Site icon Vistara News

Car Accident | ಎರಡು ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿ; ಏಳು ಜನರಿಗೆ ಗಾಯ

car accident

ಶಿರಸಿ: ಎರಡು ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿ (Car Accident) ಸಂಭವಿಸಿ ಕಾರಿನಲ್ಲಿದ್ದ ಏಳು ಜನರು ಗಾಯಗೊಂಡ ಘಟನೆ ಸಿದ್ದಾಪುರ ತಾಲೂಕಿನ ಕವಚೂರು ಬಳಿ ನಡೆದಿದೆ.

ತಾಲೂಕಿನ ಹೊಸೂರಿನ ವಿನಾಯಕ್ ನಾಯ್ಕರವರ ಕುಟುಂಬದವರು ಸಿದ್ದಾಪುರದಿಂದ ಉಡುಪಿಗೆ ಮಾರುತಿ ಕಾರಿನಲ್ಲಿ ಹೋಗುತ್ತಿದ್ದರು. ಕವಚೂರು ಸಮೀಪ ಸಾಗುತ್ತಿದ್ದ ಸಂದರ್ಭದಲ್ಲಿ ಸಾಗರದಿಂದ ಸಿದ್ದಾಪುರದ ಕಡೆಗೆ ಬರುತ್ತಿದ್ದ ಮಾರುತಿ ವ್ಯಾಗನಾರ್ ಕಾರು ಮುಖಾಮುಖಿ ಡಿಕ್ಕಿ ಹೊಡೆದಿದೆ.

ಕಾರಿನಲ್ಲಿದ್ದ ಎಲ್ಲ ಪ್ರಯಾಣಿಕರಿಗೂ ಗಾಯಗಳಾಗಿದ್ದು, ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದರೆ, ಗಂಭೀರ ಗಾಯಗಳಾದ ನಾಲ್ಕು ಮಂದಿಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಹೊಸೂರಿನ ಮೋಹನ್ ಕೃಷ್ಣ ನಾಯ್ಕ, ವಿನಾಯಕ ನಾರಾಯಣ ನಾಯ್ಕ, ಸರೋಜಾ ನಾರಾಯಣ ನಾಯ್ಕ, ಶ್ರೀಶೈಲ ತಿಮ್ಮಪ್ಪ ನಾಯ್ಕ, ಬಿಂದುಶ್ರೀ ತಿಮ್ಮಪ್ಪ ನಾಯ್ಕ, ರಾಘವೇಂದ್ರ ಮಂಜ ಮಡಿವಾಳ, ಸಾಧಿಕ್ ಮೌಲಾಸಾಬ್ ಎಂಬುವವರು ಗಾಯಗೊಂಡಿದ್ದಾರೆ.

ಶಿವಮೊಗ್ಗದ ಭದ್ರಾವತಿ ತಾಲೂಕಿನ ಸೀಗೇಬಾಗಿಯ ಸಾಧಿಕ್ ಮೌಲಾಸಾಬ್ ಅತಿವೇಗ ಹಾಗೂ ನಿರ್ಲಕ್ಷತನದಿಂದ ಕಾರು ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಕೆಎಸ್‌ಆರ್‌ಟಿಸಿ ನೌಕರನಾಗಿರುವ ಸಾಧಿಕ್‌ ವಿರುದ್ಧ ಸಿದ್ದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿದ್ದಾಪುರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ | Cyrus Mistry Death | ಮಿಸ್ತ್ರಿ ಇದ್ದ ಕಾರ್‌ ಓಡಿಸುತ್ತಿದ್ದ ಆ ಮಹಿಳೆ ಯಾರು? ಅಪಘಾತಕ್ಕೆ ವೇಗವೇ ಕಾರಣ?

Exit mobile version