ಕುಟುಂಬದವರು ಹೊಲದ ಕೆಲಸ ಮುಗಿಸಿ ಬರುವ ವೇಳೆಗೆ ತಾಯಿ, ಇಬ್ಬರು ಮಕ್ಕಳು ಶವವಾಗಿದ್ದರು ! - Vistara News

ಶಿವಮೊಗ್ಗ

ಕುಟುಂಬದವರು ಹೊಲದ ಕೆಲಸ ಮುಗಿಸಿ ಬರುವ ವೇಳೆಗೆ ತಾಯಿ, ಇಬ್ಬರು ಮಕ್ಕಳು ಶವವಾಗಿದ್ದರು !

ರೂಮ್​ನ ಬಾಗಿಲು ತೆರೆಯದ್ದಕ್ಕೆ ಅನುಮಾನಗೊಂಡ ಮನೆಯವರು ಪರಿಶೀಲಿಸಿದಾಗ ತಾಯಿ ಹಾಗೂ ಮಕ್ಕಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

VISTARANEWS.COM


on

ನೇಣು ಬಿಗಿದು ಆತ್ಮಹತ್ಯೆ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶಿವಮೊಗ್ಗ : ಮಹಿಳೆಯೊಬ್ಬಳು ತನ್ನಿಬ್ಬರ ಮಕ್ಕಳೊಂದಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗದ ಚೋರಡಿಯಲ್ಲಿ  ನಡೆದಿದೆ. ಮೃತ ಮಹಿಳೆ ಜ್ಯೋತಿ (25). ಎರಡೂವರೆ ವರ್ಷದ ಸಾನ್ವಿ ಹಾಗೂ ಒಂದು ವರ್ಷದ ಕುಶಾಲ್‌ ಮೃತ ಮಕ್ಕಳು.

ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ಬೆಳಕಿಗೆ ಬಂದಿದೆ. ಹೊಲಕ್ಕೆ ಕೆಲಸಕ್ಕೆಂದು ಹೋದವರು ಮನೆಗೆ ವಾಪಸ್ ಆದ ಸಂದರ್ಭದಲ್ಲಿ ವಿಷಯ ಗೊತ್ತಾಗಿದೆ. ರೂಮ್​ನ ಬಾಗಿಲು ತೆರೆಯದ್ದಕ್ಕೆ ಅನುಮಾನಗೊಂಡ ಮನೆಯವರು ಪರಿಶೀಲಿಸಿದಾಗ ತಾಯಿ ಹಾಗೂ ಮಕ್ಕಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು ಗೊತ್ತಾಗಿದೆ.

ಇದನ್ನೂ ಓದಿ | ಶಿವಮೊಗ್ಗ ಜಿಲ್ಲೆಯಲ್ಲಿ ಇಬ್ಬರು ಬೈಕ್ ಸವಾರರ ಸಾವು

ಕುಟುಂಬದವರ ಆಕ್ರಂದನ

ಜ್ಯೋತಿ ಸಾಸಿವೆಹಳ್ಳಿಯವರಾಗಿದ್ದು, ಮದುವೆಯಾಗಿ ಐದು ವರ್ಷವಾಗಿತ್ತು. ಕೌಟುಂಬಿಕ ಕಲಹ ಘಟನೆಗೆ ಕಾರಣ ಎನ್ನಲಾಗುತ್ತಿದ್ದು, ಇನ್ನಷ್ಟೆ ಸಂಪೂರ್ಣ ವಿಚಾರ ಗೊತ್ತಾಗಬೇಕಿದೆ.

ಸದ್ಯ ಸ್ಥಳಕ್ಕೆ ಭೇಟಿ ನೀಡಿರುವ ಕುಂಸಿ ಠಾಣೆ ಪೊಲೀಸರು, ಪತಿ ಶಿವಮೂರ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | ಆತ್ಮಹತ್ಯೆಗೆ ಯತ್ನಿಸಿದ ಗರ್ಭಿಣಿ: ಹೊಟ್ಟೆಯಲ್ಲೆ ಮಗು ಸಾವು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಶಿವಮೊಗ್ಗ

Hosanagara News: ಬೈಕ್‌ನಲ್ಲಿ ಬಂದ ಅಪರಿಚಿತ ಯುವಕರಿಂದ ಮಹಿಳೆಗೆ ಚೂರಿ ಇರಿತ

Hosanagara News: ಬೈಕ್‌ನಲ್ಲಿ ಬಂದ ಅಪರಿಚಿತ ಯುವಕರು ಮಹಿಳೆಯೊಬ್ಬರಿಗೆ ಚಾಕು ಇರಿದು ಪರಾರಿಯಾಗಿರುವ ಘಟನೆ ಹೊಸನಗರ ಪಟ್ಟಣದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.

