Site icon Vistara News

PM Modi in Shivamogga : ಸಭಾಂಗಣದ ಒಳಗೇ ಮೋದಿ‌ ರ‍್ಯಾಲಿ, ಹೃದಯ ತಟ್ಟಿದ ಸಾಮ್ರಾಟ: ಇಲ್ಲಿವೆ ಚಿತ್ರಗಳು

Modi in Shivamogga rally6

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಶಿವಮೊಗ್ಗದ ಅಲ್ಲಮ ಪ್ರಭು ಮೈದಾನದಲ್ಲಿ (PM Modi in Shivamogga) ನಡೆದ ಬೃಹತ್‌ ಬಿಜೆಪಿ ಸಮಾವೇಶಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರಮೋದಿ ಅವರು ಜನರ ನಡುವೆಯೇ ವಾಹನ ರ‍್ಯಾಲಿ ನಡೆಸಿದರು. ಜನರ ನಡುವೆಯೇ ಅವರು ಸಾಗುವ ಮೂಲಕ ಎಲ್ಲರನ್ನೂ ತಲುಪಿದರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 400ಕ್ಕೂ ಆಧಿಕ ಸ್ಥಾನಗಳನ್ನು ಗೆಲ್ಲಿಸಿ ಕೊಡುವ ಭರವಸೆಯೊಂದಿಗೆ ಅವರು ಮುನ್ನುಗ್ಗುತ್ತಿದ್ದಾರೆ.

ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು ಅಲ್ಲಿಂದ ಅಲ್ಲಮ ಪ್ರಭು ಮೈದಾನಕ್ಕೆ ಆಗಮಿಸಿದರು.

ಶಿವಮೊಗ್ಗ, ದಾವಣಗೆರೆ, ಉಡುಪಿ-ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಗಳ ಸಮಾವೇಶ ಇದಾಗಿದ್ದು, ಬಿಜೆಪಿ ಅಭ್ಯರ್ಥಿಗಳಾ ಬಿ.ವೈ ರಾಘವೇಂದ್ರ, ಗಾಯತ್ರಿ ಸಿದ್ದೇಶ್ವರ್‌, ಕೋಟ ಶ್ರೀನಿವಾಸ ಪೂಜಾರಿ ಮತ್ತು ಕ್ಯಾ. ಬ್ರಿಜೇಶ್‌ ಚೌಟ ಭಾಗವಹಿಸಿದ್ದರು. ಬಿಜೆಪಿ ಹಿರಿಯ ನಾಯಕ ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.

ಇದನ್ನೂ ಓದಿ : Modi in Shivamogga LIVE : ಮಲೆನಾಡಿನಲ್ಲಿ ಮೋದಿ ಮತ ಶಿಕಾರಿ, ಬಿಸಿಲಲ್ಲೂ ರಣೋತ್ಸಾಹ : ಇಲ್ಲೇ LIVE ನೋಡಿ

Exit mobile version