ಶಿವಮೊಗ್ಗ : ಸಿದ್ಧರಾಮಯ್ಯ ಅವರು ಆರ್‌ಎಸ್‌ಎಸ್ ಕುರಿತು ನೀಡಿರುವ ಚಡ್ಡಿ ಅಭಿಯಾನ ಹೇಳಿಕೆಗೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾವಣ ಬಾಲಕ್ಕೆ ಬೆಂಕಿ ಹಚ್ಚಿದ ಲಂಕೆಯೇ ಸುಟ್ಟು ಹೋಯಿತು. ಕಾಂಗ್ರೆಸ್ ಪಕ್ಷವನ್ನು ಚಟ್ಟದಲ್ಲಿಟ್ಟಾಗಿದೆ. ಇನ್ನು ಬೆಂಕಿ ಹಚ್ಚುವುದೊಂದೇ ಕೆಲಸ. ಆ ಕೆಲಸ ನಿಮಗಿಂತ ಚೆನ್ನಾಗಿ ಇನ್ಯಾರು ಮಾಡಲು ಸಾಧ್ಯ? ಚಡ್ಜಿಗೆ ನೀವು ಬೆಂಕಿ ಹಚ್ಜಿ ನೋಡಿ ನಿಮ್ಮ ಬುಡವೇ ಬೆಂದು ಬೂದಿಯಾಗುತ್ತದೆ. RSS ತಂಟೆಗೆ ಬರಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಮೋದಿ ಆರ್‌ಎಸ್‌ಎಸ್ ಚಡ್ಡಿ ಹಾಕಿಕೊಂಡು ಬಂದೇ ದೇಶ ಆಳುತ್ತಿದ್ದಾರೆ. ಚಡ್ಡಿ ಹಳ್ಳಿಯಿಂದ ದಿಲ್ಲಿಯವರೆಗೆ ಹೋಗಿದೆ. ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಹಲವಾರು ಸಿಎಂ, ರಾಜ್ಯಪಾಲರು ಚಡ್ಡಿ ಪ್ರಭಾವದಿಂದ ಆಗಿದ್ದಾರೆ. ಹುಚ್ಚ ಸಿದ್ದರಾಮಯ್ಯ ಹುಚ್ಚು ಪ್ರಚಾರಕ್ಕಾಗಿ ಹುಚ್ಚನಂತೆ ಹೇಳಿಕೆ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ | ಚಡ್ಡಿಗೆ ಅಷ್ಟೊಂದು ಪವರಾ? ಚಡ್ಡಿ ಏನು ರಾಷ್ಟ್ರಧ್ವಜವೇ ಎಂದು ಪ್ರಶ್ನಿಸಿದ ಕಾಂಗ್ರೆಸ್
ಈ ಹುಚ್ಚನನ್ನು ಹಿಡಿದುಕೊಂಡು ಹೇಗೆ ಹೋಗುವುದು ಎಂಬ ಗೊಂದಲ ಕಾಂಗ್ರೆಸ್ ಪಕ್ಷದವರಿಗೇ ಆಗಿದೆ. ಆರ್‌ಎಸ್‌ಎಸ್ ವಿರುದ್ಧ ಮಾತನಾಡಿ ಇಂದಿರಾಗಾಂಧಿ ಅಧಿಕಾರ ಕಳೆದುಕೊಂಡರು ಎಂದರು.
ಆರ್‌ಎಸ್‌ಎಸ್ ಸುಮ್ಮನಿದೆ, ಬಿಜೆಪಿಗೇಕೆ ಕಷ್ಟ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಈಶ್ವರಪ್ಪ, ಆರ್‌ಎಸ್‌ಎಸ್ ನಮಗೆ ಸಂಸ್ಕಾರ ಕೊಟ್ಟಿದೆ. ನಾವು ಆರ್‌ಎಸ್‌ಎಸ್ ಸ್ವಯಂಸೇವಕರು. ಇಂತಹ ಹೇಳಿಕೆಯಿಂದ ನಮಗೆ ನೋವಾಗುವುದು ಸಹಜ ಎಂದು ಈಶ್ವರಪ್ಪ ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ | ಸಿದ್ದರಾಮಯ್ಯ- ಈಶ್ವರಪ್ಪ ಬಣಗಳ ನಡುವೆ ಮಾತಿನ ಚಕಮಕಿ