ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಪ್ರತಿಷ್ಠಿತ ಕ್ಷೇತ್ರವಾಗಿರುವ ಶಾಂತಿನಗರದಲ್ಲಿ ಕಾಂಗ್ರೆಸ್‌ನ ಎನ್. ಎ ಹ್ಯಾರಿಸ್ (61030) ಗೆಲುವು ಸಾಧಿಸಿದ್ದಾರೆ. ಅವರ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಕೆ. ಶಿವಕುಮಾರ್ (53905) ಅವರನ್ನು ಸೋಲಿಸಿದ್ದಾರೆ. 2018ರ ಚುನಾವಣೆಯಲ್ಲಿ 60,009 ಮತ ಪಡೆಯುವ ಮೂಲಕ ಕಾಂಗ್ರೆಸ್‌ನ ಎನ್ ಎ ಹ್ಯಾರಿಸ್ ಶಾಂತಿನಗರದಲ್ಲಿ ಹ್ಯಾಟ್ರಿಕ್ ಗೆಲವು ಸಾಧಿಸಿದ್ದರು. ಜೆಡಿಎಸ್‌ನಿಂದ ಬಿಜೆಪಿ ಸೇರಿ ಸ್ಪರ್ಧಿಸಿದ್ದ ಕೆ ವಾಸುದೇವಮೂರ್ತಿ 41,804 ಮತ ಪಡೆದು ಎರಡನೇ ಪಡೆದುಕೊಂಡಿದ್ದರು.
ಶಾಂತಿನಗರದಲ್ಲಿ ಒಟ್ಟು ಮತದಾರರು 2,25,000ರಷ್ಟಿದ್ದು, ಮುಸ್ಲಿಮರೇ 45,000 ಇದ್ದಾರೆ. ತಮಿಳರುರ 35,000, ಇನ್ನು ಕುರುಬ 25,000, ಎಸ್‌ಸಿ-ಎಸ್‌ಟಿ 20,000, ತೆಲುಗು ಭಾಷಿಕರು 20000, ಮಲೆಯಾಳಿ ಭಾಷಿಕರು 15000 ಇದ್ದಾರೆ. ಇನ್ನು ಬ್ರಾಹ್ಮಣ 15,000, ಲಿಂಗಾಯತ 8,000, ದೇವಾಂಗ 4000 ಹಾಗೂ ಒಕ್ಕಲಿಗ ಸಮುದಾಯದವರು 3,000ದಷ್ಟಿದ್ದಾರೆ.
1967ರಲ್ಲಿ ರಚನೆಯಾದ ಶಾಂತಿನಗರದಲ್ಲಿ ಇಲ್ಲಿಯವರೆಗೆ ನಡೆದಿರುವ 12 ವಿಧಾನಸಭೆ ಚುನಾವಣೆಗಳ ಪೈಕಿ ಕಾಂಗ್ರೆಸ್ ಒಂಬತ್ತು ಬಾರಿ ಗೆಲುವು ಸಾಧಿಸಿದೆ. ಜನತಾ ಪಾರ್ಟಿ, ಜನತಾ ದಳ ಹಾಗೂ ಬಿಜೆಪಿ ತಲಾ ಒಂದು ಅವಧಿಗೆ ಗೆಲುವು ಕಂಡಿವೆ. ಸದ್ಯ ಕಾಂಗ್ರೆಸ್‌ನ ಎನ್ ಎ ಹ್ಯಾರಿಸ್ ಕ್ಷೇತ್ರದ ಹಾಲಿ ಶಾಸಕರಾಗಿದ್ದು, ಸತತ ಮೂರು ಅವಧಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಕಾಂಗ್ರೆಸ್ಸಿನ ಭದ್ರಕೋಟೆಯಾಗಿ ಶಾಂತಿನಗರ ಗುರುತಿಸಿಕೊಂಡಿದೆ.
Read maore: Kundapura Election Results: ಕುಂದಾಪುರದಲ್ಲಿ ಹಾಲಾಡಿ ಶಿಷ್ಯ ಕಿರಣ್ ಕೊಡ್ಗಿ ಜಯಭೇರಿ