VISTARANEWS.COM


on

A woman was stabbed by a strangers on a bike
ಸಾಂದರ್ಭಿಕ ಚಿತ್ರ.
Koo

ಹೊಸನಗರ: ಬೈಕ್‌ನಲ್ಲಿ ಬಂದ ಅಪರಿಚಿತ ಯುವಕರು ಮಹಿಳೆಯೊಬ್ಬರಿಗೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಬುಧವಾರ ಮಧ್ಯಾಹ್ನ (Hosanagara News) ಪಟ್ಟಣದಲ್ಲಿ ಜರುಗಿದೆ.

ನಾಜೀಮಾ (38) ಗಾಯಗೊಂಡ ಮಹಿಳೆ. ಪಟ್ಟಣದ ಬ್ಯೂಟಿ ಪಾರ್ಲರ್‌ವೊಂದರಲ್ಲಿ ಕೆಲಸ ಮಾಡುವ ಈ ಮಹಿಳೆಯು ಇಲ್ಲಿನ ಗಣಪತಿ ದೇವಸ್ಥಾನ ರಸ್ತೆಯ ಸಮೀಪದ ಮನೆಯಲ್ಲಿ ಊಟ ಮುಗಿಸಿ ಪಾರ್ಲರ್‌ಗೆ ಮರಳುತ್ತಿರುವಾಗ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ಯುವಕರು ಹರಿತವಾದ ಚಾಕುವಿನಿಂದ ಬಲಗೈ ಬಲ ತೋಳಿನ ಮೇಲ್ಭಾಗ ಇರಿದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಗಾಯಗೊಂಡ ಮಹಿಳೆಯು ಹೊಸನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: Karnataka Weather: ಬಿಸಿಲ ಧಗೆಯೊಳಗೆ ಕಾವೇರಿದ ಕರ್ನಾಟಕ; ಇನ್ನೆರಡು ದಿನ ಬಿಸಿಲು ಹೆಚ್ಚಳ

ಈ ಕುರಿತು ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Continue Reading

ಶಿವಮೊಗ್ಗ

Shivamogga News: ನಾಟಕಗಳು ಸಮಾಜದಲ್ಲಿನ ತಾರತಮ್ಯ, ಲೋಪ ತಿದ್ದುವ ಕೆಲಸ ಮಾಡುತ್ತವೆ: ಗಣಪತಿ ಹುಲ್ತಿಕೊಪ್ಪ

Shivamogga News: ಸಮಾಜದಲ್ಲಿನ ತಾರತಮ್ಯ, ಲೋಪಗಳನ್ನು ತಿದ್ದುವ ಕೆಲಸ ನಾಟಕಗಳಿಂದಾಗುತ್ತದೆ ಎಂದು ತಾ.ಪಂ. ಮಾಜಿ ಅಧ್ಯಕ್ಷ ಗಣಪತಿ ಹುಲ್ತಿಕೊಪ್ಪ ತಿಳಿಸಿದ್ದಾರೆ.

VISTARANEWS.COM


on

Tavaru Mane social comedy drama performance in Nadahalli village
Koo

ಸೊರಬ: ಸಮಾಜದಲ್ಲಿನ ತಾರತಮ್ಯ, ಲೋಪಗಳನ್ನು ತಿದ್ದುವ ಕೆಲಸ ನಾಟಕಗಳಿಂದಾಗುತ್ತದೆ ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಗಣಪತಿ ಹುಲ್ತಿಕೊಪ್ಪ (Shivamogga News) ಹೇಳಿದರು.

ಪಟ್ಟಣ ವ್ಯಾಪ್ತಿಯ ನಡಹಳ್ಳಿ ಗ್ರಾಮದಲ್ಲಿ ಮಾರಿಕಾಂಬ ದೇವಿಯ ವಾರ್ಷಿಕೋತ್ಸವ ಅಂಗವಾಗಿ ಶ್ರೀ ರೇಣುಕಾಂಬ ಕಲಾ ನಾಟ್ಯ ಸಂಘ ನಡಹಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ ಇವರ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ’ತವರು ಮನೆ’ ಸಾಮಾಜಿಕ ಹಾಸ್ಯನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿ, ನಡಹಳ್ಳಿ ಗ್ರಾಮ ಕಲೆ, ಸಾಹಿತ್ಯ, ಧಾರ್ಮಿಕತೆಗೆ ಹೆಸರಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ವಕೀಲ ವೈ.ಜಿ.ಪುಟ್ಟಸ್ವಾಮಿ ಮಾತನಾಡಿದರು.

