Site icon Vistara News

Pocso Case : ಬಾಲಕಿ ಮೇಲೆ ತಿಂಗಳಿನಿಂದ ನಿರಂತರ ಲೈಂಗಿಕ ದೌರ್ಜನ್ಯ; ಶಿರಾಳಕೊಪ್ಪದಲ್ಲಿ ಅಜ್ಮತುಲ್ಲಾ ಅರೆಸ್ಟ್‌

Pocso Case in Shivamogga

ಶಿವಮೊಗ್ಗ: ಮುಸ್ಲಿಂ ಯುವಕನೊಬ್ಬ (Muslim youngster) ಕಳೆದ ಒಂದು ತಿಂಗಳಿನಿಂದ ಅಪ್ರಾಪ್ತ ವಯಸ್ಸಿನ ಬಾಲಕಿ (Minor girl) ಮೇಲೆ ನಿರಂತರ ಲೈಂಗಿಕ ದೌರ್ಜನ್ಯ (Physical abuse) ನಡೆಸುತ್ತಿರುವ ಘಟನೆ ಬೆಳಕಿಗೆ ಬಂದಿದ್ದು ಈಗ ಆತನನ್ನು ಬಂಧಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ (shivamogga News) ಶಿಕಾರಿಪುರದ ಶಿರಾಳಕೊಪ್ಪದಲ್ಲಿ ಈ ಘಟನೆ ನಡೆದಿದೆ. ಶಿರಾಳಕೊಪ್ಪ ಮೂಲಕ ಅಜ್ಮತ್ತುಲ್ಲಾ ಎಂ. ಅಲಿಯಾಸ್ ಇಬ್ಬು (23) ಎಂಬಾತನೇ ಹಿಂದು ಧರ್ಮಕ್ಕೆ ಸೇರಿದ ಬಾಲಕಿಯ ಮೇಲೆ ಕಳೆದ ಒಂದು ತಿಂಗಳಿನಿಂದ ಲೈಂಗಿಕ ದೌರ್ಜನ್ಯ ನಡೆಸುತ್ತಿರುವ ವ್ಯಕ್ತಿ. ಆತನ ಮೇಲೆ ಪೋಕ್ಸೋ ಕಾಯಿದೆಯಡಿ (Pocso Case) ಕೇಸು ದಾಖಲಾಗಿದೆ.

ಬಾಲಕಿಗೆ ವಿವಿಧ ಆಮಿಷಗಳನ್ನು ಒಡ್ಡಿ, ಆಕೆಯನ್ನು ಪುಸಲಾಯಿತಿ ತನ್ನ ದುಷ್ಕೃತ್ಯಕ್ಕೆ ಆತ ಬಳಸಿಕೊಳ್ಳುತಿದ್ದ ಎಂದು ಹೇಳಲಾಗಿದೆ. ಸಾಕಷ್ಟು ಲೈಂಗಿಕ ಅರಿವು ಇಲ್ಲದ ಬಾಲಕಿಗೆ ಇತ್ತೀಚೆಗೆ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಆಗ ವಿಚಾರಿಸಿದಾಗ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ ಬೆಳಕಿಗೆ ಬಂದಿದೆ.

ಇದೀಗ ಶಿರಾಳಕೊಪ್ಪ ಠಾಣೆಯಲ್ಲಿ ಹೆತ್ತವರು ದೂರು ದಾಖಲಿಸಿದ್ದಾರೆ. ಆತನ ಮೇಲೆ ಪರಿಶಿಷ್ಟ ಜಾತಿ/ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆ ಮತ್ತು ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Physical abuse : ಅಬ್ಬಾ ಇವನೆಂಥಾ ಕಾಮುಕ? ; ಅಕ್ಕ-ತಮ್ಮನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ 21ರ ಯುವಕ

ಪ್ರವಾಸದ ನೆಪದಲ್ಲಿ ಬಾಲಕಿ ಮೇಲೆ ಇಬ್ಬರು ಯುವಕರಿಂದ ದೌರ್ಜನ್ಯ;

ಶಿವಮೊಗ್ಗ: ಸಾಗರದಲ್ಲಿ ಇಬ್ಬರು ಯುವಕರು ಸೇರಿ ಒಬ್ಬ ಅಮಾಯಕ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಸಾಗರದ ಅಜಯ್ (32) ಮತ್ತು ಶಾಬಾಜ್‌ (26) ಎಂಬ ಇಬ್ಬರು ದುಷ್ಟರೇ ಈ ರೀತಿಯಾಗಿ ಬಾಲಕಿಯೊಬ್ಬಳ ಮೇಲೆ ದೌರ್ಜನ್ಯ ನಡೆಸಿದವರು. ಅವರ ಮೇಲೆ ಪೋಕ್ಸೊ (Pocso Case), ಅಟ್ರಾಸಿಟಿ ಕಾಯ್ದೆಯಡಿ (Atrocity case) ಕೇಸ್ ದಾಖಲಾಗಿದೆ.

ಶಾಲೆಗೆ ಹೋಗುವ ಈ ಹುಡುಗಿಯನ್ನು ಅಣ್ಣ ಅಣ್ಣ ಎಂಬ ನೆಲೆಯಲ್ಲಿ ಆತ್ಮೀಯತೆ ಬೆಳೆಸಿಕೊಂಡಿದ್ದರು. ಆಗಸ್ಟ್‌ 19ರಂದು ಪ್ರವಾಸದ ನೆಪದಲ್ಲಿ ಕರೆದಿದ್ದಾರೆ. ನಾವಿದ್ದೇವೆ ಹೋಗಿ ಬರೋಣ ಎಂದು ಶಿವಮೊಗ್ಗಕ್ಕೆ ಕರೆದುಕೊಂಡು ಬಂದಿದ್ದಾರೆ. ಪರಿಚಿತರೆಂಬ ನೆಲೆಯಲ್ಲಿ ಆಕೆಯೂ ಅವರ ಜತೆ ಬಂದಿದ್ದಾಳೆ.

ಶನಿವಾರ ಶಿವಮೊಗ್ಗದಲ್ಲಿ ಅಲ್ಲಿಲ್ಲಿ ಸುತ್ತಾಡಿಸಿದ ಇವರು ಬಳಿಕ ಆಕೆಯನ್ನು ಕರೆದುಕೊಂಡು ಸುರಕ್ಷಿತ ಜಾಗವೊಂದಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಆಕೆಗೆ ಮತ್ತು ಬರುವ ಔಷಧ ನೀಡಿದ್ದಾರೆ. ಆಕೆ ಮತ್ತಿಗೆ ಜಾರುತ್ತಿದ್ದಂತೆಯೇ ಇವರು ಮೊದಲೇ ನಿರ್ಧಾರ ಮಾಡಿದಂತೆ ಸರದಿಯಂತೆ ಆಕೆಯ ಮೇಲೆ ಎರಗಿದ್ದಾಳೆ. ಬಳಿಕ ಆಕೆಯನ್ನು ಊರಿಗೆ ತಂದುಬಿಟ್ಟಿದ್ದಾರೆ. ಮನೆಯಲ್ಲಿ ಆಕೆಯ ನೋವು ಕಂಡು ವಿಚಾರಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಯುವಕರು ಪರಾರಿಯಾಗಿದ್ದಾರೆ.

Exit mobile version