಶಿಯಾತ್ರೆ, ಚಾರ್ ಧಾಮ್, ಮಾನಸ ಸರೋವರ ಯಾತ್ರೆಗೆ ಮೊಬೈಲ್ ಆ್ಯಪ್ ಅಭಿವೃದ್ಧಿ
- ದೇವಸ್ಥಾನಗಳ ಅಭಿವೃದ್ಧಿಗೆ ವಿಷನ್ ಗ್ರೂಪ್ ರಚನೆಗೆ ಪ್ಲ್ಯಾನ್
- ಪ್ರಮುಖ ದೇಗುಲಗಳಲ್ಲಿ ಮಕ್ಕಳಿಗೆ ಹಾಲುಣಿಸಲು ಪ್ರತ್ಯೇಕ ಕೊಠಡಿ
- ದೇಗುಲಗಳ ಆದಾಯವನ್ನ ದೇಗುಲದ ಅಭಿವೃದ್ದಿಗೆ ಮೀಸಲು
- ವಾಸ್ತುಶಿಲ್ಪ ಸಮಿತಿ ಪುನರ್ ರಚನೆಗೆ ಪ್ಲಾನ್
- ಧಾರ್ಮಿಕ ದತ್ತಿ ಇಲಾಖೆಯ ದೇವಾಲಯಗಳ ಮಾಹಿತಿಯನ್ನ ಒದಗಿಸಲು ಕಾಲ್ ಸೆಂಟರ್ ವ್ಯವಸ್ಥೆ
- ಡಿಸೆಂಬರ್ಗೆ ಕೊನೆಯಾಗುವ ದೇಗುಲಗಳ ವ್ಯವಸ್ಥಾಪನ ಸಮಿತಿಗೆ ಸದಸ್ಯರ ನೇಮಕಕ್ಕೆ ಪ್ಲ್ಯಾನ್
- ಮೃತ ಅರ್ಚಕರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ
- ದೇಗುಲಗಳ ಅರ್ಚಕರು, ಸಿಬ್ಬಂದಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿ ಸೇವೆ
- ಧಾರ್ಮಿಕ ದತ್ತಿ ವ್ಯಾಪ್ತಿಯ ಬಿ ಮತ್ತು ಸಿ ವರ್ಗದ 1200 ಸಿಬ್ಬಂದಿಗೆ ಪ್ರತಿ ವರ್ಷ ಉಚಿತ ಕಾಶಿಯಾತ್ರೆ
- ಬಿ, ಸಿ ವರ್ಗದ ದೇಗುಲ ಅರ್ಚಕರು, ನೌಕರರ ಮಕ್ಕಳಿಗೆ ಸಹಾಯಧನ ನೀಡುವುದು
- ರಾಜ್ಯ ಧಾರ್ಮಿಕ ಪರಿಷತ್‌ನ ಸದಸ್ಯರಿಗೆ ಐಡಿ ಕಾರ್ಡ್ ವಿತರಣೆ
ಇದನ್ನೂ ಓದಿ | Load Shedding: ರೈತರಿಗೆ ಕನಿಷ್ಠ 5 ಗಂಟೆ ನಿರಂತರ ವಿದ್ಯುತ್ ಪೂರೈಸಿ: ಎಸ್ಕಾಂ ಎಂ.ಡಿ.ಗಳಿಗೆ ಸಿಎಂ ಖಡಕ್ ಸೂಚನೆ
ದಸರಾ ಹಿನ್ನೆಲೆ 2000 ಹೆಚ್ಚುವರಿ ಬಸ್ ನಿಯೋಜನೆ
ದಸರಾ ಹಬ್ಬದ ಹಿನ್ನೆಲೆ ರಾಜ್ಯದ ವಿವಿಧ ಕಡೆ ಸಂಚಾರಕಕ್ಕೆ ಪ್ರಯಾಣಿಕರಿಗೆ ಅನುಕೂಲವಾಗಲು ಕೆಎಸ್‌ಆರ್‌ಟಿಸಿಯಿಂದ 2000 ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಲಾಗಿದೆ. ವಿಶೇಷವಾಗಿ ಮೈಸೂರಿನಲ್ಲಿ ದಸರಾ ವೀಕ್ಷಿಸಲು ತೆರಳುವವರಿಗಾಗಿ 600 ಬಸ್ ವ್ಯವಸ್ಥೆ ಮಾಡಲಾಗಿದೆ.
ಅಕ್ಟೋಬರ್ 20ರಿಂದ 26ರವರೆಗೆ ಬೆಂಗಳೂರಿನಿಂದ ರಾಜ್ಯದ ಮತ್ತು ನೆರೆ ರಾಜ್ಯಗಳ ವಿವಿಧ ಸ್ಥಳಗಳಿಗೆ ನಿಗಮದಿಂದ ಹೆಚ್ಚುವರಿ ಬಸ್ ಸೇವೆ ಇರಲಿದೆ. ಅದೇ ರೀತಿ ಅ. 24ರಿಂದ 29ರವರೆಗೆ ರಾಜ್ಯದ ಮತ್ತು ನೆರೆರಾಜ್ಯಗಳಿಂದ ಬೆಂಗಳೂರಿಗೆ ಹೆಚ್ಚುವರಿ ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ.
ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣ ಹಾಗೂ ಶಾಂತಿನಗರ ಬಸ್ ನಿಲ್ದಾಣದಿಂದ ಹೆಚ್ಚಿನ ಬಸ್ ಸೇವೆ ಇರಲಿದೆ. ಜತೆಗೆ ಮಂಗಳೂರು, ಮಡಿಕೇರಿ, ಶಿವಮೊಗ್ಗ, ದಾವಣಗೆರೆ, ಗೋಕರ್ಣ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚುವರಿ ಬಸ್ ಸೇವೆ ಒದಗಿಸಲಾಗಿದೆ.
ಇದನ್ನೂ ಓದಿ | World Egg Day: ಪಶು ವೈದ್ಯಕೀಯ ಕಾಲೇಜುಗಳ ಸಮಸ್ಯೆಗಳಿಗೆ ಶೀಘ್ರ ಪರಿಹಾರ: ಡಿಕೆಶಿ
ಚೆನ್ನೈ, ಊಟಿ, ಕೊಡೈಕೆನಾಲ್, ಮಧುರೈ, ಪಣಜಿ ಸೇರಿ ನೆರೆ ರಾಜ್ಯದ ಸ್ಥಳಗಳಿಗೂ ರಾಜ್ಯದಿಂದ ಹೆಚ್ಚುವರಿ ಬಸ್ ಸೇವೆ ಒದಗಿಸಲು ನಿಗಮ ಕ್ರಮ ಕೈಗೊಂಡಿದೆ. ಜತೆಗೆ ಒಂದೇ ಬಾರಿಗೆ 4ಕ್ಕಿಂತ ಹೆಚ್ಚಿನ ಟಿಕೆಟ್ ಖರೀದಿಸಿದರೆ ಶೇ. 5 ರಿಯಾಯಿತಿ, ಹೋಗುವ & ಬರುವ ಟಿಕೆಟ್ ಒಟ್ಟಿಗೆ ಕಾಯ್ದಿರಿಸಿದರೆ ಶೇ. 10 ರಿಯಾಯಿತಿಯನ್ನು ನೀಡಲಾಗಿದೆ.