Site icon Vistara News

Shivamogga Airport: ಪ್ರಧಾನಿ ಮೋದಿಗೆ ನೀಡಲು ಸಿದ್ಧವಾಗಿದೆ ಶ್ರೀಗಂಧದ ವಿಮಾನ ನಿಲ್ದಾಣ

shivamogga-airport-model prepared to gift Prime Minister Narendra Modi

#image_title

ಶಿವಮೊಗ್ಗ: ರಾಜ್ಯದಲ್ಲಿ ಎರಡನೇ ದೊಡ್ಡ ವಿಮಾನ ನಿಲ್ದಾಣವಾದ ಶಿವಮೊಗ್ಗ ವಿಮಾನ ನಿಲ್ದಾಣವನ್ನು(Shivamogga Airport) ಉದ್ಘಾಟಿಸಲು ಪ್ರಧಾನಿ ಮೋದಿ ಆಗಮಿಸುತ್ತಿರುವಂತೆಯೇ ಅವರಿಗೆ ನೀಡಲು ಭರ್ಜರಿ ಉಡುಗೊರೆಯೊಂದು ಸಿದ್ಧವಾಗಿದೆ.

ಶಿವಮೊಗ್ಗದ ಸಾಗರದ ಕಲಾವಿದರಾದ ಡಿ. ಎಂ. ಗಜಾನನ ಗುಡಿಗಾರ್‌ ಅವರು ತಮ್ಮ ಕುಟುಂಬದೊಂದಿಗೆ ಸೇರಿ ಶಿವಮೊಗ್ಗ ವಿಮಾನನಿಲ್ದಾಣ ಮಾದರಿಯನ್ನು ನಿರ್ಮಿಸಿದ್ದಾರೆ.

ಸಂಪೂರ್ಣ ಶ್ರೀಗಂಧದಲ್ಲೇ ಮಾದರಿಯನ್ನು ತಯಾರಿಸಲಾಗಿದ್ದು, ಶಿವಮೊಗ್ಗ ವಿಮಾನ ನಿಲ್ದಾಣ ಎಂದು ಕನ್ನಡದಲ್ಲಿ ಬರೆಯಲಾಗಿದೆ.

ಭಾರತದ ರಾಷ್ಟ್ರೀಯ ಪುಷ್ಪವಾದ ಕಮಲದ ಮಾದರಿಯಲ್ಲಿ ವಿಮಾನ ನಿಲ್ದಾಣದ ಛಾವಣಿಯನ್ನು ನಿರ್ಮಿಸಲಾಗಿದೆ. ಕಮಲವು ಭಾರತೀಯ ಜನತಾ ಪಕ್ಷದ ಚಿಹ್ನೆಯೂ ಹೌದು.

ಕಲಾವಿದ ಡಾ. ಗಜಾನನ ಗುಡಿಗಾರ್

ಇದನ್ನೂ ಓದಿ: Shivamogga Airport: ಮಲೆನಾಡಿಗೆ ಪ್ರದೇಶಕ್ಕೆ ಯಡಿಯೂರಪ್ಪ ಒಂದು ಕಾಣಿಕೆ: ಸಿಎಂ ಬಸವರಾಜ ಬೊಮ್ಮಾಯಿ

ಕಮಲದ ದಳಗಳ ಮಾದರಿಯ ವಿಮಾನ ನಿಲ್ದಾಣ, ಅದರ ಎದುರು ಒಂದು ವಿಮಾನ ನಿಂತಿರುವಂತೆ ಮಾದರಿ ರೂಪಿಸಲಾಗಿದೆ. ಪ್ರಧಾನಿಯವರು ಕರ್ನಾಟಕಕೆ ಆಗಮಿಸಿದ ಘಳಿಗೆಯನು ಸ್ಮರಣೀಯವಾಗಿಸಲು ಗಜಾನನ ಅವರು ಈ ಉಡುಗೊರೆ ನಿರ್ಮಿಸಿದ್ದಾರೆ.

Exit mobile version