ಶಿವಮೊಗ್ಗ: ಚೂರಿ ಇರಿತ ಪ್ರಕರಣದಲ್ಲಿ ಬಂಧಿಸಲಾದ ಮೊಹ್ಮದ್ ಜಬಿ ಅಮಾಯಕ ಎಂಬ ಹೇಳಿಕೆ ಬೆನ್ನಲ್ಲೇ, ಆತ ಪಿಎಫ್ಐ/ಎಸ್‌ಡಿಪಿಐ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಒಂದು ಫೊಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕೇರಳದಲ್ಲಿ ನಡೆದ ಒಂದು ಪಿಎಫ್ಐ/ಎಸ್‌ಡಿಪಿಐ ಕಾರ್ಯಕ್ರಮದಲ್ಲಿ ಈತ ಭಾಗಿಯಾಗಿದ್ದು, ಅದರ ಫೊಟೊ ಎಂದು ಹೇಳಲಾಗಿದೆ. ಇದರಿಂದ, ಜಬಿಗೆ ಪಿಎಫ್‌ಐ ನಂಟು ದಿಕ್ಕಿನಲ್ಲಿ ನಡೆದಿರುವ ಪೊಲೀಸ್ ತನಿಖೆಗೆ ಇನ್ನೊಂದು ಆಯಾಮ ದೊರೆತಿದೆ.
ತನ್ನ ಪತಿ ಯಾವುದೇ ಇಸ್ಲಾಮಿಕ್ ಸಂಘಟನೆಯೊಂದಿಗೆ ನಂಟು ಹೊಂದಿಲ್ಲ ಎಂದು ಆತನ ಪತ್ನಿ ಹೇಳಿರುವ ಬೆನ್ನಲ್ಲೇ ಈ ಫೊಟೊ ವೈರಲ್ ಆಗಿದೆ. ಪತ್ನಿ ಹೇಳಿಕೆ ಶಿವಮೊಗ್ಗ ಪೊಲೀಸರ ತನಿಖೆಯ ದಿಕ್ಕು ತಪ್ಪಿಸುವ ಹುನ್ನಾರ ಎಂಬ ಆರೋಪವೂ ಕೇಳಿಬಂದಿದೆ.