ಇದನ್ನೂ ಓದಿ: Eyes Care While Studying: ಪರೀಕ್ಷೆಯ ದಿನಗಳಲ್ಲಿ ಕಣ್ಣಿನ ಕಾಳಜಿ ಹೀಗಿರಲಿ…

ನಡಹಳ್ಳಿ ಶ್ರೀ ಮಾರಿಕಾಂಬ ದೇವಸ್ಥಾನ ಸಮಿತಿ ಅಧ್ಯಕ್ಷ ಎನ್.ಕೆ.ಶ್ರೀಧರಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ವೇಳೆ ಸಾಧಕರು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿ, ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸೊರಬ ಪುರಸಭೆ ಮುಖ್ಯಾಧಿಕಾರಿ ಬಾಲಚಂದ್ರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕಾಧಿಕಾರಿ ಸುಬ್ರಾಯ ನಾಯ್ಕ್, ಇತಿಹಾಸ ಸಂಶೋಧಕ ಶ್ರೀಪಾದ ಬಿಚ್ಚುಗತ್ತಿ, ಕನ್ನಡ ಉಪನ್ಯಾಸಕ ಎಸ್.ಎಂ.ನೀಲೇಶ, ಬಿಎಸ್‌ಎನ್‌ಎಲ್ ನಿವೃತ್ತ ಅಧಿಕಾರಿ ವೇಣುಗೋಪಾಲ್, ಪುರಸಭೆ ಸದಸ್ಯ ಮಧುರಾಯ್ ಜಿ.ಶೇಟ್, ಲಿಂಗಪ್ಪ ಗುಂಡಶೆಟ್ಟಿಕೊಪ್ಪ, ನಡಹಳ್ಳಿ ಗ್ರಾಮ ಸಮಿತಿ ಅಧ್ಯಕ್ಷ ಹೆಡ್ಡೆ ರಾಮಪ್ಪ, ಸದಾಶಿವ, ದೂಪಪ್ಪ ಹಾಗೂ ಸಂಘದ ಅಧ್ಯಕ್ಷ ದೊಡ್ಮನೆ ಲಕ್ಷ್ಮಣಪ್ಪ, ಸಂಚಾಲಕ ಪ್ರಮೋದ್, ಶಿಕ್ಷಕ ಪರಮೇಶ್ವರಪ್ಪ, ನಾಗೇಶ್ ನಡಹಳ್ಳಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ಇದನ್ನೂ ಓದಿ: Karnataka Weather: ಬಿಸಿಲ ಧಗೆಯೊಳಗೆ ಕಾವೇರಿದ ಕರ್ನಾಟಕ; ಇನ್ನೆರಡು ದಿನ ಬಿಸಿಲು ಹೆಚ್ಚಳ

ಉಪನ್ಯಾಸಕ ಮಹಾಬಲೇಶ್ವರ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷ ಬಸವರಾಜ್ ನಿರ್ವಹಿಸಿದರು. ಕಾರ್ಯದರ್ಶಿ ಎನ್.ಆರ್.ರಘುಪತಿ ವಂದಿಸಿದರು.

Continue Reading

ಶಿವಮೊಗ್ಗ

Shivamogga News: ಮಕ್ಕಳಿಗೆ ಸಂಸ್ಕಾರ ಕೊಡಿ: ಘನಬಸವ ಅಮರೇಶ್ವರ ಸ್ವಾಮೀಜಿ

Shivamogga News: ಹಿರಿಯರ ನಡೆ- ನುಡಿಯನ್ನು ಮಕ್ಕಳು ಅನುಸರಿಸುವುದರಿಂದ ನಮ್ಮ ಚಾರಿತ್ರ್ಯ ಶುದ್ಧವಾಗಿರಬೇಕು ಎಂದು ಜಡೆ ಹಿರೇಮಠದ ಘನಬಸವ ಶ್ರೀ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದ್ದಾರೆ.

