Site icon Vistara News

Shivamogga News: ಸಾಗರದಲ್ಲಿ ನೀರಿನ ಬಕೆಟ್‌ಗೆ ಬಿದ್ದು ಮಗು ಸಾವು

Shivamogga News

ಶಿವಮೊಗ್ಗ: ನೀರಿನ ಬಕೆಟ್‌ಗೆ ಬಿದ್ದು ಮಗು ಮೃತಪಟ್ಟ ಮನಕಲಕುವ ಘಟನೆ ಸಾಗರ ಪಟ್ಟಣದ ಜೋಸೆಫ್ ಬಡಾವಣೆಯಲ್ಲಿ ಭಾನುವಾರ ನಡೆದಿದೆ. ಮನೆಯ ಶೌಚಾಲಯದಲ್ಲಿದ್ದ ನೀರು ತುಂಬಿದ್ದ ಬಕೆಟ್‌ಗೆ ಆಕಸ್ಮಿಕವಾಗಿ ಬಿದ್ದು ಮಗು ಕೊನೆಯುಸಿರೆಳೆದಿದೆ. ಆಸಿಫ್ ಎಂಬುವವರ ಪುತ್ರಿ ಆನಂ ಫಾತಿಮಾ ಮೃತ ಮಗು. ಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೆಂಗಳೂರು-ಕಡಪ ರಸ್ತೆಯಲ್ಲಿ ಕಾರು-ಬೈಕ್‌ ಡಿಕ್ಕಿ; ಇಬ್ಬರು ಸವಾರರ ದುರ್ಮರಣ

ಕೋಲಾರ: ಕಾರು ಮತ್ತು ಬೈಕ್‌ ಡಿಕ್ಕಿಯಾಗಿ ಇಬ್ಬರು ಸವಾರರು ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ಜಿಲ್ಲೆಯ (Kolar News) ಶ್ರೀನಿವಾಸಪುರ ತಾಲೂಕಿನ ಕಮತಂಪಲ್ಲಿ ಕ್ರಾಸ್‌ನಲ್ಲಿ ಭಾನುವಾರ ನಡೆದಿದೆ.

ಶ್ರೀನಿವಾಸಪುರ ತಾಲೂಕಿನ ಬೈರಗಾನಪಲ್ಲಿಯ ಗೋಪಾಲಪ್ಪ(58), ಚಿಂತಾಮಣಿ ತಾಲೂಕಿನ ಕೋನಪಲ್ಲಿ ಗ್ರಾಮದ ವೆಂಕಟೇಶ್ (45) ಮೃತರು. ಇವರಿಬ್ಬರೂ ಬಾವ-ಬಾಮೈದ ಆಗಿದ್ದು, ಬೆಂಗಳೂರು-ಕಡಪ ರಸ್ತೆಯ ತಾಡಿಗೋಲ್ ಕ್ರಾಸ್ ಸಮೀಪದ ಕಮತಂಪಲ್ಲಿ ಕ್ರಾಸ್‌ನಲ್ಲಿ ಹೋಗುತ್ತಿದ್ದಾಗ ಬೈಕ್‌ ಹಾಗೂ ಕಾರಿನ ನಡುವೆ ಅಪಘಾತ ನಡೆದಿದೆ.

ಅಪಘಾತ ನಡೆದ ವೇಳೆ ರಸ್ತೆಯಿಂದ ಸುಮಾರು 15 ಅಡಿಗಳ ಆಳಕ್ಕೆ ಕಾರು ಹಾಗೂ ದ್ವಿಚಕ್ರವಾಹನ ಸಮೇತ ಸವಾರರು ಬಿದ್ದಿದ್ದಾರೆ. ಈ ವೇಳೆ ಬೈಕ್‌ನಲ್ಲಿದ್ದ ಬಾವ-ಬಾಮೈದ ಸ್ಥಳದಲ್ಲಿಯೇ ಮೃತಪಟಿದ್ದಾರೆ.

ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ; ಸವಾರ ಸಾವು

ಕಾರವಾರ: ಕಾರು-ಬೈಕ್ ಭೀಕರ ಅಪಘಾತ ಸಂಭವಿಸಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವುದು ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ 766EEಯ ಹನುಮಂತಿ ಕ್ರಾಸ್ ಬಳಿ ನಡೆದಿದೆ.ಶ್ಯಾಮಸುಂದರ ಹೆಗಡೆ(58) ಮೃತ ದುರ್ದೈವಿ. ಕಾರು ಬಡಿದು ರಸ್ತೆ ಪಕ್ಕದ ಹೋರ್ಡಿಂಗ್ಸ್ ಮುರಿದುಬಿದ್ದಿದೆ. ಶಿರಸಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ‌ಅಪಘಾತ ನಡೆದಿದೆ.

Assault Case : ಪೊಲೀಸ್‌ ಠಾಣೆಗೆ ನುಗ್ಗಿ ಎಎಸ್‌ಐಗೆ ಹೊಡೆದ ಮಹಿಳೆ; ಇಬ್ಬರು ಆಸ್ಪತ್ರೆ ಪಾಲು

ಬೆಂಗಳೂರು: ಪ್ರಾಪರ್ಟಿ ವಿಚಾರದಲ್ಲಿ ನ್ಯಾಯ ಸಿಗಲಿಲ್ಲ ಎಂದು ಸಿಟ್ಟಾದ ಮಹಿಳೆಯೊಬ್ಬರು ಪೊಲೀಸ್ ಮೇಲೆ ಹಲ್ಲೆ (Assault Case)‌ ನಡೆಸಿರುವ ಆರೋಪವೊಂದು ಕೇಳಿ ಬಂದಿದೆ. ಶನಿವಾರ ಮಧ್ಯಾಹ್ನ ಬೆಂಗಳೂರಿನ (Bengaluru News) ಗಂಗಮ್ಮನ ಗುಡಿ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ.

ಅಶ್ವಿನಿ ಎಂಬಾಕೆ ಎಎಸ್ಐ ನಾಗರಾಜು ಮೇಲೆ ಹಲ್ಲೆ ನಡೆಸಿದ್ದಾರೆ. ಹಲವು ದಿನಗಳಿಂದ ಗಂಗಮ್ಮನ ಗುಡಿ ಪೊಲೀಸ್ ಠಾಣೆಗೆ ಅಶ್ವಿನಿ ಬಂದು ಹೋಗುತ್ತಿದ್ದರು. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಅನೇಕ ಬಾರಿ ಅಶ್ವಿನಿ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದರು ಎನ್ನಲಾಗಿದೆ.ಆದರೆ ತನ್ನ ಸಮಸ್ಯೆಗೆ ನ್ಯಾಯ ಸಿಗುತ್ತಿಲ್ಲವೆಂಬ ಸಿಟ್ಟಿಗೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಮಾನಸಿಕ ಅಸ್ವಸ್ಥತೆಯಾಗಿರುವ ಅಶ್ವಿನಿ ಕಳೆದ 15 ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ನಿನ್ನೆ ಠಾಣೆಗೆ ಬಂದ ಅಶ್ವಿನಿ ಎಎಸ್‌ಐ ನಾಗರಾಜು ಜತೆ ಮಾತುಕತೆ ನಡೆಸಿದ್ದಾಳೆ. ಈ ವೇಳೆ ಏಕಾಏಕಿ ಸಿಟ್ಟಾಗಿ ಕೈಗೆ ಸಿಕ್ಕ ವಸ್ತುವಿನಿಂದ ನಾಗರಾಜು ಮೇಲೆ ಹಲ್ಲೆ ನಡೆಸಿದ್ದಾಳೆ.

ಇದನ್ನೂ ಓದಿ | Road Accident : ಹೆಡ್‌ ಕಾನ್ಸ್‌ಟೇಬಲ್‌ ಪ್ರಾಣ ತೆಗೆದ ರೋಡ್‌ ಹಂಪ್‌; ಕಾರು ಅಪಘಾತದಲ್ಲಿ ಚಾಲಕ ಸಾವು

ಸದ್ಯ ಹಲ್ಲೆಗೊಳಗಾದ ಎಎಸ್ಐ ನಾಗರಾಜು ಅವರಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇತ್ತ ಅಶ್ವಿನಿಗೂ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನೂ ಈ ಘಟನೆ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.

Exit mobile version