ಶಿವಮೊಗ್ಗ : ಯುವಕನೊಬ್ಬ ನಡುರಸ್ತೆಯಲ್ಲೇ ತನ್ನ ಪ್ರೇಯಸಿಗೆ ಚೂರಿಯಿಂದ ಇರಿದ (lover stabbed at Shivamogga) ಘಟನೆ ಶಿವಮೊಗ್ಗದಲ್ಲಿ (Shivamogga news) ನಡೆದಿದೆ. ಪರಸ್ಪರ ಪ್ರೀತಿಸುತ್ತಿದ್ದ (Love Case) ಅವರಿಬ್ಬರ ನಡುವೆ ಯಾವುದೋ ಕಾರಣಕ್ಕೆ ಕಿರಿಕ್ ಉಂಟಾಗಿ ಭಾರಿ ಜಗಳ ನಡೆದಿದೆ. ಈ ನಡುವೆ ಯುವಕ ಆಕೆಗೆ ಚೂರಿಯಿಂದ ಇರಿದಿದ್ದಾನೆ.
28 ವರ್ಷದ ಚೇತನ್ ಮತ್ತು 22 ವರ್ಷದ ಅಂಬಿಕಾ ಒಂದೇ ಊರಿನವರು. ಶಿವಮೊಗ್ಗ ಜಿಲ್ಲೆಯ ಆಡೋನಹಳ್ಳಿ ಗ್ರಾಮದ ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಊರಿನಿಂದ ಶಿವಮೊಗ್ಗಕ್ಕೆ ಬಂದಿದ್ದರು. ಶಿವಪ್ಪ ನಾಯಕ ವೃತ್ತದ ಬಳಿ ಬಂದಿದ್ದ ಅವರು ಪರಸ್ಪರ ಜಗಳವಾಡಿಕೊಂಡಿದ್ದರು. ಆಗ ಯುವಕ ಯುವತಿಗೆ ಚೂರಿಯಿಂದ ಇರಿದಿದ್ದಾನೆ.
ನಡು ರಸ್ತೆಯಲ್ಲಿ ಚೂರಿ ಇರಿತಕ್ಕೆ ಒಳಗಾದ ಅಂಬಿಕಾ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಳೆ. ಆಕೆ ಸ್ವಲ್ಪ ದೂರ ಹೋಗಿ ಬಿದ್ದಿದ್ದು, ಕೂಡಲೇ ಅಲ್ಲಿದ್ದವರು ಚೇತನ್‌ನನ್ನು ತಡೆದರು. ಮತ್ತು ಇರಿತಕ್ಕೆ ಒಳಗಾದ ಅಂಬಿಕಾಳನ್ನು ಕೂಡೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಯುವತಿ ಜೀವಾಪಾಯದಿಂದ ಪಾರಾದಂತೆ ಕಂಡುಬಂದಿದ್ದಾಳೆ.
ಸಾರ್ವಜನಿಕರಿಂದ ಯುವಕನಿಗೆ ಧರ್ಮದೇಟು
ಈ ನಡುವೆ, ಯುವತಿಗೆ ನಡು ಬೀದಿಯಲ್ಲಿ ಚೂರಿಯಿಂದ ಇರಿದ ವಿಲಕ್ಷಣ ಪ್ರೇಮಿ ಚೇತನ್‌ನನ್ನು ಹಿಡಿದುಕೊಂಡ ಸಾರ್ವಜನಿಕರು ಆತನಿಗೆ ಚೆನ್ನಾಗಿ ಬಾರಿಸಿದ್ದಾರೆ. ಸಾರ್ವಜನಿಕರ ಕೈಯಲ್ಲಿ ಧರ್ಮದೇಟು ತಿಂದ ಈತನೂ ಅಸ್ವಸ್ಥನಾಗಿದ್ದು, ಆತನನ್ನು ಕೂಡಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜತೆಯಾಗಿ ಬಂದಿದ್ದ ಅವರಿಬ್ಬರು ಯಾಕೆ ಜಗಳಾಡಿಕೊಂಡರು.? ಯುವಕನಿಗೆ ಚೂರಿ ಎಲ್ಲಿ ಸಿಕ್ಕಿತು? ಆತ ಆಕೆಯನ್ನು ಕೊಲೆ ಮಾಡಲೆಂದೇ ಹವಣಿಸುತ್ತಿದ್ದನೇ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾಗಿದೆ.
ಇದನ್ನೂ ಓದಿ: Self Harming : ಯಾರೂ ಹೆಣ್ಣು ಕೊಡುತ್ತಿಲ್ಲ ಎಂಬ ಬೇಸರ; ವಿಷ ಸೇವಿಸಿ ಪ್ರಾಣಬಿಟ್ಟ ಯುವಕ
ಧರ್ಮಸ್ಥಳದಲ್ಲಿ ಬೆಂಗಳೂರಿನ ಅನ್ಯಕೋಮಿನ ಜೋಡಿ ಓಡಾಟ
ಮಂಗಳೂರು: ಬೆಂಗಳೂರು ಮೂಲದ ಯವಕ ಮತ್ತು ಯುವತಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದುದನ್ನು ಪತ್ತೆ ಹಚ್ಚಿ ಪೊಲೀಸರಿಗೆ ಒಪ್ಪಿಸಿದ ಘಟನೆ ಧರ್ಮಸ್ಥಳದಲ್ಲಿ ನಡೆದಿದೆ.
ಬೆಂಗಳೂರು ಮೂಲದ ಇವರ ಓಡಾಟವನ್ನು ಸಂಶಯದಿಂದ ನೋಡಿದ ಸ್ಥಳೀಯರು ವಿಚಾರಿಸಿದ್ದರು. ಇದರಲ್ಲಿ ಹುಡುಗ ಮುಸ್ಲಿಂ, ಹುಡುಗಿ ಹಿಂದು ಎಂದು ತಿಳಿಯುತ್ತಿದ್ದಂತೆಯೇ ಆಕ್ರೋಶ ಭುಗಿಲೆದ್ದಿತ್ತು. ಮುಸ್ಲಿಂ ಯುವಕ ಶಿಸ್ತಿನಿಂದ ಧೋತಿ ಉಟ್ಟುಕೊಂಡಿದ್ದು ಯಾರಿಗೂ ಸಂಶಯ ಬರುವಂತೆ ಇರಲಿಲ್ಲ. ಆದರೂ ಕೆಲವರು ಅವರನ್ನು ಗಮನಿಸಿ ವಿಚಾರಿಸಿದಾಗ ಅವರು ಬೇರೆ ಬೇರೆ ಧರ್ಮದವರು ಎಂಬುದು ತಿಳಿದುಬಂತು.
ಈ ನಡುವೆ, ಇದೊಂದು ನೈತಿಕ ಪೊಲೀಸ್‌ಗಿರಿಯ ಘಟನೆ ಎಂದೂ ದಾಖಲಾಗಿದೆ. ಧರ್ಮಸ್ಥಳ ಪೊಲೀಸರು ಯುವಕ-ಯುವತಿಯ ವಿಚಾರಣೆ ನಡೆಸಿದ್ದು, ಹೆತ್ತವರಿಗೆ ಮಾಹಿತಿ ನೀಡಿದ್ದಾರೆ.