ಶಿವಮೊಗ್ಗ: ಮನುಷ್ಯನ ಕಾಮ ಲಾಲಸೆ (Lust of humans) ಯಾವ ಪ್ರಮಾಣದಲ್ಲಿ ಮಿತಿ ಮೀರುತ್ತಿದೆ ಎನ್ನುವುದನ್ನು ಅಳೆಯುವುದೇ ಕಷ್ಟ. ದುರಂತವೆಂದರೆ ಈ ಹುಚ್ಚು ಕಾಮಕ್ಕೆ ಇತ್ತೀಚಿನ ದಿನಗಳಲ್ಲಿ ಪುಟ್ಟ ಪುಟ್ಟ ಮಕ್ಕಳೇ ಹೆಚ್ಚು ಬಲಿಯಾಗುತ್ತಿದ್ದಾರೆ. ಸೋಮವಾರ ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿ 21 ವರ್ಷದ ದುಷ್ಟನೊಬ್ಬ ಎಂಟು ಮತ್ತು ಆರು ವರ್ಷದ ಅಕ್ಕ ಮತ್ತು ತಮ್ಮನ ಮೇಲೆ ಲೈಂಗಿಕ ದೌರ್ಜನ್ಯ (Physical abuse) ನಡೆಸಿದ್ದ ಘಟನೆ ವರದಿಯಾಗಿತ್ತು. ಇದೀಗ ಶಿವಮೊಗ್ಗದ ಸಾಗರದಲ್ಲಿ ಇಬ್ಬರು ಯುವಕರು ಸೇರಿ ಒಬ್ಬ ಅಮಾಯಕ ಬಾಲಕಿಯ (Abusing a girl) ಮೇಲೆ ಏರಿ ಹೋಗಿದ್ದಾರೆ.
ಸಾಗರದ ಅಜಯ್ (32) ಮತ್ತು ಶಾಬಾಜ್ (26) ಎಂಬ ಇಬ್ಬರು ದುಷ್ಟರೇ ಈ ರೀತಿಯಾಗಿ ಬಾಲಕಿಯೊಬ್ಬಳ ಮೇಲೆ ದೌರ್ಜನ್ಯ ನಡೆಸಿದವರು. ಅವರ ಮೇಲೆ ಪೋಕ್ಸೊ (Pocso Case), ಅಟ್ರಾಸಿಟಿ ಕಾಯ್ದೆಯಡಿ (Atrocity case) ಕೇಸ್ ದಾಖಲಾಗಿದೆ.
ಪರಿಶಿಷ್ಟ ಕುಟುಂಬಕ್ಕೆ ಸೇರಿದ ಬಾಲಕಿಗೆ ಪರಿಚಿತರೇ ಆಗಿರುವ ದುಷ್ಟರು ಇವರಾಗಿದ್ದು, ಆಕೆಯನ್ನು ಪ್ರವಾಸದ ನೆಪದಲ್ಲಿ ಕರೆದೊಯ್ದು ದುಷ್ಕೃತ್ಯ ಮೆರೆದಿದ್ದಾರೆ.
ಶಾಲೆಗೆ ಹೋಗುವ ಈ ಹುಡುಗಿಯನ್ನು ಅಣ್ಣ ಅಣ್ಣ ಎಂಬ ನೆಲೆಯಲ್ಲಿ ಆತ್ಮೀಯತೆ ಬೆಳೆಸಿಕೊಂಡಿದ್ದರು ಈ ಯುವಕರು. ಆದರೆ ಅವರ ಮನಸ್ಸಿನಲ್ಲಿ ಇದ್ದ ಭಾವನೆಯೇ ಬೇರೆ. ಆಕೆಯ ಜತೆ ಸಂಪರ್ಕದಲ್ಲಿದ್ದ ಇವರು ಆಗಸ್ಟ್ 19ರಂದು ಪ್ರವಾಸದ ನೆಪದಲ್ಲಿ ಕರೆದಿದ್ದಾರೆ. ನಾವಿದ್ದೇವೆ ಹೋಗಿ ಬರೋಣ ಎಂದು ಶಿವಮೊಗ್ಗಕ್ಕೆ ಕರೆದುಕೊಂಡು ಬಂದಿದ್ದಾರೆ. ಪರಿಚಿತರೆಂಬ ನೆಲೆಯಲ್ಲಿ ಆಕೆಯೂ ಅವರ ಜತೆ ಬಂದಿದ್ದಾಳೆ.
