ಶಿವಮೊಗ್ಗ : ಮಹಿಳೆಯೊಬ್ಬಳು ತನ್ನಿಬ್ಬರ ಮಕ್ಕಳೊಂದಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗದ ಚೋರಡಿಯಲ್ಲಿ ನಡೆದಿದೆ. ಮೃತ ಮಹಿಳೆ ಜ್ಯೋತಿ (25). ಎರಡೂವರೆ ವರ್ಷದ ಸಾನ್ವಿ ಹಾಗೂ ಒಂದು ವರ್ಷದ ಕುಶಾಲ್ ಮೃತ ಮಕ್ಕಳು.
ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ಬೆಳಕಿಗೆ ಬಂದಿದೆ. ಹೊಲಕ್ಕೆ ಕೆಲಸಕ್ಕೆಂದು ಹೋದವರು ಮನೆಗೆ ವಾಪಸ್ ಆದ ಸಂದರ್ಭದಲ್ಲಿ ವಿಷಯ ಗೊತ್ತಾಗಿದೆ. ರೂಮ್ನ ಬಾಗಿಲು ತೆರೆಯದ್ದಕ್ಕೆ ಅನುಮಾನಗೊಂಡ ಮನೆಯವರು ಪರಿಶೀಲಿಸಿದಾಗ ತಾಯಿ ಹಾಗೂ ಮಕ್ಕಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು ಗೊತ್ತಾಗಿದೆ.
ಇದನ್ನೂ ಓದಿ | ಶಿವಮೊಗ್ಗ ಜಿಲ್ಲೆಯಲ್ಲಿ ಇಬ್ಬರು ಬೈಕ್ ಸವಾರರ ಸಾವು
ಜ್ಯೋತಿ ಸಾಸಿವೆಹಳ್ಳಿಯವರಾಗಿದ್ದು, ಮದುವೆಯಾಗಿ ಐದು ವರ್ಷವಾಗಿತ್ತು. ಕೌಟುಂಬಿಕ ಕಲಹ ಘಟನೆಗೆ ಕಾರಣ ಎನ್ನಲಾಗುತ್ತಿದ್ದು, ಇನ್ನಷ್ಟೆ ಸಂಪೂರ್ಣ ವಿಚಾರ ಗೊತ್ತಾಗಬೇಕಿದೆ.
ಸದ್ಯ ಸ್ಥಳಕ್ಕೆ ಭೇಟಿ ನೀಡಿರುವ ಕುಂಸಿ ಠಾಣೆ ಪೊಲೀಸರು, ಪತಿ ಶಿವಮೂರ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | ಆತ್ಮಹತ್ಯೆಗೆ ಯತ್ನಿಸಿದ ಗರ್ಭಿಣಿ: ಹೊಟ್ಟೆಯಲ್ಲೆ ಮಗು ಸಾವು