ಹೊಸನಗರ: ಅಕ್ರಮವಾಗಿ ಮರಳು (Sand) ಸಾಗಾಟ ಮಾಡುತ್ತಿದ್ದ ಐದು ಟಿಪ್ಪರ್ ಲಾರಿಗಳನ್ನು ಹೊಸನಗರ (Hosanagara News) ಠಾಣೆಯ ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಜರುಗಿದೆ.
ಹೊಸನಗರ ಪೊಲೀಸ್ ಠಾಣೆಯ ಪಿಎಸ್ಐ ಶಿವಾನಂದ್.ಕೆ ನೇತೃತ್ವದ ಸಿಬ್ಬಂದಿಗಳ ತಂಡ ಸೋಮವಾರ ತಡರಾತ್ರಿ ಖಚಿತ ಮಾಹಿತಿಯ ಮೇರೆಗೆ ಪಟ್ಟಣದ ವಿವಿಧೆಡೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಅಕ್ರಮ ಮರಳು ಸಾಗಿಸುತಿದ್ದ ಐದು ಟಿಪ್ಪರ್ ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: Karnataka Weather: ಇನ್ನೆರಡು ದಿನ ಸೂರ್ಯ ನರ್ತನ; ಕಾಡಲಿದೆ ಸೆಕೆ!
ಅಕ್ರಮ ಮರಳು ತುಂಬಿಕೊಂಡು ಸಾಗಿಸುತ್ತಿರುವ ಮಾಹಿತಿ ದೊರೆತ ಹಿನ್ನಲೆಯಲ್ಲಿ ದುಮ್ಮ ವಿಶ್ವನಾಥ್, ದುಮ್ಮ ಮಹೇಶ್, ವಿಜೇಂದ್ರ ಹರಿದ್ರಾವತಿ, ವಿಜೇತ ಹಾಗೂ ಮಂಜುನಾಥ್ ಸಾಗರ ಎಂಬುವವರಿಗೆ ಸೇರಿದ 5 ಟಿಪ್ಪರ್ ಲಾರಿಗಳನ್ನು ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: Vastu Tips: ಕೆಟ್ಟ ಶಕ್ತಿ ದೂರ ಮಾಡಿ ಪಾಸಿಟಿವ್ ಎನರ್ಜಿ ತುಂಬಲು ಆಫೀಸ್ನಲ್ಲಿ ಈ ಗಿಡಗಳನ್ನು ಇಡಿ
ಕಾರ್ಯಾಚರಣೆಯಲ್ಲಿ ಠಾಣೆಯ ಸಿಬ್ಬಂದಿಗಳಾದ ಅವಿನಾಶ್, ಗಂಗಪ್ಪ, ಗೋಪಾಲಕೃಷ್ಣ ಹಾಗೂ ಸುನೀಲ್ ಇದ್ದರು.