ಶನಿವಾರ ಶಿವಮೊಗ್ಗದಲ್ಲಿ ಅಲ್ಲಿಲ್ಲಿ ಸುತ್ತಾಡಿಸಿದ ಇವರು ಬಳಿಕ ಆಕೆಯನ್ನು ಕರೆದುಕೊಂಡು ಸುರಕ್ಷಿತ ಜಾಗವೊಂದಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಆಕೆಗೆ ಮತ್ತು ಬರುವ ಔಷಧ ನೀಡಿದ್ದಾರೆ. ಆಕೆ ಮತ್ತಿಗೆ ಜಾರುತ್ತಿದ್ದಂತೆಯೇ ಇವರು ಮೊದಲೇ ನಿರ್ಧಾರ ಮಾಡಿದಂತೆ ಸರದಿಯಂತೆ ಆಕೆಯ ಮೇಲೆ ಎರಗಿದ್ದಾಳೆ. ಅರೆ ಮಂಪರಿನಲ್ಲಿದ್ದ ಆಕೆ ನೋವನ್ನು ಹೇಗೋ ಸಹಿಸಿಕೊಂಡಿದ್ದಾಳೆ.
ಸ್ವಲ್ಪ ಹೊತ್ತಿನ ಬಳಿಕ ಅರೆ ಎಚ್ಚರವಾದ ಬಳಿಕ ಆಕೆ ಎದ್ದು ನೋಡಿದರೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದು ತಿಳಿದಿದೆ. ಆಕೆ ಕಣ್ಣೀರು ಹಾಕಿ ಯಾಕೆ ಹೀಗೆ ಮಾಡಿದಿರಿ ಎಂದು ಕೇಳಿದ್ದಾಳೆ ಎನ್ನಲಾಗಿದೆ. ಈ ನಡುವೆ ಹುಡುಗರೇ ಆಕೆಯನ್ನು ಸಾಗರಕ್ಕೆ ಮರಳಿ ತಂದು ಬಿಟ್ಟಿದ್ದಾರೆ. ಆದರೆ, ಯಾವ ಕಾರಣಕ್ಕು ವಿಷಯವನ್ನು ಮನೆಯಲ್ಲಿ ತಿಳಿಸಬಾರದು, ತಿಳಿಸಿದರೆ ನಿನಗೇ ತೊಂದರೆ ಎಂದು ಹೆದರಿಸಿದ್ದಾರೆ.
ಕಲಬುರಗಿಯಲ್ಲಿ ನಡೆದ ಘಟನೆಯ ಪೂರ್ಣ ವಿವರ: Physical abuse : ಅಬ್ಬಾ ಇವನೆಂಥಾ ಕಾಮುಕ? ; ಅಕ್ಕ-ತಮ್ಮನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ 21ರ ಯುವಕ
ನೋವಿನಿಂದಲೇ ಮನೆಗೆ ಬಂದ ಬಾಲಕಿ ಮನೆಯಲ್ಲಿ ವಿಷಯ ತಿಳಿಸಿದರೆ ತನ್ನದೇ ತಪ್ಪಾಗುತ್ತದೆ, ಅವರ ಜತೆಗೆ ಹೋಗಿದ್ದು ಯಾಕೆ ಎಂದು ಕೇಳುತ್ತಾರೆ ಎಂದು ಭಯಗೊಂಡಿದ್ದಳು. ಆದರೆ ಮನೆಯಲ್ಲಿ ಆಕೆಯ ಚಲನವಲನ, ಆಕೆ ಅನುಭವಿಸುತ್ತಿರುವ ನೋವು ಕಂಡು ವಿಚಾರಿಸಿದಾಗ ಸತ್ಯ ಹೊರಗೆ ಬಂದಿದೆ.
ಸೋಮವಾರ (ಆಗಸ್ಟ್ 21) ಸಂಜೆ ಸಾಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಇದನ್ನು ತಿಳಿಯುತ್ತಿದ್ದಂತೆಯೇ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಅವರನ್ನು ಪತ್ತೆ ಹಚ್ಚುವುದಕ್ಕಾಗಿ ಸಾಗರ ಪೊಲೀಸರು ಬಲೆ ಬೀಸಿದ್ದಾರೆ.