Site icon Vistara News

Shivamogga News : ಅಧಿಕಾರಿಗಳ ಕಿರುಕುಳ; ಬಸ್‌ನಲ್ಲೇ ವಿಷ ಕುಡಿದು ಒದ್ದಾಡಿದ ಕೆಎಸ್‌ಆರ್‌ಟಿಸಿ ಡ್ರೈವರ್‌

Shivamogga News KSRTC bus Driver attempts suicide by consuming poison

ಶಿವಮೊಗ್ಗ: ಕೆಎಸ್ಆರ್‌ಟಿಸಿ ಬಸ್ಸಿನಲ್ಲೇ ಡ್ರೈವರ್ ಕಂ ಕಂಡಕ್ಟರ್ (Ksrtc Driver) ವಿಷ ಸೇವಿಸಿ ಆತ್ಮಹತ್ಯೆಗೆ (Self Harming) ಯತ್ನಿಸಿದ್ದಾರೆ. ಶಿವಮೊಗ್ಗದ (Shivamogga News) ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ (Shivamogga bus Stand) ಘಟನೆ ನಡೆದಿದೆ. ಹೊನ್ನಾಳಿ ಡಿಪೋದಲ್ಲಿ ಡ್ರೈವರ್ ಕಂ ಕಂಡಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಬಸವರಾಜ್ (38) ಆತ್ಮಹತ್ಯೆಗೆ ಯತ್ನಿಸಿದವರು.

10 ವರ್ಷದಿಂದ ಕೆಎಸ್‌ಆರ್‌ಟಿಸಿಯಲ್ಲಿ ಸೇವೆ ಸಲ್ಲಿಸುತ್ತಿರುವ ಬಸವರಾಜ್ ಅವರು ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಷ ಕುಡಿದು ಬಸ್‌ನಲ್ಲೇ ಒದ್ದಾಡುತ್ತಿರುವ ದೃಶ್ಯ ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿದೆ.

ಹೊನ್ನಾಳ್ಳಿ ಡಿಪೋದಲ್ಲಿ ಕೆಲಸ ಮಾಡುತ್ತಿದ್ದ ಬಸವರಾಜ್‌ನನ್ನು ಅಧಿಕಾರಿಗಳು ವಿಚಾರಣೆಗೆಂದು ಕರೆಸಿಕೊಂಡಿದ್ದರು. ತನ್ನ ವಿರುದ್ಧ ದಾಖಲಾಗಿದ್ದ ಕೇಸ್‌ಗೆ ಮನ ನೊಂದ ಬಸವರಾಜ್‌ ಶಿವಮೊಗ್ಗ-ಭದ್ರಾವತಿ ಮಾರ್ಗವಾಗಿ ಹೋಗುವ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ನಿನ್ನೆ ಶನಿವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ವಿಷ ಸೇವಿಸಿ ಒದ್ದಾಡುತ್ತಿದ್ದ ಬಸವರಾಜ್‌ನನ್ನು ಕೂಡಲೇ ಅಲ್ಲಿದ್ದ ಸಿಬ್ಬಂದಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಮೆಗ್ಗಾನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಸವರಾಜ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ: Karaga Festival : ಕರಗ ಹೊರಲು ಮೂರು ಗುಂಪುಗಳ ಜಿದ್ದು, ಇತಿಹಾಸ ಪ್ರಸಿದ್ಧ ಆಚರಣೆಯೇ ರದ್ದು

ಮುಟ್ಟಾಗಿದೆ, ಹೊಟ್ಟೆನೋವು ಅಂದ್ರೂ ಡಿಪೋ ಮ್ಯಾನೇಜರ್‌ ಬಿಡ್ತಿಲ್ಲ ಎಂದು ಅತ್ತ ಕೆಎಸ್‌ಆರ್‌ಟಿಸಿ ಕಂಡಕ್ಟರ್‌