VISTARANEWS.COM


on

Ulavi channabasaveshwara jatra mahotsava and cultural programme at dwarahalli
Koo

ಸೊರಬ: ಮಕ್ಕಳು ಹೇಳಿದ್ದನ್ನು ಮಾಡುವ ಬದಲು ನಾವು ಮಾಡಿದ್ದನ್ನು ಅನುಕರಿಸುತ್ತಾರೆ. ಹಿರಿಯರ ನಡೆ- ನುಡಿಯನ್ನು ಮಕ್ಕಳು ಅನುಸರಿಸುವುದರಿಂದ ನಮ್ಮ ಚಾರಿತ್ರ್ಯ ಶುದ್ಧವಾಗಿರಬೇಕು ಎಂದು ಜಡೆ ಹಿರೇಮಠದ ಘನಬಸವ ಶ್ರೀ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ (Shivamogga News) ತಿಳಿಸಿದರು.

ತಾಲೂಕಿನ ದ್ವಾರಹಳ್ಳಿ ಗ್ರಾಮದಲ್ಲಿ ಪ್ರತಿವರ್ಷದಂತೆ ಆಚರಿಸುವ ಗ್ರಾಮದೇವ ಉಳವಿ ಚನ್ನಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಮಕ್ಕಳಿಗೆ ಸಂಪತ್ತನ್ನು ಕೊಡುವುದಕ್ಕಿಂತಲ್ಲೂ ಮುಖ್ಯವಾಗಿ ಸಂಸ್ಕಾರವನ್ನು ಕೊಡಬೇಕು. ಸಂಸ್ಕಾರವಿದ್ದ ವ್ಯಕ್ತಿ ಸಂಪತ್ತನ್ನು ಸದುಪಯೋಗಪಡಿಸಿಕೊಳ್ಳುತ್ತಾನೆ. ಸಂಸ್ಕಾರವಿರದ ವ್ಯಕ್ತಿ ಸಂಪತ್ತಿನೊಂದಿಗೆ ತನ್ನನ್ನೂ ಕಳೆದುಕೊಳ್ಳುತ್ತಾನೆ. ಜಗತ್ತಿನಲ್ಲಿ ಸಂಸ್ಕಾರವಿರದ ವ್ಯಕ್ತಿಗೆ ಯಾವ ಗೌರವವೂ ಸಿಗುವುದಿಲ್ಲ. ಅವರಿಂದ ಮನೆಯ ನೆಮ್ಮದಿ ಹಾಳಾಗುವುದಲ್ಲದೆ ಊರಿನ ನೆಮ್ಮದಿಯೂ ಹಾಳಾಗುತ್ತದೆ. ಸಂಸ್ಕಾರವಿರದ ವ್ಯಕ್ತಿ ಸಾರವಿರದ ಸಂಸಾರದಂತೆ ಎಂಬುದು ಅನುಭವಿಕರ ಮಾತು ಎಂದು ತಿಳಿಸಿದರು.

ಇದನ್ನೂ ಓದಿ: Eyes Care While Studying: ಪರೀಕ್ಷೆಯ ದಿನಗಳಲ್ಲಿ ಕಣ್ಣಿನ ಕಾಳಜಿ ಹೀಗಿರಲಿ…

ಹಿರೇಮಾಗಡಿ ಸಂಸ್ಥಾನದ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಮಹಾಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಇದನ್ನೂ ಓದಿ: Private Laboratory: ಸರ್ಕಾರಿ ಆಸ್ಪತ್ರೆಯಿಂದ 200 ಮೀಟರ್‌ ಒಳಗಿನ ಖಾಸಗಿ ಲ್ಯಾಬ್‌ ಬಂದ್‌; ಸರ್ಕಾರದ ಖಡಕ್‌ ಆದೇಶ!

ಕಾರ್ಯಕ್ರಮದಲ್ಲಿ ಜಾತ್ರಾ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಗ್ರಾಮದ ಹಿರಿಯರು, ಶಾಲಾ ಸಮಿತಿಯ ಸದಸ್ಯರು, ಗ್ರಾಮಸ್ಥರು ಹಾಗೂ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

Continue Reading

ಶಿವಮೊಗ್ಗ

SC ST Conference: ಎಸ್‌ಸಿ-ಎಸ್‌ಟಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದು ಮೋದಿ, ಬಿಎಸ್‌ವೈ: ಬಿ.ವೈ. ವಿಜಯೇಂದ್ರ

SC-ST Conference: ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ದೇಶವು ಸರ್ವಾಂಗೀಣ ಅಭಿವೃದ್ಧಿ ಆಗಿದೆ. 2047ನೇ ಇಸವಿಗೆ ಭಾರತ ಒಂದು ಸಮೃದ್ಧ ರಾಷ್ಟ್ರವಾಗಬೇಕು. ಕಟ್ಟಕಡೆಯ ವ್ಯಕ್ತಿಗೂ ಕೂಡ ಅಭಿವೃದ್ಧಿಯ ಪ್ರಯೋಜನ ತಲುಪಬೇಕು ಎಂಬ ನಿಟ್ಟಿನಲ್ಲಿ ಮೋದಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

