Site icon Vistara News

Lokayukta Raid: ಲೋಕಾಯುಕ್ತ ದಾಳಿ ವಿಚಾರ ಮಾಧ್ಯಮಗಳ ಮೂಲಕ ತಿಳಿದುಬಂದಿದೆ ಎಂದ ಗೃಹಸಚಿವ ಆರಗ ಜ್ಞಾನೇಂದ್ರ

Home minister araga jnanendra reaction about lokayukta-raid

ಶಿವಮೊಗ್ಗ: ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್‌ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ (Lokayukta Raid) ನಡೆಸಿರುವುದು ಮಾಧ್ಯಮಗಳ ಮೂಲಕ ತಿಳಿದು ಬಂದಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಮತ್ತೂರಿನಲ್ಲಿ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಆರಗ ಜ್ಞಾನೇಂದ್ರ, ಲೋಕಾಯುಕ್ತ ದಾಳಿ ಬಗ್ಗೆ ಮೀಡಿಯಾದಲ್ಲಿ ನೋಡಿದೆ. ಪ್ರಕರಣ ವಿಚಾರಣೆ ಹಂತದಲ್ಲಿದೆ, ಹೆಚ್ಚಾಗಿ ಏನೂ ಹೇಳಲು ಸಾಧ್ಯವಿಲ್ಲ. 4-5 ಜನರನ್ನು ಬಂಧಿಸಿದ್ದಾರೆ, ಯಾವ ಕಾರಣಕ್ಕೆ ಹಣ ಇಟ್ಟುಕೊಂಡಿದ್ದರು ಗೊತ್ತಾಗಿಲ್ಲ. ವಿಚಾರಣೆ ನಂತರ ಗೊತ್ತಾಗುತ್ತದೆ ಎಂದರು.

ಸಮಾವೇಶಕ್ಕೆ ಆಗಮಿಸುವವರಿಗೆ 500 ರೂ. ಕೊಡಬೇಕು ಎಂದು ಸಿದ್ದರಾಮಯ್ಯ ಹೇಳಿರುವ ಕುರಿತು ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಆಗಾಗ ಸತ್ಯ ಹೇಳುತ್ತಾರೆ. ಕಾಂಗ್ರೆಸ್‌ ಸಮಾವೇಶಕ್ಕೆ ಹಣ ಕೊಟ್ಟು ಜನರನ್ನು ಕರೆತರಬೇಕಾಗುತ್ತಿದೆ ಎನ್ನುವುದು ದುರಂತ ಎಂದರು.

ಇದನ್ನೂ ಓದಿ: Lokayukta raid : ಮಗನ ಮೂಲಕ ಲಂಚಾವತಾರ; ಯಾವುದೇ ಕ್ಷಣದಲ್ಲಿ ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಬಂಧನ ಸಾಧ್ಯತೆ

Exit mobile version