ಶಿವಮೊಗ್ಗ: ರಾಗಿಗುಡ್ಡದ ಈದ್ ಮಿಲಾದ್ ಮೆರವಣಿಗೆಯಲ್ಲಿ ಉಂಟಾದ ಗಲಭೆಯ ನಂತರ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದ ಶಿವಮೊಗ್ಗದ (shivamogga news) ಸಮೀಪದ ನಗರ ಭದ್ರಾವತಿಯಲ್ಲಿ ಇನ್ನೊಂದು ಹಲ್ಲೆ ಪ್ರಕರಣ (Knife Attack) ನಡೆದಿದ್ದು, ಕೋಮು ಉದ್ವಿಗ್ನತೆಗೆ ಕಾರಣವಾಗುವ ಸೂಚನೆಗಳು ಕಾಣಿಸಿವೆ. ಹಿಂದೂ ಯುವಕನೊಬ್ಬನಿಗೆ ಅನ್ಯ ಕೋಮಿನ ಪುಂಡರು (crime news) ಇರಿದಿದ್ದಾರೆ.
ಸ್ಥಳೀಯರಾದ ನಂದಕುಮಾರ (32) ಎಂಬ ಯುವಕನಿಗೆ ಪುಂಡರು ಚೂರಿಯಿಂದ ಇರಿದಿದ್ದಾರೆ. ಭದ್ರಾವತಿಯ ಹನುಮಂತನಗರದ ಬಡಾವಣೆಯಲ್ಲಿ ಘಟನೆ ನಡೆದಿದೆ. ಚೂರಿಯಿಂದ ಬೆನ್ನಿನ ಮೇಲೆ ಯುವಕರ ಗುಂಪು ಇರಿದಿದ್ದು, ಗಾಯಗೊಂಡ ಯುವಕ ಭದ್ರಾವತಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಕರೆ ಮಾಡಲು ನಿನ್ನ ಮೊಬೈಲ್ ಕೊಡು ಎಂದು ಯುವಕರ ಗುಂಪು ಕೇಳಿತ್ತು. ನಂದಕುಮಾರ ಮೊಬೈಲ್ ಕೊಡಲು ನಿರಾಕರಿಸಿದಾಗ ಆತನ ಮೇಲೆ ಪುಂಡರು ಹಲ್ಲೆ ನಡೆಸಿದ್ದರು. ಇದರ ಬಗ್ಗೆ ದೂರು ನೀಡಲು ನಂದಕುಮಾರ ಪೊಲೀಸ್ ಠಾಣೆಗೆ ತೆರಳಿದ್ದು, ಠಾಣೆಯಿಂದ ವಾಪಸ್ ಬರುತ್ತಿದ್ದಾಗ ಚೂರಿಯಿಂದ ಹಲ್ಲೆ ನಡೆಸಿದ್ದಾರೆ.
ಅನ್ಯಕೋಮಿನ ಯುವಕರಿಂದ ಹಲ್ಲೆ ನಡೆದಿರುವ ಸುದ್ದಿ ತಿಳಿದ ಹಿಂದೂ ಕಾರ್ಯಕರ್ತರು ರಾತ್ರೋರಾತ್ರಿ ಆಸ್ಪತ್ರೆ ಮುಂದೆ ಜಮಾಯಿಸಿದರು. ಪುಂಡರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಶಿವಮೊಗ್ಗದ ರಾಗಿಗುಡ್ಡದಲ್ಲಿ ಉಂಟಾದ ಸನ್ನಿವೇಶದ ಪರಿಣಾಮವಾಗಿ ಶೀಘ್ರವೇ ಎಚ್ಚೆತ್ತುಕೊಂಡಿರುವ ಪೊಲೀಸರು, ತಕ್ಷಣ ಕ್ರಮಕ್ಕೆ ಮುಂದಾಗಿದ್ದಾರೆ. ಎಎಸ್ಪಿ ಅನಿಲಕುಮಾರ ಭೂಮರಡ್ಡಿ ಆಸ್ಪತ್ರೆಗೆ ಭೇಟಿ ನೀಡಿ ಯುವಕನಿಂದ ಮಾಹಿತಿ ಪಡೆದಿದ್ದಾರೆ. ಸ್ಥಳದ ಸಿಸಿಟಿವಿ ಫೂಟೇಜ್‌ಗಳನ್ನು ಪರಿಶೀಲಿಸಲಾಗುತ್ತಿದ್ದು, ಪುಂಡರ ತಲಾಶೆಗೆ ಬಲೆ ಬೀಸಲಾಗಿದೆ.
ಇದನ್ನೂ ಓದಿ: Shivamogga violence : ಶಿವಮೊಗ್ಗ ಗಲಭೆಯಲ್ಲಿ ಮೊದಲ ಕಲ್ಲು ಬಿದ್ದಿದ್ದು ಎಲ್ಲಿಂದ: FIRಗಳಲ್ಲಿ ಏನಿದೆ?