Site icon Vistara News

Shivamogga News: ತುಂಗಾ ನದಿಯಲ್ಲಿ ಮುಳುಗಿ ಮೂವರು ಬಾಲಕರ ಸಾವು; ಈಜಲು ಹೋಗಿದ್ದಾಗ ದುರ್ಘಟನೆ

Boys Drowns in Tunga river

ಶಿವಮೊಗ್ಗ: ತುಂಗಾ ನದಿಯಲ್ಲಿ ಈಜಲು ಹೋಗಿದ್ದ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ (Shivamogga News) ತೀರ್ಥಹಳ್ಳಿ ತಾಲೂಕಿನ ರಾಮ ಮಂಟಪದ ಬಳಿ ನಡೆದಿದೆ. ರಂಜಾನ್ ಉಪವಾಸ ಮುಗಿಸಿ ಈಜಲು ಹೋಗಿದ್ದ ಮೂವರು ಬಾಲಕರು ನೀರುಪಾಲಾಗಿದ್ದಾರೆ.

ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಾದ ರಫನ್, ಇಯನ್, ಸಮ್ಮರ್ ಮೃತರು. ತೀರ್ಥಹಳ್ಳಿ ರಾಮ ಮಂಟಪದ ಪಕ್ಕ ನದಿಯಲ್ಲಿ ಈಜಲು ತೆರಳಿದ್ದಾಗ ದುರಂತ ನಡೆದಿದೆ. ಅಗ್ನಿಶಾಮಕ ದಳ ಸಿಬ್ಬಂದಿ, ಮೃತ ದೇಹಗಳನ್ನು ಹೊರಗೆ ತೆಗೆದಿದ್ದಾರೆ.

ಇದನ್ನೂ ಓದಿ | Road Accident : ಕ್ಯಾಂಟರ್‌ ಡಿಕ್ಕಿ; ಟೈಯರ್‌ ಅಡಿ ಸಿಲುಕಿ 4 ವರ್ಷದ ಬಾಲಕ ದುರ್ಮರಣ

ಮಕ್ಕಳಿಬ್ಬರಿಗೆ ವಿಷ ಕುಡಿಸಿ, ನೇಣಿಗೆ ಶರಣಾದ ತಂದೆ

ಕೋಲಾರ : ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ತಂದೆಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ಕೋಲಾರ ಜಿಲ್ಲೆಯ (Kolar News) ಶ್ರೀನಿವಾಸಪುರ ತಾಲೂಕಿನ ಶೀಗೆಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.

ನಾರಾಯಣಸ್ವಾಮಿ (40) ಹಾಗೂ ಮಕ್ಕಳಾದ ಪವನ್ (12), ನಿತಿನ್ (10) ಮೃತ ದುರ್ದೈವಿಗಳು. ಕೌಟುಂಬಿಕ ಕಲಹದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.

ವಿಷಯ ತಿಳಿದು ಸ್ಥಳದಲ್ಲಿ ಜಮಾಯಿಸಿದ ಜನರು, ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸುತ್ತಿರುವ ಪೊಲೀಸರು

ವಿಷಯ ತಿಳಿಯುತ್ತಿದ್ದಂತೆ ಶ್ರೀನಿವಾಸಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಶ್ರೀನಿವಾಸಪುರ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ:Assault Case : ರಾಯಚೂರಿನಲ್ಲಿ ಬಿಜೆಪಿ ಶಾಸಕನಿಗೆ ಚಾಕು ತೋರಿಸಿದ ಅಪರಿಚಿತ; ಹಲ್ಲೆಗೆ ಯತ್ನ, ಅಪಾಯದಿಂದ ಜಸ್ಟ್‌ ಮಿಸ್‌

ಕೌಟುಂಬಿಕ ಕಲಹ; ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಗದಗ: ಕೌಟುಂಬಿಕ ಕಲಹಕ್ಕೆ (Family Dispute) ಒಂದೇ ಕುಟುಂಬದ ಮೂವರು (Self Harming) ಬಲಿ‌ಯಾಗಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೋನಾಳ ಗ್ರಾಮದಲ್ಲಿ (Gadag News) ಈ ಘಟನೆ ನಡೆದಿದೆ. ರೇಣುಕಾ ತೇಲಿ (49), ಮಂಜುನಾಥ್ (22), ಸಾವಕ್ಕ ತೇಲಿ (47) ಮೃತ ದುರ್ದೈವಿಗಳು.

ಸಾಲದ ವಿಷಯಕ್ಕೆ ಮನಸ್ತಾಪ ಉಂಟಾಗಿತ್ತು ಎನ್ನಲಾಗಿದೆ. ಇದರಿಂದ ಮನನೊಂದ ರೇಣುಕಾ ತೇಲಿ ರೈಲು ಹಳಿಗೆ ಹಾರಿದ್ದರು. ತಾಯಿಯನ್ನು ಹಿಂಬಾಲಿಸಿ ಬಂದಿದ್ದ ಮಂಜುನಾಥ್‌ ತಾಯಿಯನ್ನು ಕಾಪಾಡಲು ಹೋಗಿ ಹಳಿಗೆ ಬಿದ್ದಿದ್ದರು. ಈ ವೇಳೆ ವೇಗವಾಗಿ ಬಂದ ರೈಲು ಇವರಿಬ್ಬರ ಪ್ರಾಣವನ್ನು ತೆಗೆದಿತ್ತು.

ಹಾವೇರಿ ಜಿಲ್ಲೆಯ ಎಲವಿಗಿ ರೈಲು ನಿಲ್ದಾಣದ ಬಳಿ ನಿನ್ನೆ ಭಾನುವಾರ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇತ್ತ ಅಕ್ಕ ರೇಣುಕಾಳ ಸಾವಿನ ವಿಷಯ ತಿಳಿದು ಸಾವಕ್ಕ ತೇಲಿ (47) ಎಂಬುವವರು ಮನೆಯಲ್ಲೇ ನೇಣು ಬಿಗಿದುಕೊಂಡಿದ್ದಾರೆ. ಒಂದೇ ಕುಟುಂಬದ ಮೂವರನ್ನು ಕಳೆದುಕೊಂಡು ಕುಟುಂಬಸ್ಥರು ಕಂಗಲಾಗಿದ್ದಾರೆ.

ಇದನ್ನೂ ಓದಿ | Murder Case: ಆಸ್ತಿ ವಿಚಾರಕ್ಕೆ ಕೊಡಲಿಯಿಂದ ಕೊಚ್ಚಿ ಅಣ್ಣನನ್ನೇ ಕೊಲೆಗೈದ ತಮ್ಮ!

ಸಾವಕ್ಕ, ರೇಣುಕಾ ಮಧ್ಯೆ ಟ್ರ್ಯಾಕ್ಟರ್ ಸಾಲ ಕಟ್ಟುವ ವಿಷಯವಾಗಿ ಜಗಳವಾಡಿಕೊಂಡಿದ್ದರು. ಬ್ಯಾಂಕ್‌ನಿಂದ 4 ಲಕ್ಷ ರೂ. ಸಾಲ ಪಡೆದು ಟ್ರ್ಯಾಕ್ಟರ್ ಖರೀದಿ ಮಾಡಿದ್ದರು. ಟ್ರ್ಯಾಕ್ಟರ್ ಕಂತು ವಿಚಾರವು ಕೂಡು ಕುಟುಂಬದಲ್ಲಿ ಗಲಾಟೆಗೆ ಕಾರಣವಾಗಿತ್ತು ಎನ್ನಲಾಗಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

Exit mobile version