Site icon Vistara News

Shivamogga News: ಅನಾರೋಗ್ಯದಿಂದ ಬಳಲುತ್ತಿರುವ ಬಾಲಕನಿಗೆ ಸಂಸದ ಬಿ.ವೈ. ರಾಘವೇಂದ್ರ ನೆರವು

BY Raghavendra shivamogga

#image_title

ಶಿವಮೊಗ್ಗ: ಅನಾರೋಗ್ಯದಿಂದ ತೀವ್ರವಾಗಿ ಬಳಲುತ್ತಿರುವ 5 ವರ್ಷದ ಬಾಲಕನಿಗೆ 18 ವರ್ಷಗಳಾಗುವವರೆಗೂ ಸರ್ಕಾರದಿಂದಲೇ ಚಿಕಿತ್ಸಾ ವೆಚ್ಚ ಭರಿಸಲು ಕ್ರಮ ಕೈಗೊಳ್ಳುವ ಮೂಲಕ (Shivamogga News) ಸಂಸದ ಬಿ.ವೈ. ರಾಘವೇಂದ್ರ ಮಾನವೀಯತೆ ಮೆರೆದಿದ್ದಾರೆ.

ತಾಲೂಕಿನ ಇಟ್ಟಿಗೆಹಳ್ಳಿ ಗ್ರಾಮದಲ್ಲಿ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ರಾಘವೇಂದ್ರ ಹಾಗೂ ಅಶ್ವಿನಿ ದಂಪತಿಗೆ ಇಬ್ಬರು ಮಕ್ಕಳು. ಮೊದಲನೆಯವನು ಆರೋಗ್ಯವಾಗಿದ್ದಾನೆ. ಎರಡನೆಯ ಮಗ ಶ್ರೇಯಸ್‍ಗೆ 6 ತಿಂಗಳಿನಿಂದಲೇ ವಿಚಿತ್ರ ಸಮಸ್ಯೆ ಕಾಣಿಸಿಕೊಂಡಿತ್ತು. ಲೋ ಶುಗರ್‌ನಿಂದ ಬಳಲುತ್ತಿದ್ದ. ಜೊತೆಗೆ ಗ್ರೋತ್ ಆರ್ಗನ್ಸಮಸ್ಯೆ ಕೂಡ ಕಾಣಿಸಿಕೊಂಡಿತ್ತು. ಇದು ಮಗುವಿನ ಬೆಳವಣಿಗೆಯನ್ನೇ ಕುಂಠಿತಗೊಳಿಸುತ್ತಿದ್ದಲ್ಲದೆ ಪ್ರಾಣಾಪಾಯವೂ ಇತ್ತು.

ಇದನ್ನೂ ಓದಿ: Women’s T20 World Cup: ಐಸಿಸಿ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಗೆ ಕ್ಷಣಗಣನೆ ಆರಂಭ

ವೈದ್ಯರಿಗೆ ಮಗುವಿನ ಸಮಸ್ಯೆ ಏನೆಂದು ಗುರುತಿಸಲು ಮೂರು ವರ್ಷಗಳು ಬೇಕಾಯಿತು. ನಂತರ ಪ್ರತಿ ತಿಂಗಳೂ ಹತ್ತಾರು ಸಾವಿರ ರೂ.ಗಳ ಔಷಧ ಮತ್ತು ಚಿಕಿತ್ಸಾ ವೆಚ್ಚ ಭರಿಸಬೇಕಾಗಿತ್ತು. ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಕುಟುಂಬಕ್ಕೆ ದುಬಾರಿ ಚಿಕಿತ್ಸಾ ವೆಚ್ಚ ಭರಿಸುವುದೇ ಅಸಾಧ್ಯ ಎನ್ನುವಂತಾಗಿತ್ತು. ಸದ್ಯ ಮಗುವಿಗೆ 5 ವರ್ಷ 4 ತಿಂಗಳಾಗಿದ್ದು, ಇನ್ನು ಚಿಕಿತ್ಸೆ ಕೊಡಿಸುವುದು ಅಸಾಧ್ಯ ಎನ್ನುವಂತಹ ಪರಿಸ್ಥಿತಿ ಎದುರಾದಾಗ ಈ ಬಗ್ಗೆ ಸ್ಥಳೀಯ ಬಿಜೆಪಿ ಮುಖಂಡರು ಸಂಸದ ಬಿ.ವೈ. ರಾಘವೇಂದ್ರ ಅವರ ಗಮನ ತಂದರು.

ಇದನ್ನೂ ಓದಿ: Nagpur Pitch Criticism : ಆಸ್ಟ್ರೇಲಿಯಾದ ಮಾಧ್ಯಮಗಳ ವರದಿಗೆ ತಿರುಗೇಟು ಕೊಟ್ಟ ಇರ್ಫಾನ್ ಪಠಾಣ್​

ಸಂಸದರು ಈ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಮಗುವಿಗೆ 18 ವರ್ಷಗಳಾಗುವವರೆಗೂ ಸರ್ಕಾರದಿಂದಲೇ ಚಿಕಿತ್ಸಾ ವೆಚ್ಚ ಭರಿಸಲು ಕ್ರಮ ಕೈಗೊಂಡಿದ್ದಾರೆ. ಶುಕ್ರವಾರ (ಫೆ.೧೦) ಬೆಳಗ್ಗೆ ಮಗುವಿಗೆ ಸರ್ಕಾರದಿಂದ ಮೊದಲ ಔಷಧಗಳನ್ನು ಒದಗಿಸಲಾಗಿದ್ದು, ಸಂಸದ ಬಿ.ವೈ. ರಾಘವೇಂದ್ರ ಮಗುವಿಗೆ ಔಷಧ ನೀಡಿ, ಶೀಘ್ರದಲ್ಲೇ ಮಗು ಆರೋಗ್ಯವಾಗಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತಮ್ಮಡಿಹಳ್ಳಿ ನಾಗರಾಜ್, ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಇಟ್ಟಿಗೆಹಳ್ಳಿ ನಾಗೇಂದ್ರ, ಪ್ರಮುಖರಾದ ಸತೀಶ್, ಚೇತನ್ ಮತ್ತಿತರರಿದ್ದರು.

ಇದನ್ನೂ ಓದಿ: Sun Breaks off: ಸೂರ್ಯನಿಂದ ಕಳಚಿದ ಬಹುದೊಡ್ಡ ಭಾಗ, ವಿಜ್ಞಾನಿಗಳಿಗೆ ದಿಗ್ಭ್ರಮೆ

ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಕೃತಜ್ಞತೆ ಸಲ್ಲಿಸಿರುವ ಮಗುವಿನ ಪೋಷಕರಾದ ರಾಘವೇಂದ್ರ ಹಾಗೂ ಅಶ್ವಿನಿ ದಂಪತಿ, ʼಸಂಕಷ್ಟದ ಸಂದರ್ಭದಲ್ಲಿ ಸ್ಪಂದಿಸಿ, ಮಗುವಿಗೆ ಚಿಕಿತ್ಸೆಯ ವ್ಯವಸ್ಥೆ ಮಾಡಿಸುವ ಮೂಲಕ ತಮ್ಮ ಬದುಕಲ್ಲಿ ಭರವಸೆ ಮೂಡಿಸಿದ್ದಾರೆʼ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: BBMP Reforms: ಬಿಬಿಎಂಪಿ ಆದಾಯ ಹೆಚ್ಚಳಕ್ಕೆ ಜಾರಿ ಕೋಶ ರಚಿಸಿ: ಆಡಳಿತ ಸುಧಾರಣಾ ಆಯೋಗದ ಶಿಫಾರಸು

Exit mobile version