Site icon Vistara News

Arishina Gundi Falls: ಚೆಕ್ ಪೋಸ್ಟ್ ತಪ್ಪಿಸಿ ಅರಿಶಿನಗುಂಡಿ ಫಾಲ್ಸ್‌ಗೆ ಹೋಗಿದ್ದೇ ಶರತ್‌ ಸಾವಿಗೆ ಕಾರಣವಾಯ್ತಾ?

Young man slips and falls

ಉಡುಪಿ: ಅರಿಶಿನಗುಂಡಿ ಜಲಪಾತದಲ್ಲಿ ಯುವಕ ನೀರುಪಾಲು ಪ್ರಕರಣದಲ್ಲಿ ಚೆಕ್ ಪೋಸ್ಟ್ ಹಾಗೂ ಸ್ಥಳೀಯ ಮನೆಗಳನ್ನು ತಪ್ಪಿಸಿ ಜಲಪಾತಕ್ಕೆ (Arishina Gundi Falls) ಹೋಗಿದ್ದೇ ಯುವಕ ಶರತ್ ಸಾವಿಗೆ ಕಾರಣ ಎನ್ನಲಾಗಿದೆ. ಗೂಗಲ್ ಮ್ಯಾಪ್ ತೋರಿಸುವ ದಾರಿ ಬಿಟ್ಟು ಶರತ್ ಹಾಗೂ ಸ್ನೇಹಿತ ಬೇರೆ ದಾರಿ ಹಿಡಿದಿದ್ದರು ಎಂದು ತಿಳಿದುಬಂದಿದೆ.

ಚೆಕ್ ಪೋಸ್ಟ್ ‌ರಸ್ತೆಯಲ್ಲೇ ತೆರಳಿದ್ದರೆ ಪೊಲೀಸರು ತಡೆಯುತ್ತಿದ್ದರು, ಸಮೀಪದ ಮನೆಗಳ ನಿವಾಸಿಗಳು ಮುಂದೆ ತೆರಳಲು ಬಿಡುತ್ತಿರಲಿಲ್ಲ. ಇದರಿಂದ ಜಲಪಾತಕ್ಕೆ ತೆರಳದೆ‌ ಅವರು ವಾಪಸ್‌ ಆಗುತ್ತಿದ್ದರು. ಆದರೆ, ಮಾರ್ಗ ಬದಲಾಯಿಸಿ ಯುವಕರು ಜಲಪಾತಕ್ಕೆ ಹೋಗಿದ್ದರು. ಮಾರ್ಗ ಮಧ್ಯೆ ಕಾರು ನಿಲ್ಲಿಸಿ 7 ಕಿಲೋಮೀಟರ್ ನಡೆದುಕೊಂಡು ಜಲಪಾತದ ಬಳಿ ತೆರಳಿದ್ದರು. ತಾವೇ ದಾರಿ ಮಾಡಿಕೊಂಡು ಜಲಾಪಾತದ ಬಲಿ ತೆರಳುವ ಹುಚ್ಚು ಸಾಹಸಕ್ಕೆ ಶರತ್ ಹಾಗೂ ಸ್ನೇಹಿತ ಮುಂದಾಗಿದ್ದರು ಎನ್ನಲಾಗಿದೆ. ಬಳಿಕ ಅರಿಶಿನ ಗುಂಡಿ ಜಲಪಾತದಲ್ಲಿ ಕಾಲುಜಾರಿ ಬಿದ್ದು ಶರತ್ ನಾಪತ್ತೆಯಾಗಿದ್ದ.

ಇದನ್ನೂ ಓದಿ | Road Accident : ಮಾವು ತುಂಬಿದ್ದ ಟ್ರ್ಯಾಕ್ಟರ್‌ ಟ್ರಾಲಿ ಪಲ್ಟಿ; ಕಾರ್ಮಿಕ ಸಾವು, ಮೂವರಿಗೆ ಗಾಯ

ಶೋಧಕಾರ್ಯ ಸ್ಥಗಿತಗೊಳಿಸಿ ವಾಪಾಸ್ಸಾದ ಈಶ್ವರ ಮಲ್ಪೆ ತಂಡ

ಅರಿಶಿನಗುಂಡಿ ಜಲಪಾತದಲ್ಲಿ ಕಾಲು ಜಾರಿ ಬಿದ್ದು ನೀರುಪಾಲಾಗಿದ್ದ ಶರತ್ ಪತ್ತೆಗೆ ಶೋಧಕಾರ್ಯ ನಡೆಸುತ್ತಿದ್ದ ಈಶ್ವರ ಮಲ್ಪೆ ತಂಡ ವಾಪಾಸ್ಸಾಗಿದೆ. ಸ್ನೇಹಿತ ಗುರುರಾಜ್ ಜತೆ ಅರಶಿನಗುಂಡಿ ಜಲಪಾತಕ್ಕೆ ತೆರಳಿದ್ದ ಭದ್ರಾವತಿ ಮೂಲದ ಶರತ್ ಜಲಪಾತದ ಬಳಿ ಕಾಲುಜಾರಿ ಬಿದ್ದು ನಾಪತ್ತೆಯಾಗಿದ್ದ.

