Site icon Vistara News

Shimogga News | ಇರಿತ ಆರೋಪಿಗಳ ಮನೆಗೆ ಪೊಲೀಸ್‌ ದಾಳಿ, ರೌಡಿಗಳ ಗಡಿಪಾರು

Shivamogga News

ಶಿವಮೊಗ್ಗ : ಪ್ರೇಮ್ ಸಿಂಗ್ ಎಂಬವರ ಮೇಲಿನ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಗಣಪತಿ ಹಬ್ಬದ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು (Shimogga News ) ಇಬ್ಬರು ರೌಡಿ ಶೀಟರ್‌ಗಳನ್ನು ಗಡಿಪಾರು ಮಾಡಲಾಗಿದೆ. ಗಣಪತಿ ಹಬ್ಬದ ಹಿನ್ನೆಲೆಯಲ್ಲಿ ಸಾರ್ವಜನಿಕ ಶಾಂತಿಗೆ ಧಕ್ಕೆ ಉಂಟಾಗಬಹುದು ಎಂದು ಈ ಕ್ರಮ ಕೈಗೊಳ್ಳಲಾಗಿದೆ.

ಪೇಮ್‌ ಸಿಂಗ್‌ ಚೂರಿ ಇರಿತ ಪ್ರಕರಣ

ಪ್ರೇಮ್ ಸಿಂಗ್ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ತನ್ವೀರ್, ನದೀಮ್, ರೆಹಮಾನ್ ಹಾಗೂ ಜಬಿ ಮನೆಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಶಿವಮೊಗ್ಗ ಎಸ್ ಡಿಪಿಐ ಕಚೇರಿ ಮೇಲೂ ದಾಳಿ ನಡೆದಿದೆ. ಬೈಪಾಸ್ ಕಚೇರಿಯಲ್ಲಿರುವ ಎಸ್ ಎಇಪಿಐ ಕಚೇರಿಗೆ ಸರ್ಚ್ ವಾರೆಂಟ್ ಮೂಲಕ ದಾಳಿ ಆಗಿದೆ.

ದೊಡ್ಡಪೇಟೆ ಠಾಣೆಯ ಪಿಐ ಅಂಜನ್ ಕುಮಾರ್, ಕುಂಸಿ ಪಿಐ ಹರೀಶ್ ಪಾಟೀಲ್, ವಿನೋಬ ನಗರ ಠಾಣೆಯ ರವಿಕುಮಾರ್, ಸಂಚಾರಿ ಪೊಲೀಸ್ ಠಾಣೆಯ ಪಿಐ ಸಂತೋಷ್, ತುಂಗಾನಗರ ಪೊಲೀಸ್ ಠಾಣೆಯ ಮಂಜುನಾಥ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ | Operation leopard |ಬೆಳಗಾವಿಯಲ್ಲಿ ಸೆರೆಯಾಗದ ಚಿರತೆ; ನಾಳೆಯೂ ಮುಂದುವರಿಯಲಿದೆ ಕಾರ್ಯಾಚರಣೆ

ಸುವ್ಯವಸ್ಥೆ ಕಾಪಾಡಲು ಗಡಿಪಾರು

ರೌಡಿ ಶೀಟರ್‌ಗಳಾದ ಶಮಂತ ಅಲಿಯಾಸ್ ಶಮಂತ ನಾಯ್ಕ (28), ಸಂದೀಪ್ ಅಲಿಯಾಸ್ ಸಂದೀಪ್ ಕುಮಾರ್ ಎಂಬವರನ್ನು (29) ಗಡಿಪಾರು ಮಾಡಲಾಗಿದೆ. ಇಬ್ಬರ ಮೇಲೆ ಹತ್ತಕ್ಕೂ ಹೆಚ್ಚು ಅಪರಾಧ ಪ್ರಕರಣಗಳಿವೆ. ಆಗಸ್ಟ್ 25 ರಿಂದ ಸೆಪ್ಟೆಂಬರ್ 25ರ ವರಗೆ ಗಡಿಪಾರು ಮಾಡಬೇಕೆಂದು ಉಪ ವಿಭಾಗೀಯ ದಂಡಾಧಿಕಾರಿಯಿಂದ ಆದೇಶ ಬಂದಿದೆ.

ಇದನ್ನೂ ಓದಿ | ಶಿವಮೊಗ್ಗ ಅನಾಮಧೇಯ ಪತ್ರ ಪ್ರಕರಣಕ್ಕೆ ಟ್ವಿಸ್ಟ್ | ಪ್ರಣಯ ವಿಲಾಸಕ್ಕಾಗಿ ಫೇಕ್ ಪತ್ರ ಬರೆದ ಕೇಡಿ!

Exit mobile version