Site icon Vistara News

Electric shock : ನಿದ್ದೆಗಣ್ಣಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದ ಯುವಕ ಸ್ಥಳದಲ್ಲೇ ಸಾವು

electric Shock Youth dies on the spot after being hit by a broken electric wire

ಶಿವಮೊಗ್ಗ: ವಿದ್ಯುತ್ ತಗುಲಿ (Electric shock) ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯ ಗವಟೂರಿನ ಹಳೂರು ಗ್ರಾಮದಲ್ಲಿ ಘಟನೆ ನಡೆದಿದೆ. ಕಾರ್ತಿಕ್‌ .ಎಸ್ (19) ಮೃತ ದುರ್ದೈವಿ.

ಶುಕ್ರವಾರ ಬೆಳಗಿನ ಜಾವ ಮನೆ ಮುಂಭಾಗದ IBEX ಬೇಲಿ ಬಳಿ ಮೂತ್ರ ವಿಸರ್ಜನೆ ಮಾಡುವಾಗ ಕರೆಂಟ್ ಶಾಕ್ ಹೊಡೆದಿದೆ. ಏಕಾಏಕಿ ವಿದ್ಯುತ್ ಪ್ರವಹಿಸಿದ್ದು ಕಾರ್ತಿಕ್‌ ಬೇಲಿಯ ಮೇಲೆ ಬಿದ್ದಿದ್ದಾನೆ. ತಕ್ಷಣ ಆತನ ಕೂಗಾಟ ಕೇಳಿ ಕುಟುಂಬಸ್ಥರು ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದಾರೆ, ಆದರೆ ಕಾರ್ತಿಕ್‌ ಬದುಕುಳಿಯಲಿಲ್ಲ.

ಮನೆ ಮುಂಭಾಗದ ಬೇಲಿ ಮೇಲೆ ವಿದ್ಯುತ್ ವೈರ್ ತುಂಡಾಗಿ ಬಿದ್ದಿದ್ದೆ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಕಾರ್ತಿಕ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಬಿಬಿಎ ವ್ಯಾಸಾಂಗ ಮಾಡುತ್ತಿದ್ದ. ರಿಪ್ಪನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Tumkur News : ಸಾಲ ತೀರಿಸಲಾಗದೆ ಅಕ್ಕನ ಮಗಳನ್ನೇ ಮಾರಾಟ ಮಾಡಿದ್ದಳು ಚಿಕ್ಕಮ್ಮ!

“ಅರ್ಧ ಕಿಲೋ ಮೀಟರ್​ ಓಡಿದರೂ ಪತ್ನಿ ದೇಹ ಸಿಗಲೇ ಇಲ್ಲ”- ಮುಂಬೈ ಹಿಟ್‌ ಆ್ಯಂಡ್‌ ರನ್‌ ಬಗ್ಗೆ ಸಂತ್ರಸ್ತ ಹೇಳಿದಿಷ್ಟು

ಮುಂಬೈ: ಶಿವಸೇನೆ ಮುಖಂಡನ ಪುತ್ರನ BMW ಕಾರು ಡಿಕ್ಕಿ(Mumbai Hit And Run) ಹೊಡೆದು ಪತ್ನಿಯನ್ನು ಕಳೆದುಕೊಂಡಿರುವ ಮೀನು ಮಾರಾಟಗಾರ ಪ್ರದೀಪ್‌ ನಖ್ವಾ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಭಾನುವಾರ ಬೆಳಗ್ಗೆ ಪ್ರದೀಪ್‌ ಪತ್ನಿ ಜೊತೆಗೆ ಕೋಳಿವಾಡಕ್ಕೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬಂದ BMW ಕಾರು ಡಿಕ್ಕಿ ಹೊಡೆದಿದೆ. ಪ್ರದೀಪ್‌ ರಸ್ತೆಗೆ ಬಿದ್ದಿದ್ದು, ಅವರ ಪತ್ನಿ ಕಾವೇರಿ ನಖ್ವಾರನ್ನು ಬಹುದೂರ ಎಳೆದೊಯ್ದಿತ್ತು. ಅರ್ಧ ಕಿಲೋಮೀಟರ್‌ ದೂರ ಪ್ರದೀಪ್‌ ಕಾರಿ ಹಿಂದೆ ಓಡಿದರಾದರೂ ತಮಗೆ ಪತ್ನಿಯ ದೇಹ ಕಾಣಲೇ ಇಲ್ಲ ಎಂದು ಪ್ರದೀಪ್‌ ಹೇಳಿದ್ದಾರೆ.

ನಾನು ಕಾರಿನ ಹಿಂದೆಯೇ ಅರ್ಧ ಕಿಲೋ ಮೀಟರ್‌ ಓಡಿದ್ದೇನೆ. ನಾನು ಅಳುತ್ತಿದ್ದೆ. ಕಿರುಚುತ್ತಿದ್ದೆ. ಅವರು ಕಾರನ್ನು ಒಂದು ಕ್ಷಣ ನಿಲ್ಲಿಸಿದ್ದರೂ ಇಂತಹ ದುರ್ಘಟನೆ ನಡೆಯುತ್ತಿರಲಿಲ್ಲ. ನನ್ನ ಮಗಳು ತಾಯಿ ಎಲ್ಲಿ ತಾಯಿ ಎಲ್ಲಿ ಎಂದು ಕೇಳುತ್ತಿದ್ದಾಳೆ. ನಾನು ಅವಳನ್ನು ಎಲ್ಲಿಂದ ಕರೆ ತರಲಿ ಎಂದು ಪ್ರದೀಪ್‌ ಬಹಳ ಬೇಸರದಿಂದ ಹೇಳುತ್ತಾರೆ.