Sharaths house in Bhadravathi

ಮಂಕಿಮ್ಯಾನ್ ಜ್ಯೋತಿರಾಜ್ ತಂಡದಿಂದ ಕಾರ್ಯಾಚರಣೆ

ಶರತ್ ಪತ್ತೆಗಾಗಿ ಮಂಗಳವಾರ ಅಗ್ನಿಶಾಮಕ ದಳ ಮತ್ತು ಮಂಕಿಮ್ಯಾನ್ ಕೋತಿರಾಜ್ ನೇತೃತ್ವದಲ್ಲಿ‌ ಕಾರ್ಯಾಚರಣೆ ಮುಂದುವರಿದಿದೆ. ‌ಕಾರ್ಯಾಚರಣೆಯಲ್ಲಿ ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ, ಎ.‌ಸಿ.ಎಫ್.ಒ, ಬೈಂದೂರು ಸರ್ಕಲ್ ಇನ್ಸ್ಪೆಕ್ಟರ್ ಮತ್ತು ತಂಡ ಭಾಗಿಯಾಗಿದೆ. ಸದ್ಯ ಅರಿಶಿನ ಗುಂಡಿಯಲ್ಲಿ ಶೋಧ ಕಾರ್ಯದಲ್ಲಿ ಚಿತ್ರದುರ್ಗದ ಜ್ಯೋತಿರಾಜ್ (ಕೋತಿರಾಜ್) ನಿರತರಾಗಿದ್ದಾರೆ. ಒಟ್ಟು 11 ತಂಡಗಳಿಂದ ಶರತ್ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ. ಕೊಲ್ಲೂರು ಪೊಲೀಸ್ ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿ, ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

ಶರತ್‌ ನಿವಾಸದಲ್ಲಿ ಮಡುಗಟ್ಟಿದ ದುಃಖ

ಶಿವಮೊಗ್ಗ: ಕೊಲ್ಲೂರು ಬಳಿ ಅರಿಶಿನಗುಂಡಿ ಫಾಲ್ಸ್‌ನಲ್ಲಿ ಬಿದ್ದು ನಾಪತ್ತೆಯಾದ ಯುವಕ ಶರತ್‌ ಕುಮಾರ್‌ (23)ನ ಭದ್ರಾವತಿಯ ಕೆ.ಎಚ್.ನಗರದ ನಿವಾಸದಲ್ಲಿ ದುಃಖ ಮಡುಗಟ್ಟಿದೆ. ಶರತ್‌ಗೆ ಇಬ್ಬರು ಸಹೋದರಿಯರು, ತಂದೆ-ತಾಯಿ ಇದ್ದಾರೆ. ಸ್ಥಳೀಯರು ಶರತ್ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬುತ್ತಿದ್ದಾರೆ.

ಇದನ್ನೂ ಓದಿ | Tractor accident : ಉಳುಮೆ ವೇಳೆ ಟ್ರ್ಯಾಕ್ಟರ್‌ ಪಲ್ಟಿ; ನಿವೃತ್ತ ಶಿಕ್ಷಕ ಸಾವು

ಮುನಿಸ್ವಾಮಿ, ರಾಧಾ ದಂಪತಿಯ ಏಕೈಕ ಪುತ್ರ ಶರತ್‌ ಕುಮಾರ್‌, ಭಾನುವಾರ ಬೆಳಗ್ಗೆ ಭದ್ರಾವತಿಯ ಕಡದಕಟ್ಟೆಯ ಸ್ನೇಹಿತರೊಂದಿಗೆ ಹೊರಟಿದ್ದ. ಬಾಡಿಗೆಗೆ ಹಿಟಾಚಿ, ಅಡಕೆ ತಟ್ಟೆ ಫ್ಯಾಕ್ಟರಿ ನಡೆಸುತ್ತಿದ್ದ ಶರತ್ ಮನೆಗೆ ಆಸರೆಯಾಗಿದ್ದ. ಮಳೆಗಾಲದ ಹಿನ್ನೆಲೆಯಲ್ಲಿ ಹೆಚ್ಚಿನ ಕೆಲಸವಿಲ್ಲದ ಕಾರಣ ಸ್ನೇಹಿತರೊಂದಿಗೆ ಶರತ್ ಹೋಗಿದ್ದ. ಕಲ್ಲೂರು ಬಳಿಯ ಅರಿಶಿನಗುಂಡಿ ಫಾಲ್ಸ್‌ಗೆ ಹೋಗಿದ್ದಾಗ ಕಾಲು ಜಾರಿ ಬಿದ್ದು ನಾಪತ್ತೆಯಾಗಿದ್ದಾನೆ. ಹೀಗಾಗಿ ಘಟನಾ ಸ್ಥಳಕ್ಕೆ ಶರತ್ ಕುಟುಂಬಸ್ಥರು ಕೂಡ ತೆರಳಿದ್ದಾರೆ.

Exit mobile version