VISTARANEWS.COM


on

SC ST Conference Modi and BSY worked for the betterment of SCs and ST community BY Vijayendra
Koo

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಮತ್ತು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರ ನೇತೃತ್ವದ ಸರ್ಕಾರಗಳು ಎಸ್.ಸಿ.- ಎಸ್.ಟಿ. ಸಮುದಾಯಗಳ ಶ್ರೇಯೋಭಿವೃದ್ಧಿಗೆ ನಿರಂತರವಾಗಿ ಮತ್ತು ಪ್ರಾಮಾಣಿಕವಾಗಿ ಶ್ರಮಿಸಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ಅವರು ಎಸ್.ಸಿ.-ಎಸ್.ಟಿ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ (SC-ST Conference) ಹೇಳಿದರು.

ಶಿಕಾರಿಪುರದಲ್ಲಿ ಬುಧವಾರ ನಡೆದ ಎಸ್.ಸಿ.-ಎಸ್.ಟಿ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಬಿ.ವೈ. ವಿಜಯೇಂದ್ರ, ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ದೇಶವು ಸರ್ವಾಂಗೀಣ ಅಭಿವೃದ್ಧಿ ಆಗಿದೆ. 2047ನೇ ಇಸವಿಗೆ ಭಾರತ ಒಂದು ಸಮೃದ್ಧ ರಾಷ್ಟ್ರವಾಗಬೇಕು. ಕಟ್ಟಕಡೆಯ ವ್ಯಕ್ತಿಗೂ ಕೂಡ ಅಭಿವೃದ್ಧಿಯ ಪ್ರಯೋಜನ ತಲುಪಬೇಕು ಎಂಬ ನಿಟ್ಟಿನಲ್ಲಿ ಮೋದಿ ಶ್ರಮಿಸುತ್ತಿದ್ದಾರೆ ಎಂದರು.‌

ಇದನ್ನೂ ಓದಿ: Job News: ಶೀಘ್ರ 1 ಸಾವಿರ ಗ್ರಾಮ ಲೆಕ್ಕಾಧಿಕಾರಿಗಳ ನೇಮಕ; ವೇತನದಲ್ಲೂ ಹೆಚ್ಚಳ!

ಕಾಂಗ್ರೆಸ್ ಸರ್ಕಾರವು ಕಳೆದ 9 ತಿಂಗಳಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಬರಗಾಲದ ಸಂದರ್ಭದಲ್ಲಿ ರೈತರ ಸಂಕಷ್ಟಕ್ಕೆ ಸ್ಪಂದಿಸಿಲ್ಲ. ಬಡವರು, ದೀನದಲಿತರ ಬಗ್ಗೆ ಯಾವುದೇ ಯೋಜನೆ ಹಾಕಿಕೊಳ್ಳದ ಕಾಂಗ್ರೆಸ್ ಸರಕಾರದ ಆಡಳಿತ ವೈಖರಿ ಕುರಿತು ಜನರು ಬೇಸತ್ತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿರುವ ಎಲ್ಲ 28 ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ- ಜೆಡಿಎಸ್ ಗೆಲ್ಲುವಂಥ ವಾತಾವರಣ ನಿರ್ಮಾಣವಾಗಿದೆ ಎಂದು‌ ಬಿ.ವೈ. ವಿಜಯೇಂದ್ರ ವಿಶ್ಲೇಷಿಸಿದರು.

SC ST Conference Modi and BSY worked for the betterment of SCs and ST community BY Vijayendra

