Site icon Vistara News

Rahul Gandhi : ಭಾರತ್‌ ಜೋಡೊ ವೇಳೆ ರಾಹುಲ್‌ಗೆ ಸೌತೆ ಕಾಯಿ ನೀಡಿದ್ದ ಶಾರದಮ್ಮ ಇನ್ನಿಲ್ಲ

Rahul Gandhi Sharadamma

ತುಮಕೂರು: ಭಾರಿ ಸುದ್ದಿ ಮಾಡಿದ್ದ ಭಾರತ್‌ ಜೋಡೋ ಯಾತ್ರೆ (Bharat Jodo yatre) ವೇಳೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರಿಗೆ ಸೌತೆ ಕಾಯಿ (Cucumber) ನೀಡಿ ಸಂತೈಸಿದ್ದ ಚಿಕ್ಕನಾಯಕನಹಳ್ಳಿಯ ಶಾರದಮ್ಮ (78) ಇನ್ನಿಲ್ಲ. (Sharadamma No More) ಬೀದಿ ಬದಿ ವ್ಯಾಪಾರಿಯಾಗಿದ್ದ ಶಾರದಮ್ಮ ಅವರು ವಯೋಸಹಜ ಆರೋಗ್ಯ ಸಮಸ್ಯೆಯಿಂದ ಮೃತಪಟ್ಟಿದ್ದಾರೆ.

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ರಾಹುಲ್‌ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್‌ ಜೋಡೋ ಕಾಲ್ನಡಿಗೆ ಯಾತ್ರೆ ನಡೆಸಿದ್ದರು. ರಾಜ್ಯದಲ್ಲಿ ಹಲವು ದಿನಗಳ ಕಾಲ ನಡೆದಿತ್ತು. ಈ ವೇಳೆ ಯಾತ್ರೆ ತುಮಕೂರನ್ನು ಕೂಡಾ ಹಾದುಹೋಗಿತ್ತು.

ಶಾರದಮ್ಮ ಅವರಿಗೆ ರಾಹುಲ್‌ ಗಾಂಧಿ ಜತೆಗಿನ ಫೋಟೊ ನೀಡಿ ಗೌರವಿಸಿದ ಕ್ಷಣ

ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿಯಲ್ಲಿ ಭಾರತ್‌ ಜೋಡೋ ಯಾತ್ರೆ ಸಾಗುತ್ತಿದ್ದಾಗ ಶಾರದಮ್ಮ ಅವರು ರಾಹುಲ್‌ ಗಾಂಧಿಗೆ ಸೌತೆಕಾಯಿ ನೀಡಿದ್ದರು. ಇದು ದಣಿದ ರಾಹುಲ್‌ಗೆ ಭಾರಿ ಸಾಂತ್ವನ ನೀಡಿತ್ತು. ರಾಹುಲ್‌ ಅವರು ಅಜ್ಜಿಯ ಕೈಯಿಂದ ಸೌತೆ ಕಾಯಿ ಸ್ವೀಕರಿಸಿ ತುಂಬ ಖುಷಿಪಟ್ಟಿದ್ದರು. ಶಾರದಮ್ಮ ಅವರನ್ನು ತಬ್ಬಿಕೊಂಡಿದ್ದರು.

ರಾಹುಲ್‌ ಗಾಂಧಿ ಅವರ ಜತೆ ಮಾತನಾಡಿದ್ದ ಶಾರದಮ್ಮ ʻನಿನ್ನ ಅಜ್ಜಿ ಅಂದರೆ ನನಗೆ ಇಷ್ಟ. ಅವರಿಂದಾಗಿ ನಾವು ಬದುಕು ಕಟ್ಟಿಕೊಂಡೆವುʼ ಎಂದು ಇಂದಿರಾ ಗಾಂಧಿಯನ್ನು ಹೊಗಳಿದ್ದರು. ಇದರಿಂದ ರಾಹುಲ್‌ ಗಾಂಧಿಗೆ ಭಾರಿ ಸಂತೋಷವಾಗಿತ್ತು.

ಶಾರದಮ್ಮ ಅವರ ಮೃತದೇಹ

ಈ ಘಟನೆಯ ಬಳಿಕ ಶಾರದಮ್ಮ ಅವರು ಬದುಕೇನೂ ಬದಲಾಗಲಿಲ್ಲವಾದರೂ ಸಾಕಷ್ಟು ಜನಪ್ರಿಯತೆ ಬಂದಿತ್ತು. ಎಲ್ಲರೂ ರಾಹುಲ್‌ ಗಾಂಧಿ ಜತೆಗಿನ ಭೇಟಿಯನ್ನು ನೆನಪು ಮಾಡುತ್ತಿದ್ದರು.

ಇದನ್ನೂ ಓದಿ : Rahul Gandhi: ದೊಡ್ಡಪ್ಪ ರಾಹುಲ್‌ ಗಾಂಧಿಯನ್ನು ಭೇಟಿಯಾದ ವರುಣ್ ಪುತ್ರಿ!

ಶಾರದಮ್ಮ ಅವರು ವಯೋ ಸಹಜ ಅನಾರೋಗ್ಯದಿಂದ ಸೋಮವಾರ ಶಾರದಮ್ಮ ನಿಧನರಾಗಿದ್ದಾರೆ. ಅವರ ಮನೆಗೆ ಊರಿನ ಗಣ್ಯರು, ಕಾಂಗ್ರೆಸ್‌ ನಾಯಕರು ಭೇಟಿ ನೀಡಿ ಗೌರವ ಸಲ್ಲಿಸಿದ್ದಾರೆ.

ಶಾರದಮ್ಮ ಅವರಿಗೆ ಸ್ಥಳೀಯ ಗಣ್ಯರಿಂದ ಅಂತಿಮ ನಮನ
Exit mobile version