Site icon Vistara News

Husband Harassment | ಪಾರ್ಟಿ ಮಾಡಿ ಗೆಳೆಯರ ಜತೆ ಮಲಗು ಎಂದು ಪತ್ನಿಗೆ ಪೀಡಿಸುತ್ತಿದ್ದ ಸೈಕೋಪಾಥ್‌! ವಿಡಿಯೊ ಮಾಡಿ ವಿಕೃತಿ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲೊಬ್ಬ ಸೈಕೋಪಾಥ್ ಮಾದಕವ್ಯಸನಿ ಪತಿ, ಗೆಳೆಯರೊಂದಿಗೆ ಪಾರ್ಟಿ ಮಾಡಿ ಅವರೊಂದಿಗೆ ಹಾಸಿಗೆಯನ್ನು ಹಂಚಿಕೋ (ಬೆಡ್‌ ಶೇರ್‌) ಎಂದು ಪತ್ನಿಗೆ ಕಿರುಕುಳ ನೀಡಿರುವ (Husband Harassment) ಘಟನೆ ನಡೆದಿದೆ. ಸ್ನೇಹಿತರೊಂದಿಗೆ ಬೆಡ್‌ ಶೇರಿಂಗ್‌ ಮಾಡಿರುವ ವಿಡಿಯೊವನ್ನು ಚಿತ್ರಿಕರಿಸಿದ್ದಲ್ಲದೇ ಬ್ಲಾಕ್‌ಮೇಲ್‌ ಮಾಡಿ ವಿಕೃತಿ ಮೆರೆದಿದ್ದಾನೆ.

ಸಂಪಿಗೆಹಳ್ಳಿ ನಿವಾಸಿ ಜಾನ್ ಪಾಲ್ ಎಂಬ ಸೈಕೋ 2011ರಲ್ಲಿ ಟೆಕ್ಕಿಯೊಬ್ಬರನ್ನು ವಿವಾಹವಾಗಿದ್ದ. ಮೊದಮೊದಲು ಸಭ್ಯನಂತೆ ವರ್ತಿಸಿದ್ದ ಜಾನ್‌, 2015ರ ನಂತರ ತನ್ನ ವಿಕೃತಿ ತೋರಿಸಲು ಶುರು ಮಾಡಿದ್ದ. ಮನೆಗೆ ತನ್ನ ಗೆಳೆಯರನ್ನು ಕರೆದು ಪಾರ್ಟಿ ಮಾಡಿ ಬಳಿಕ ಬೆಡ್ ಶೇರ್ ಮಾಡು ಎಂದು ಪೀಡುಸುತ್ತಾ, ಹಲ್ಲೆ ನಡೆಸುತ್ತಿದ್ದ ಎಂದು ನೊಂದ ಪತ್ನಿ ಆರೋಪಿಸಿದ್ದಾರೆ.

ಪತಿಯ ಕಿರುಕುಳ ತಾಳಲಾರದೇ ನೊಂದ ಆಕೆ ಆತನ ಗೆಳೆಯರಾದ ಸಜೀಶ್ ಹಾಗೂ ನಾಜಿ ಎಂಬಿಬ್ಬರೊಂದಿಗೆ ದೈಹಿಕ ಸಂಪರ್ಕಕ್ಕೆ ಒಪ್ಪಿದ್ದಾಳೆ. ಈ ವೇಳೆ ಸೈಕೋ ಪತಿ ಪತ್ನಿಯ ಖಾಸಗಿ ವಿಡಿಯೊ, ಫೋಟೊವನ್ನು ಚಿತ್ರೀಕರಣ ಮಾಡಿಕೊಂಡಿದ್ದಾನೆ. ಪತ್ನಿಯ ಮೇಲೆ ವಿಕೃತಿ ಮೆರೆದಿದ್ದು ಸಾಲದು ಎಂಬಂತೆ ಪತ್ನಿಯ ತಂಗಿಗೂ ಕಿರುಕುಳ ನೀಡಿದ್ದು, ತನ್ನ ಜತೆಗೆ ದೈಹಿಕ ಸಂಪರ್ಕ ಬೆಳೆಸುವಂತೆ ಒತ್ತಾಯಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮನೆಯಲ್ಲಿಯೇ ಗಾಂಜಾ ಬೆಳೆದಿದ್ದ ಸೈಕೋ
ಗಂಡನ ಕಿರುಕುಳಕ್ಕೆ ಬೇಸತ್ತ ನೊಂದ ಗೃಹಿಣಿ ವಿಚ್ಚೇಧನ ನೀಡಲು ಮುಂದಾಗಿದ್ದು, ಈ ವೇಳೆ ಗೆಳೆಯರೊಂದಿಗಿನ ಅಶ್ಲೀಲ ಫೋಟೊ ಹಾಗೂ ವಿಡಿಯೊವನ್ನು ವೈರಲ್ ಮಾಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದನಂತೆ. ಸೈಕೋಪಾಥ್ ಜಾನ್ ಪಾಲ್ ಗಾಂಜಾ ವ್ಯಸನಿಯಾಗಿದ್ದು, ಮನೆಯಲ್ಲಿಯೇ ಗಾಂಜಾ ಸಸಿಗಳನ್ನು ಪಾಟ್‌ಗಳಲ್ಲಿ ಬೆಳೆದಿದ್ದಾನೆಂದು ಹೇಳಲಾಗಿದೆ. ಈತನ ಕಿರುಕುಳ ತಾಳಲಾರದೆ ನೊಂದ ಪತ್ನಿ ಸಂಪಿಗೆಹಳ್ಳಿ ಠಾಣೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದು, ದೂರಿನನ್ವಯ ಲೈಂಗಿಕ ಕಿರುಕುಳ, ಎನ್.ಡಿ.ಪಿ.ಎಸ್ ಹಾಗೂ ಐಟಿ ಕಾಯ್ದೆ ಅಡಿ ಕೇಸ್ ದಾಖಲಾಗಿದೆ.

ಇದನ್ನೂ ಓದಿ | Viral Video| ಮನೆಗೇ ನುಗ್ಗಿ ಯುವತಿಯನ್ನು ಅಪಹರಿಸಿಕೊಂಡು ಹೋದ 100 ಮಂದಿ ಯುವಕರು; ಅಡ್ಡಬಂದವರಿಗೆಲ್ಲ ಥಳಿತ

Exit mobile version