ಬಿ.ವೈ. ರಾಘವೇಂದ್ರರಿಗೆ ಲೀಡ್‌ ಕೊಡಿ

ತಾಂಡಾಗಳ ಅಭಿವೃದ್ಧಿಗೆ ಆದ್ಯತೆ ಕೊಟ್ಟವರು ಬಿ.ಎಸ್. ಯಡಿಯೂರಪ್ಪ. ಮಾದಾರ ಚೆನ್ನಯ್ಯ ಪೀಠಕ್ಕೆ ಅನುದಾನ, ವಾಲ್ಮೀಕಿ ಜಯಂತಿಗೆ ರಜೆ ಘೋಷಿಸಿದವರು ಆಗಿನ ಸಿಎಂ ಯಡಿಯೂರಪ್ಪ. ವಿಪಕ್ಷದವರೂ ಕೊಂಡಾಡುವ ಮಾದರಿಯಲ್ಲಿ ಬಿ.ವೈ. ರಾಘವೇಂದ್ರ ಅವರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅಂಥ ಸಂಸದರನ್ನು ನಾಲ್ಕನೇ ಬಾರಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ 3.5 ಲಕ್ಷದಿಂದ 4 ಲಕ್ಷ ಮತಗಳ ಅಂತರದಿಂದ ಗೆಲ್ಲಿಸುವಂತೆ ಮನವಿ ಮಾಡಿದರು. ಶಿಕಾರಿಪುರ ಕ್ಷೇತ್ರದಲ್ಲಿ ಇತರ ಎಲ್ಲ ಕ್ಷೇತ್ರಗಳಿಗಿಂತ ಹೆಚ್ಚು ಲೀಡ್ ತಂದು ಕೊಡಿ ಎಂದು ಬಿ.ವೈ. ವಿಜಯೇಂದ್ರ ವಿನಂತಿಸಿದರು.

ಎಸ್‌ಸಿ-ಎಸ್‌ಟಿಗಳಿಗೆ ಬಿಎಸ್‌ವೈ ಶಕ್ತಿ ಕೊಟ್ಟಿದ್ದಾರೆ

ಸ್ವಾತಂತ್ರ್ಯಾ ನಂತರ ಈ ದೇಶದಲ್ಲಿ ಎಸ್.ಸಿ- ಎಸ್.ಟಿ ಸಮುದಾಯಗಳಿಗೆ ಆರ್ಥಿಕವಾಗಿ, ಔದ್ಯೋಗಿಕವಾಗಿ, ರಾಜಕೀಯವಾಗಿ ಶಕ್ತಿ ಕೊಡುವ ಪ್ರಾಮಾಣಿಕ ಪ್ರಯತ್ನ ಏನಾದರೂ ನಡೆದಿದ್ದರೆ ಅದು ಪ್ರಧಾನಿ ನರೇಂದ್ರ ಮೋದಿಜೀ ಅವರ ಹಾಗೂ ರಾಜ್ಯದಲ್ಲಿ ಬಸವ ತತ್ವ ಅನುಸರಿಸಿ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಶ್ರಮಿಸಿರುವುದು ಯಡಿಯೂರಪ್ಪ ಅವರ ಅಧಿಕಾರದ ಅವಧಿಯಲ್ಲಿ ಮಾತ್ರ ಎಂದು ಬಿ.ವೈ. ವಿಜಯೇಂದ್ರ ನುಡಿದರು.

ಕಾಂಗ್ರೆಸ್‌ನಿಂದ ನ್ಯಾಯ ಸಿಕ್ಕಿಲ್ಲ

ಸ್ವಾತಂತ್ರ್ಯ ಬಂದು 60-65 ವರ್ಷಗಳ ಕಾಲ ರಾಜ್ಯ ಮತ್ತು ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಪಡೆದಿದೆ. ಕೇವಲ ಚುನಾವಣೆ ಬಂದ ಸಂದರ್ಭದಲ್ಲಿ ಬಾಬಾ ಸಾಹೇಬ ಅಂಬೇಡ್ಕರ್ ಅವರ ಹೆಸರನ್ನು ಹೇಳುವ ಕಾಂಗ್ರೆಸ್ ಪಕ್ಷವು, ದೇಶ- ರಾಜ್ಯದಲ್ಲಿ ತುಳಿತಕ್ಕೆ ಒಳಗಾದ ಸಮಾಜಗಳಿಗೆ ಯಾವುದೇ ರೀತಿಯ ನ್ಯಾಯ ಕೊಡುವ ಕೆಲಸ ಮಾಡಿಲ್ಲ ಎಂದು ಬಿ.ವೈ. ವಿಜಯೇಂದ್ರ ಟೀಕಿಸಿದರು.

ಮತ್ತೊಮ್ಮೆ ಮೋದಿಯನ್ನು ಪ್ರಧಾನಿ ಮಾಡೋಣ

ಸ್ವಾಭಿಮಾನಿ ಬದುಕು ಕಟ್ಟಿಕೊಡಬೇಕೆನ್ನುವ ನಿಟ್ಟಿನಲ್ಲಿ ‘ವಿಶ್ವಕರ್ಮ’ ಯೋಜನೆಯಂತಹ ಮಹತ್ವದ ಯೋಜನೆಯನ್ನು ಜಾರಿಗೆ ತರುವ ಮೂಲಕ “ನಮ್ಮದು ವರ್ಷದ ಕೂಳನ್ನು ಕೊಟ್ಟು ಬದುಕು ಕಟ್ಟಿಕೊಡುವ ಸರ್ಕಾರ” ಎಂದು ತೋರಿಸಿಕೊಟ್ಟವರು ನಮ್ಮ ನರೇಂದ್ರ ಮೋದಿ. ಆದ್ದರಿಂದ ಅವರನ್ನು ಮಗದೊಮ್ಮೆ ಪ್ರಧಾನಿ ಮಾಡುವ ದೃಷ್ಟಿಯಿಂದ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕೆಂದು ಬಿ.ವೈ. ವಿಜಯೇಂದ್ರ ಮನವಿ ಮಾಡಿದರು.

