Site icon Vistara News

Shimogga Tense | ಶಾಂತವಾಗಿರುವ ಶಿವಮೊಗ್ಗ, ಬಂದೋಬಸ್ತ್‌ ಮುಂದುವರಿಕೆ

shimogga

ಶಿವಮೊಗ್ಗ: ಸಾವರ್ಕರ್‌ ಫೋಟೋ ವಿವಾದ, ಚೂರಿ ಇರಿತ ಮುಂತಾದವುಗಳಿಂದ ಪ್ರಕ್ಷುಬ್ಧವಾಗಿದ್ದ ಶಿವಮೊಗ್ಗ ನಗರದಲ್ಲಿ ಸದ್ಯ ಪರಿಸ್ಥಿತಿ ಶಾಂತವಾಗಿದ್ದು, ಜನಜೀವನ ಯಥಾಸ್ಥಿತಿಗೆ ಮರಳುತ್ತಿದೆ.

ನಗರದಲ್ಲಿ ಬಿಗು ಬಂದೋಬಸ್ತ್ ಮುಂದುವರಿಸಲಾಗಿದೆ. ಆಯಕಟ್ಟಿನ ಸ್ಥಳಗಳಲ್ಲಿ ಆರ್‌ಎಎಫ್, ಕೆಎಸ್‌ಆರ್‌ಪಿ, ಡಿಎಆರ್ ಸಿಬ್ಬಂದಿ ನಿಯೋಜಿಸಲಾಗಿದೆ. ರಾಜ್ಯ ಎಡಿಜಿಪಿ ಅಲೋಕ್ ಕುಮಾರ್ ಶಿವಮೊಗ್ಗದಲ್ಲೇ ಮೊಕ್ಕಾಂ ಹೂಡಿದ್ದು, ಪರಿಸ್ಥಿತಿಯ ಅವಲೋಕನ ಮಾಡುತ್ತಿದ್ದಾರೆ.

144 ಸೆಕ್ಷನ್ ನಾಳೆ ರಾತ್ರಿಯವರೆಗೂ ಮುಂದುವರಿಸಲಾಗಿದೆ. ಇಂದು ಭದ್ರಾವತಿಯಲ್ಲೂ ಆರ್‌ಎಎಫ್‌ ಪಥ ಸಂಚಕನ ನಡೆಯಲಿದೆ. ನಿನ್ನೆ ಬೆಳಗ್ಗೆ ಹಾಗೂ ಸಂಜೆ ಶಿವಮೊಗ್ಗ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ರೂಟ್ ಮಾರ್ಚ್ ನಡೆದಿತ್ತು. ಶಿವಮೊಗ್ಗ, ಭದ್ರಾವತಿ ನಗರಗಳಲ್ಲಿ ನಿಷೇಧಾಜ್ಞೆ ಮುಂದುವರಿಸಲಾಗಿದೆ. ನಿನ್ನೆ ರಜೆ ನೀಡಲಾಗಿದ್ದ ಶಾಲೆ ಕಾಲೇಜುಗಳು ಇಂದಿನಿಂದ ಆರಂಭವಾಗುತ್ತಿವೆ. ಸೂಕ್ಷ್ಮ ಪ್ರದೇಶ ಹೊರತುಪಡಿಸಿ ಉಳಿದೆಡೆ ಅಂಗಡಿಗಳು ತೆರೆದಿವೆ.

ಶಿವಮೊಗ್ಗ, ಭದ್ರಾವತಿಯಲ್ಲಿ ಇಂದು ಕೂಡ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ನಿನ್ನೆಯೇ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಆದೇಶ ಹೊರಡಿಸಿದ್ದರು.

ಸ್ವಾತಂತ್ರ್ಯೋತ್ಸವದ ದಿನ ನಡೆದ ಕಾರ್ಯಕ್ರಮದಲ್ಲಿ ಇಡಲಾಗಿದ್ದ ಸಾವರ್ಕರ್‌ ಅವರ ಫೋಟೋವನ್ನು ಬಲವಂತವಾಗಿ ತೆಗೆಸುವ ಮೂಲಕ ಶಿವಮೊಗ್ಗದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿತ್ತು. ತದನಂತರ ಪ್ರೇಮ್‌ ಸಿಂಗ್‌ ಎಂಬವರಿಗೆ ಚೂರಿಯಿಂದ ಇರಿಯಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಇದುವರೆಗೂ ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ: Shimogga tense | ಚೂರಿ ಇರಿತ ಆರೋಪಿಗೆ ಗುಂಡೇಟು, ಬಂಧನ

Exit mobile version