Site icon Vistara News

Murder Case : ಈದ್‌ ಮಿಲಾದ್‌ ಆಚರಣೆ ಕುರಿತು ವಿವಾದ; ಶಿಕಾರಿಪುರದಲ್ಲಿ ಮುಸ್ಲಿಂ ಯುವಕನ ಕೊಲೆ

Murder at Shikaripura

ಶಿವಮೊಗ್ಗ: ಈದ್‌ ಮಿಲಾದ್‌ ಆಚರಣೆ (Eid Milad Celebration) ಕುರಿತು ನಡೆದಿದ್ದ ಸಭೆಯಲ್ಲಿ ಮಾತಿಗೆ ಮಾತು ಬೆಳೆದು ಯುವಕನೊಬ್ಬನನ್ನು ಎದೆಗೆ ಚೂರಿಯಿಂದ ಇರಿದು ಕೊಲೆ (Murder Case) ಮಾಡಲಾಗಿದೆ. ಶಿಕಾರಿಪುರದ (Murder at Shikaripura KHP Colony) ಕೆಎಚ್‌ಪಿ ಕಾಲೊನಿಯಲ್ಲಿ ನಡೆದ ಘರ್ಷಣೆಯಲ್ಲಿ ಜಾಫರ್ ಅಲಿಯಾಸ್ ಸಬ್ಜನ್ ಸಾಬ್ (32) ಎಂಬಾತನನ್ನು ಕೊಲೆ ಮಾಡಲಾಗಿದೆ.

ಶಿಕಾರಿಪುರದ ಕೆಎಚ್‌ಪಿ ಕಾಲೊನಿಯಲ್ಲಿ ಮುಂದಿನ ಈದ್ ಮಿಲಾದ್ ಆಚರಣೆ ಹೇಗೆ ಮಾಡಬೇಕು ಎಂಬ ಬಗ್ಗೆ ಸೋಮವಾರ ಸಭೆ ಕರೆಯಲಾಗಿತ್ತು. ಇದರಲ್ಲಿ ಹಲವಾರು ಗಣ್ಯರು ಮತ್ತು ಸಾಮಾನ್ಯರು ಭಾಗಿಗಳಾಗಿದ್ದರು.

ಈದ್‌ ಮಿಲಾದ್‌ ಕುರಿತು ಚರ್ಚೆ ನಡೆಯುತ್ತಿದ್ದಾಗ ಎರಡು ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ಶುರುವಾಗಿದೆ. ಈ ವೇಳೆ ಸೊಸೈಟಿ ಕೇರಿಯ ಮುಸ್ಲಿಂ ಯುವಕರು ಜಾಫರ್ ಮೇಲೆ ಹಲ್ಲೆ ಮಾಡಿದ್ದಾರೆ. ಹೊಡೆದಾಟ ತೀವ್ರಗತಿ ಪಡೆದುಕೊಂಡು ಒಂದು ಹಂತದಲ್ಲಿ ದುಷ್ಕರ್ಮಿಯೊಬ್ಬ ಜಾಫರ್‌ನ ಎದೆಗೇ ಚೂರಿಯಿಂದ ಇರಿದಿದ್ದಾನೆ.

ರಕ್ತದ ಮಡುವಿನಲ್ಲಿ ಬಿದ್ದ ಜಾಫರ್‌ನನ್ನು ಕೂಡಲೇ ಆಸ್ಪತ್ರೆಗೆ ಒಯ್ಯಲಾಯಿತಾದರೂ ಅಷ್ಟು ಹೊತ್ತಿಗೆ ಪ್ರಾಣ ಪಕ್ಷಿ ಹಾರಿಹೋಗಿತ್ತು.

ಘಟನೆ ತಿಳಿದ ಕೂಡಲೇ ಎಸ್ಪಿ ಮಿಥುನ್ ಕುಮಾರ್ ಅಲ್ಲಿಗೆ ದೌಡಾಯಿಸಿದ್ದಾರೆ. ಕೊಲೆ ಮಾಡಿದ ಆರೋಪಿಗಳು ಈಗ ತಲೆಮರೆಸಿಕೊಂಡಿದ್ದು, ಶಿಕಾರಿಪುರ ಪೊಲೀಸರಿಂದ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಇದನ್ನೂ ಓದಿ: Obscene Act : ಮೆಡಿಕಲ್‌ ಕಾಲೇಜು ಲೇಡಿಸ್‌ ಹಾಸ್ಟೆಲ್‌ ಮುಂದೆ ಪೋಲಿ ಹುಡುಗರ ಪುಂಡಾಟ, ಹಸ್ತಮೈಥುನ

ಕೃಷ್ಣಾ ನದಿಯಲ್ಲಿ ಕಾಲು ಜಾರಿ ಬಿದ್ದ ಯುವಕರು; ಒಬ್ಬ ನೀರುಪಾಲು

ಬೆಳಗಾವಿ : ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಹೊರ ವಲಯದ ಗಡ್ಡೆ ಸಮೀಪದ ಕೃಷ್ಣಾ ನದಿಯಲ್ಲಿ (Krishna River) ಮೂವರು ಯುವಕರು ಮುಳುಗಿದ್ದಾರೆ. ಇಬ್ಬರನ್ನು ರಕ್ಷಣೆ ಮಾಡಲಾಗಿದ್ದರೆ (Drowned in river) ಮತ್ತೊಬ್ಬ ನೀರುಪಾಲಾಗಿದ್ದಾನೆ. ಬೆಳಗಾವಿ ನಗರದ ಗಾಂಧಿ ನಗರದ ನಿವಾಸಿ ಹುಸೇನ್ ಅರಕಟ್ಟೆ ನೀರುಪಾಲಾದವನು.

ಭಾನುವಾರ ಕುಟುಂಬ ಸಮೇತ ಗಡ್ಡೆಯ ಸಿರಾಜುದ್ದೌಲ ದರ್ಗಾಗೆ ತೆರಳಿದ್ದರು. ಸಂಜೆ ಮನೆಗೆ ತೆರಳುವ ಮುನ್ನ ನದಿ ದಡದಲ್ಲಿ ಹುಸೇನ್‌ ಸೇರಿ ಮೂವರು ಕುಳಿತಿದ್ದರು. ಈ ವೇಳೆ ಹುಸೇನ್ ಕಾಲು ಜಾರಿದ್ದು, ನೀರಿಗೆ ಬೀಳುವಾಗ ಇನ್ನಿಬ್ಬರ ಕೈ ಹಿಡಿದಿದ್ದ. ಹೀಗಾಗಿ ಮೂವರು ನೀರಲ್ಲಿ ಕೊಚ್ಚಿ ಹೋಗುತ್ತಿದ್ದರು. ಕೂಡಲೇ ಸ್ಥಳೀಯರು ಸಹಾಯಕ್ಕೆ ಧಾವಿಸಿ ಇಬ್ಬರನ್ನು ರಕ್ಷಣೆ ಮಾಡಿದ್ದಾರೆ.

ಹುಸೇನ್‌ಗಾಗಿ ಶೋಧಕಾರ್ಯ ನಡೆಯುತ್ತಿದ್ದು, ಸ್ಥಳೀಯ ಮೀನುಗಾರರು, ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕುಡಚಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Exit mobile version