ಇದನ್ನೂ ಓದಿ: Private Laboratory: ಸರ್ಕಾರಿ ಆಸ್ಪತ್ರೆಯಿಂದ 200 ಮೀಟರ್‌ ಒಳಗಿನ ಖಾಸಗಿ ಲ್ಯಾಬ್‌ ಬಂದ್‌; ಸರ್ಕಾರದ ಖಡಕ್‌ ಆದೇಶ!

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಂಸದ ಬಿ.ವೈ.ರಾಘವೇಂದ್ರ, ರಾಜ್ಯ ಉಪಾಧ್ಯಕ್ಷ ರಾಜುಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜೀವ್, ಮಾಜಿ ಸಚಿವ ಬಿ.ಸಿ.ಪಾಟೀಲ, ವಿಧಾನ ಪರಿಷತ್ ಉಪ ನಾಯಕ ಸುನೀಲ್ ವಲ್ಯಾಪುರೆ, ಶಾಸಕರಾದ ಶ್ರೀಮತಿ ಶಾರದಾ ಪೂರ್ಯಾ ನಾಯಕ್, ಮಾಜಿ ಶಾಸಕ ಅಶೋಕ್ ನಾಯಕ್, ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳೀಕೇರಿ, ತಮ್ಮೇಶ್ ಗೌಡ, ಸ್ಥಳೀಯ ಮುಖಂಡರಾದ ಗುರುಮೂರ್ತಿ, ಎಚ್.ಟಿ.ಬಳಿಗಾರ್, ರಾಮಾ ನಾಯಕ್, ಎಸ್.ಹನುಮಂತಪ್ಪ, ತಾಲ್ಲೂಕು ಅಧ್ಯಕ್ಷರು, ಎಸ್.ಸಿ-ಎಸ್.ಟಿ ಮೋರ್ಚಾಗಳ ಅಧ್ಯಕ್ಷರು, ಶಕ್ತಿ ಕೇಂದ್ರ ಹಾಗೂ ಮಹಾ ಶಕ್ತಿಕೇಂದ್ರಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Continue Reading
Advertisement
Electricity Bil
ಸಂಪಾದಕೀಯ19 mins ago

ವಿಸ್ತಾರ ಸಂಪಾದಕೀಯ: ವಿದ್ಯುತ್‌ ದರ ಇಳಿಕೆ ಶ್ಲಾಘನೀಯ ಕ್ರಮ

dina bhavishya read your daily horoscope predictions for February 28 2024
ಭವಿಷ್ಯ1 hour ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Jain (Deemed-to-be University)
ಬೆಂಗಳೂರು6 hours ago

ಜೈನ್ ‘ಸ್ಕೂಲ್ ಆಫ್ ಸೈನ್ಸಸ್‌’ನಲ್ಲಿ ಯಶಸ್ವಿಯಾಗಿ ನೆರವೇರಿದ SciCon-2024; 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ

Siddaramaiah
ಪ್ರಮುಖ ಸುದ್ದಿ7 hours ago

ಪಶು ಸಂಗೋಪನಾ ಇಲಾಖೆ ಆಸ್ತಿ ಅಲ್ಪಸಂಖ್ಯಾತ ಇಲಾಖೆಗೆ ವರ್ಗಾವಣೆ; ಸಿದ್ದರಾಮಯ್ಯ ಆದೇಶ

Reva University
ಬೆಂಗಳೂರು7 hours ago

ರೇವಾ ವಿವಿಯಲ್ಲಿ ಜಿಯೋಪಾಲಿಟಿಕ್ಸ್, ಇಂಟರ್ ನ್ಯಾಷನಲ್ ಸ್ಟಡೀಸ್ ಉನ್ನತ ಕೇಂದ್ರ ಉದ್ಘಾಟಿಸಿದ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ

