Site icon Vistara News

ಶಾಮನೂರು ಮೊಮ್ಮಗಳ ಜತೆ ಎಂ.ಬಿ. ಪಾಟೀಲ್‌ ಪುತ್ರನ ವಿವಾಹ; ಗಣ್ಯರ ಸಮಾಗಮ

Basan and Akhilas wedding

ಬೆಂಗಳೂರು: ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್‌ (MB Patil) ಮತ್ತು ಆಶಾ ಅವರ ಜ್ಯೇಷ್ಠ ಪುತ್ರ ಬಸನ್ ಮತ್ತು ಕಾಂಗ್ರೆಸ್‌ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗಳು ಅಖಿಲಾ ಅವರ ವಿವಾಹವು ನಗರದ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಗುರುವಾರ ಶಾಸ್ತ್ರೋಕ್ತ, ಅದ್ಧೂರಿಯಾಗಿ ನೆರವೇರಿತು. ಅಖಿಲಾ ಅವರು ಶಾಮನೂರು ಪುತ್ರ ಎಸ್.ಎಸ್. ಗಣೇಶ್ ಮತ್ತು ರೇಖಾ ದಂಪತಿಯ ಪುತ್ರಿಯಾಗಿದ್ದಾರೆ. ಕುಟುಂಬದ ಹಿರಿಯರು ಮತ್ತು ಬಂಧುಗಳ ಸಮ್ಮುಖದಲ್ಲಿ ವಿವಾಹ ಮಹೋತ್ಸವವು (marriage) ನೆರವೇರಿತು. ವಿವಾಹ ಜೀವನಕ್ಕ ಕಾಲಿಟ್ಟ ನವ ದಂಪತಿ ಬಸನ್-ಅಖಿಲಾಗೆ ರಾಜಕೀಯ ನಾಯಕರು, ಗಣ್ಯರು ಶುಭ ಹಾರೈಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮಹಾರಾಷ್ಟ್ರದ ಮಾಜಿ ಸಿಎಂ ಸುಶೀಲ್ ಕುಮಾರ್ ಶಿಂಧೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಸಚಿವರಾದ ರಾಮಲಿಂಗಾರೆಡ್ಡಿ, ಚಲುವರಾಯಸ್ವಾಮಿ, ಕೃಷ್ಣಬೈರೇಗೌಡ, ಮಧು ಬಂಗಾರಪ್ಪ, ದರ್ಶನಾಪುರ, ಶಿವಾನಂದಪಾಟೀಲ, ದಿನೇಶ್‌ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ಶರಣ ಪ್ರಕಾಶ ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್, ಶಾಸಕರಾದ ಎಚ್.ಡಿ. ರೇವಣ್ಣ, ಕೋಟಾ ಶ್ರೀನಿವಾಸಪೂಜಾರಿ ಬಸನಗೌಡ ಪಾಟೀಲ್ ಯತ್ನಾಳ, ಮಂಜುನಾಥ ಭಂಡಾರಿ, ಸಂಸದರಾದ ಪಿ.ಸಿ.ಮೋಹನ್, ರಮೇಶ ಜಿಗಜಿಣಗಿ ಸೇರಿದಂತೆ ಸರ್ವಪಕ್ಷಗಳ ಶಾಸಕರು, ಸಂಸದರು, ಮುಖಂಡರು ವಧು-ವರರನ್ನು ಆಶೀರ್ವದಿಸಿ ಶುಭ ಕೋರಿದರು.

ಇದನ್ನೂ ಓದಿ | Fashion Show: ಕೇರಳದ ಬ್ರೈಡಲ್‌ ಫ್ಯಾಷನ್‌ ವೀಕ್‌ನಲ್ಲಿ ಕನ್ನಡತಿ ಚಂದನಾ ಶೋ ಸ್ಟಾಪರ್‌ ವಾಕ್

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version