ಸಾಗರ: ಮಹಿಳೆಯೊಬ್ಬಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಜೋಗದ ಶಿರೂರು ಕೆರೆಯಲ್ಲಿ ಶುಕ್ರವಾರ ನಡೆದಿದೆ. ಗಾಯಿತ್ರಿ(43) ಮೃತ ಮಹಿಳೆ.
ಇವರು ಕೆ.ಇ.ಬಿ ನೌಕರ ಶಂಕರ್ ಅವರ ಪತ್ನಿ ಎಂದು ತಿಳಿದು ಬಂದಿದೆ. ಗಾಯತ್ರಿ ಅವರು ಕೆರೆಗೆ ಹಾರುತ್ತಿರುವುದನ್ನು ಹೋಂ ಗಾರ್ಡ್ ಒಬ್ಬರು ಗಮನಿಸಿದ್ದಾರೆ. ಈ ಮಾಹಿತಿಯನ್ನು ಜೋಗ ಠಾಣೆಯ ಪಿಎಸ್ಐ ಅವರಿಗೆ ನೀಡಿದ್ದು,ತಕ್ಷಣ ಸ್ಥಳಕ್ಕಾಗಮಿಸಿದ ಸಬ್ ಇನ್ಸ್ ಪೆಕ್ಟರ್ ನಿರ್ಮಲಾ ಸ್ಥಳೀಯರ ಸಹಕಾರದಿಂದ ಮೃತದೇಹವನ್ನು ಕೆರೆಯಿಂದ ಮೇಲಕ್ಕೆತಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಜೋಗ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ| ಕೌಟುಂಬಿಕ ಕಲಹ: ಮೂರು ಮುದ್ದಾದ ಮಕ್ಕಳ ಜತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