Reliance Disney
ದೇಶ7 hours ago

Reliance Disney: ರಿಲಯನ್ಸ್‌-ಡಿಸ್ನಿ ವಿಲೀನ, ಮಾಧ್ಯಮದಲ್ಲಿ 70 ಸಾವಿರ ಕೋಟಿ ರೂ. ಹೂಡಿಕೆ

44 Congress workers to get power in corporations and boards
ಪ್ರಮುಖ ಸುದ್ದಿ7 hours ago

Congress Karnataka: ನಿಗಮ-ಮಂಡಳಿಗಳಲ್ಲಿ 44 ಕಾಂಗ್ರೆಸ್‌ ಕಾರ್ಯಕರ್ತರಿಗೆ ಅಧಿಕಾರ ಭಾಗ್ಯ; ಸಿಎಂ ಗ್ರೀನ್ ಸಿಗ್ನಲ್

Puneri Paltan vs Haryana Steelers
ಕ್ರೀಡೆ7 hours ago

Pro Kabaddi: ಹಾಲಿ ಚಾಂಪಿಯನ್​ ಜೈಪುರಕ್ಕೆ ಸೋಲು; ಪುಣೇರಿ-ಹರ್ಯಾಣ ಫೈನಲ್​ ಫೈಟ್​

Mumbai Indians Women vs UP Warriorz
ಕ್ರೀಡೆ8 hours ago

WPL 2024: ಬಲಿಷ್ಠ ಮುಂಬೈಗೆ ಸೋಲುಣಿಸಿ ಗೆಲುವಿನ ಖಾತೆ ತೆರೆದ ಯುಪಿ ವಾರಿಯರ್ಸ್

Yallapur MLA Shivram Hebbar Latest statement
ಉತ್ತರ ಕನ್ನಡ8 hours ago

Uttara Kannada News: ಅನಾರೋಗ್ಯದಿಂದ ರಾಜ್ಯಸಭೆ ಚುನಾವಣೆ ಮತದಾನ ಮಾಡಲು ಸಾಧ್ಯವಾಗಲಿಲ್ಲ ಎಂದ ಹೆಬ್ಬಾರ್

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for February 28 2024
ಭವಿಷ್ಯ1 hour ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ1 day ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

Ghar Wapsi ST Somashekhar and Shivaram Hebbar to quit BJP
ರಾಜಕೀಯ2 days ago

Ghar Wapsi: ಎಸ್‌.ಟಿ. ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಬಿಜೆಪಿಗೆ ಗುಡ್‌ ಬೈ? ಇಂದೇ ರಾಜೀನಾಮೆ?

Rajyasabha Elections 42 Congress MLAs contacted by JDS candidate says DK Shivakumar
ರಾಜಕೀಯ2 days ago

Rajya sabha Election: ಕಾಂಗ್ರೆಸ್‌ನ 42 ಶಾಸಕರನ್ನು ಸಂಪರ್ಕ ಮಾಡಿದ್ದಾರೆ: ಡಿ.ಕೆ. ಶಿವಕುಮಾರ್

read your daily horoscope predictions for february 27 2024
ಭವಿಷ್ಯ2 days ago

Dina Bhavishya : ಇಂದು ಆಪ್ತರಿಂದಲೇ ಈ ರಾಶಿಯವರಿಗೆ ಕಂಟಕ!

Crowd mistakes Arabic words as Quran Verses on the kurta and Pak Women mobbed
ವಿದೇಶ3 days ago

Pak Woman: ಕುರ್ತಾ ಮೇಲಿನ ಅರೇಬಿಕ್ ಪದಗಳನ್ನು ತಪ್ಪಾಗಿ ತಿಳಿದು ಮಹಿಳೆ ಮೇಲೆ ಹಲ್ಲೆಗೆ ಯತ್ನ

read your daily horoscope predictions for february 26 2024
ಭವಿಷ್ಯ3 days ago

Dina Bhavishya : ಈ ಮೂರು ರಾಶಿಯವರು ಇಂದು ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರು ಆಪ್ತರೊಂದಿಗೆ ಗೌಪ್ಯ ವಿಷಯವನ್ನು ಹೇಳುವಾಗ ಎಚ್ಚರ!

Video Viral Student falls under school bus He escaped with minor injuries
ವೈರಲ್ ನ್ಯೂಸ್5 days ago

Video Viral: ಸ್ಕೂಲ್ ಬಸ್‌ನಡಿ ಬಿದ್ದ ವಿದ್ಯಾರ್ಥಿ; ಪಾರಾಗಿದ್ದೇ ಪವಾಡ!

ಟ್ರೆಂಡಿಂಗ್‌