ಮುಂಬೈನ ವೊರ್ಲಿಯಲ್ಲಿ ರಾಜೇಶ್‌ ಶಾ (Rajesh Shah) ಅವರ ಪುತ್ರ ಮಿಹಿರ್‌ ಶಾ (Mihir Shah) ಕುಡಿದು ವಾಹನ ಚಲಾಸುವಾಗ, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ್ದು, ಮಹಿಳೆ ಮೃತಪಟ್ಟಿದ್ದಾರೆ. ಆಕೆಯ ಪತಿಯು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ಬಳಿಕ 24 ವರ್ಷದ ಮಿಹಿರ್‌ ಶಾ ಪರಾರಿಯಾಗಿದ್ದ, ಬಳಿಕ ಪೊಲೀಸರು ಅವನ ತಂದೆಯನ್ನು ವಶಪಡಿಸಿಕೊಂಡಿದ್ದಾರೆ.

ಕಾವೇರಿ ನಖ್ವಾ ಮತ್ತು ಪ್ರದೀಕ್‌ ನಖ್ವಾ ಎಂಬ ದಂಪತಿ ಹೋಗುತ್ತಿದ್ದ ಬೈಕ್‌ಗೆ BMW ಕಾರು ಡಿಕ್ಕಿ ಹೊಡೆದಿದ್ದು, ಕೂಡಲೇ ಮಿಹಿರ್‌ ಶಾ ಎಸ್ಕೇಪ್‌ ಆಗಿದ್ದಾನೆ. ಬೆಳಗ್ಗೆ 5:30ರ ಸಮಯದಲ್ಲಿ ದಂಪತಿ ಸಾಸಾನ್‌ ಡಾಕ್‌ ಮಾರುಕಟ್ಟೆಯಿಂದ ಮೀನು ಖರೀದಿಸಿ ವಾಪಾಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಇನ್ನು ದಂಪತಿ ಪ್ರದೀಕ್‌ ನಖ್ವಾ ಮಾರುಕಟ್ಟೆಯಲ್ಲಿ ಮೀನಿನ ವ್ಯಾಪಾರಿಯಾಗಿದ್ದಾರೆ. ಕಾರು ಡಿಕ್ಕಿಯಾಗುತ್ತಿದ್ದಂತೆ ರಸ್ತೆಗೆ ಬಿದ್ದಿದ್ದ ದಂಪತಿ ಗಂಭೀರವಾಗಿ ಗಾಯಗೊಂಡಿದ್ದರು. ಕಾವೇರಿ ಮತ್ತು ಪ್ರದೀಪ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕಾವೇರಿ ಕೊನೆಯುಸಿರೆಳೆದಿದ್ದಾರೆ.

ಘಟನೆ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಮಿಹಿರ್‌ ಶಾ ನಾಪತ್ತೆಯಾಗಿದ್ದ. ಮಿಹಿರ್‌ ಶಾ ತನ್ನ ಫೋನನ್ನೂ ಸ್ವಿಚ್‌ ಆಫ್‌ ಮಾಡಿಕೊಂಡಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ಶುರು ಮಾಡಿದ್ದರು. ಮಿಹಿರ್‌ ಪೊಲೀಸರಿಗೆ ಹೆದರಿ ತನ್ನ ಪ್ರೇಯಸಿ ಮನೆಯಲ್ಲಿ ಅವಿತಿದ್ದ. ಪೊಲೀಸರು ಆತನನ್ನು ಅರೆಸ್ಟ್‌ ಮಾಡಿದ್ದಾರೆ. ಪೊಲೀಸರ ಪ್ರಕಾರ ಮಿಹಿರ್‌ ಕಳೆದ ರಾತ್ರಿ ಜೂಹೂ ಪ್ರದೇಶದಲ್ಲಿರುವ ಬಾರ್‌ನಲ್ಲಿ ಕಂಠಪೂರ್ತಿ ಕುಡಿದಿದ್ದು. ತನ್ನ ಮನೆಗೆ ಹಿಂದಿರುಗುವ ವೇಳೆ ಲಾಂಗ್‌ ಡ್ರೈವ್‌ ಕರೆದುಕೊಂಡು ಹೋಗುವಂತೆ ಡ್ರೈವರ್‌ಗೆ ಹೇಳಿದ್ದಾನೆ. ವರ್ಲಿಗೆ ತಲುಪುತ್ತಿದ್ದಂತೆ ತಾನು ಕಾರು ಚಲಾಯಿಸುವುದಕ್ಕೆ ಮುಂದಾಗಿದ್ದಾನೆ. ಆಗ ಅತ್ಯಂತ ವೇಗವಾಗಿ ಕಾರು ಚಲಾಯಿಸಿದ ಮಿಹಿರ್, ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದಾನೆ.

ಇನ್ನು ಘಟನೆಗೂ ಮುನ್ನ ಆರೋಪಿ ಮಿಹಿರ್‌ ಶಾಮತ್ತು ಆತನ ಸ್ನೇಹಿತರು ಬಾರ್‌ಗೆ ತೆರಳಿದ್ದು, ಬರೋಬ್ಬರಿ 18 ಸಾವಿರಕ್ಕೂ ಅಧಿಕ ಬಿಲ್‌ ಆಗಿತ್ತು ಎಂಬ ವಿಚಾರ ಪೊಲೀಸ್‌ ತನಿಖೆಯಲ್ಲಿ ಬಯಲಾಗಿದೆ. ಮಿಹಿರ್‌ ಹಾಗೂ ಆತನ ಸೇಹಿತರು ಜೂಹೂನಲ್ಲಿರುವ ಗ್ಲೋಬಲ್‌ ತಾಪಸ್‌ ಬಾರ್‌ಗೆ ತೆರಳಿದ್ದರು ಎನ್ನಲಾಗಿದೆ.

Exit mobile version