ರಾಯಚೂರು: ಕೊಟ್ಟಿಗೆಯಲ್ಲಿ ಮಲಗಿದ್ದ ಆಕಳ ಕರುವಿನ ಮೇಲೆಯೇ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ ಅತ್ಯಂತ ಅಮಾನುಷ, ಅಮಾನವೀಯ ಘಟನೆ ನಡೆದಿದೆ. ಭಾನುವಾರ ಯಾರೂ ಇಲ್ಲದ ಹೊತ್ತು ಸಾಧಿಸಿ ತನ್ನ ವಿಕೃತಿಯನ್ನು (Sexual assault on cow) ಮೆರೆದಿದ್ದಾನೆ. ಗೋವುಗಳ ಮಾಲೀಕನ ಕೈಗೇ ನೇರವಾಗಿ ಸಿಕ್ಕಬಿದ್ದಿದ್ದಾನೆ. ಈ ಹಿಂದೆ ಈತ ಎಷ್ಟು ಬಾರಿ ಈ ರೀತಿ ವಿಕೃತಿ ಮೆರೆದಿದ್ದಾನೆ ಎನ್ನುವುದು ಪೊಲೀಸ್ ತನಿಖೆಯಲ್ಲಿ ಬಯಲಾಗಬೇಕಾಗಿದೆ.
ಈ ರೀತಿ ನಿಸರ್ಗ ವಿರೋಧಿಯಾಗಿ, ಮಾನವ ವಿರೋಧಿ ನಡವಳಿಕೆಯನ್ನು ಪ್ರದರ್ಶಿಸಿದವನು ಇಮ್ತಿಯಾಜ್ (೨೪) ಎಂಬ ವಿಕೃತ ಕಾಮುಕ. ರಾಯಚೂರಿನ ಕಸಬಾ ಲಿಂಗಸಗೂರು ಗ್ರಾಮದಲ್ಲಿ ಈ ಹೇಯ ಘಟನೆ ನಡೆದಿದೆ.
ಲಿಂಗಸಗೂರು ಗ್ರಾಮದ ಅಮರೇಶ (೨೨) ಎಂಬವರಿಗೆ ಗ್ರಾಮದ ಅಮೀನ ದರ್ಗಾದ ಪಕ್ಕದಲ್ಲಿ ಹೊಲವಿದೆ. ಅಮರೇಶ ಅವರು ತಮ್ಮ ಹೊಲದಲ್ಲೇ ಒಂದು ಕೊಟ್ಟಿಗೆಯನ್ನು ಕಟ್ಟಿಕೊಂಡು ಅಲ್ಲಿ ಏಳೆಂಟು ದನವನ್ನು ಸಾಕುತ್ತಿದ್ದರು. ಅವರು ಬಹುತೇಕ ಇಡೀ ದಿನ ಅಲ್ಲೇ ಇರುತ್ತಿದ್ದು, ಊಟ ಮತ್ತು ಸ್ನಾನ ಶೌಚಾದಿಗಳಿಗಷ್ಟೇ ಮನೆಗೆ ಹೋಗುತ್ತಿದ್ದರು. ರಾತ್ರಿ ಕೂಡಾ ಅಲ್ಲೇ ಮಲಗುತ್ತಿದ್ದರು.
ಡಿಸೆಂಬರ್ ೩೧ರ ರಾತ್ರಿಯೂ ಅಲ್ಲೇ ಮಲಗಿದ್ದ ಅಮರೇಶ ಅವರು ಬೆಳಗ್ಗಿನ ಜಾವ ದನಗಳಿಗೆ ಆಹಾರ ನೀಡಿ, ಸ್ನಾನ ಮತ್ತು ತಿಂಡಿ ಮಾಡಿಕೊಂಡಿಕೊಂಡು ಬರಲೆಂದು ಮನೆಗೆ ತೆರಳಿದ್ದರು. ಹಾಗೆ ತೆರಳಿದವರು ಬೆಳಗ್ಗೆ ೭.೩೦ರ ಹೊತ್ತಿಗೆ ಮರಳಿ ಬಂದಿದ್ದಾರೆ.
ಬಂದು ನೋಡುವ ವೇಳೆ ಇಮ್ತಿಯಾಜ್ ಒಂದು ಆಕಳ ಕರುವನ್ನು ನೆಲಕ್ಕೆ ಕೆಡವಿ ಅದರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವುದು ಕಂಡುಬಂತು. ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ ಸ್ಥಿತಿಯಲ್ಲೇ ಅದರ ಕೈ ಕಾಲುಗಳನ್ನೂ ಕಟ್ಟಿ ಹಾಕಿದ ದೌರ್ಜನ್ಯ ನಡೆಸುತ್ತಿರುವುದು ಕಂಡಿತು.
ಇಮ್ತಿಯಾಜ್ ನ ಪೈಶಾಚಿಕ ಕೃತ್ಯ ಕಣ್ಣಾರೆ ಕಂಡ ಅಮರೇಶ ಕೂಡಲೇ ಆತನನ್ನು ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿ ದೂರು ನೀಡಿದ್ದಾರೆ. ಲಿಂಗಸಗೂರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಕೆಯಾಗಿದೆ. ಸೆಕ್ಷನ್ 377ರ ಅಡಿ ಅನೈಸರ್ಗಿಕ ಲೈಂಗಿಕ ಸಂಬಂಧದ ಕಾಲಂನಡಿಯಲ್ಲಿ ಇಮ್ತಿಯಾಜ್ ಮೇಲೆ ಪ್ರಕರಣ ದಾಖಲಾಗಿದೆ. ರಿಕ್ಷಾ ಚಾಲಕನಾಗಿರುವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ | ವಿಕೃತ ಕಾಮಿಯ ದೌರ್ಜನ್ಯಕ್ಕೆ ನರಳಿದ ಹಸು; ಕೂಗು ಕೇಳಿ ಹೋದ ಮಾಲೀಕ ದೃಶ್ಯ ನೋಡಿ ಬೆಚ್ಚಿ ನಿಂತಿದ್ದ !