ಬೆಂಗಳೂರು: ರಾಜ್ಯ ಸರ್ಕಾರವು ಮಹಿಳೆಯರ ಸಬಲೀಕರಣಕ್ಕಾಗಿ ಶಕ್ತಿ ಯೋಜನೆ ಜಾರಿ ಮಾಡಿದೆ. ಆದರೆ ಶಕ್ತಿ‌ ಯೋಜನೆಗಾಗಿ ಹಗಲಿರುವ ಶ್ರಮಿಸುವ ಮಹಿಳಾ ಕಂಡೆಕ್ಟರ್‌ಗೆ (KSRTC Conductor) ಕಿರುಕುಳ ನೀಡುತ್ತಿರುವ (‌Torture) ಆರೋಪವೊಂದು (Depot manager Torture) ಕೇಳಿ ಬಂದಿದೆ. ಮುಟ್ಟಾಗಿದೆ (Periods)ಅಂದರೂ ಡ್ಯೂಟಿ ಮಾಡಿ ಅಂತಾರೆ ಎಂದು ಕೆಎಸ್‌ಆರ್‌ಟಿಸಿಯ ನಿರ್ವಾಹಕಿ ಕಣ್ಣೀರು ಹಾಕಿದ್ದಾರೆ. ಬೆಂಗಳೂರಿನ ದೀಪಾಂಜಲಿ ನಗರದ ಕೆಎಸ್‌ಆರ್‌ಟಿಸಿ ಡಿಪೋ 5ರ ಕಂಡೆಕ್ಟರ್ ಮಂಜಮ್ಮ ಎಂಬುವವರು ವಿಡಿಯೊ ಮಾಡಿ ಗಳಗಳನೆ ಅತ್ತಿದ್ದಾರೆ.

ಡಿಪೋ ಮ್ಯಾನೇಜರ್‌ ಎಂ ಕೃಷ್ಣಪ್ಪ ಎಂಬುವವರು ಕಿರುಕುಳ ನೀಡುತ್ತಿದ್ದಾರೆ ಎಂದು ಮಂಜಮ್ಮ ಆರೋಪಿಸಿದ್ದಾರೆ. ಕೃಷ್ಣಪ್ಪನ ಟಾರ್ಚರ್ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಕ್ಕೆ ಕೆಲಸಕ್ಕೆ ಬೇಗ ಬಂದರೂ ಡ್ಯೂಟಿ ನೀಡದೆ ಸತಾಯಿಸುತ್ತಿದ್ದಾರೆ. ಎಷ್ಟೇ ತಡವಾದರೂ ಕೆಲಸ ಮುಗಿಸಿ ಮನೆಗೆ ಹೋಗುವಂತೆ ಕಿರಿಕಿರಿ ಮಾಡುತ್ತಿದ್ದಾರೆ ಎಂದಿದ್ದಾರೆ. ಅಧಿಕಾರಿಗಳ ಕಿರುಕುಳಕ್ಕೆ ರೋಸಿ ಹೋಗಿ ಮಂಜಮ್ಮ ಸೇರಿ 44 ಸಿಬ್ಬಂದಿ ಸಿಎಂ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರಿಗೆ ಪತ್ರವನ್ನು ಬರೆದಿದ್ದಾರೆ.

ಇದನ್ನೂ ಓದಿ:

ಪತ್ರದಲ್ಲಿ ಏನಿದೆ?

-ಕೆಲಸಕ್ಕೆ ಹಾಜರಾಗಿದ್ದರೂ, ಬೆಳಗ್ಗೆಯಿಂದ ಸಂಜೆವರೆಗೂ ಡ್ಯೂಟಿ ನೀಡದೆ ಸುಮ್ಮನೆ ರಜೆ ಎಂದು ಬರೆಯುತ್ತಿದ್ದಾರೆ.
-ತಡವಾಗಿ ಗಾಡಿ ಕೊಟ್ಟು ಪೂರ್ತಿ ಕಿಲೋ ಮೀಟರ್ ಮಾಡಬೇಕು ಎಂದು ಕಿರುಕುಳ ನೀಡುತ್ತಿದ್ದಾರೆ.
-ಡಿಪೋ ಮ್ಯಾನೇಜರ್ ಕೇಳಿದರೆ ಬಾಯಿಗೆ ಬಂದ ಹಾಗೆ ಬೈದು ನಿಂದಿಸುತ್ತಾರೆ.
-ಘಟಕದಲ್ಲಿ ಸುಮ್ಮನೆ ಮೂರ್ನಾಲ್ಕು ದಿನ ಕೂರಿಸಿಕೊಂಡು ರಜೆ ಅರ್ಜಿ ಬರೆಸಿಕೊಳ್ಳುತ್ತಿದ್ದಾರೆ ಎಂದು ಹಲವು ಅಂಶಗಳನ್ನು ಪತ್ರದಲ್ಲಿ ಬರೆದು, 44 ಜನರ ಸಹಿ ಹಾಕಿಸಿ ಸಾರಿಗೆ ಸಚಿವರಿಗೆ ಪತ್ರ ಬರೆದಿದ್ದಾರೆ. ಜತೆಗೆ ಸಿಎಂ ಸಿದ್ದರಾಮಯ್ಯರ ಜನಸ್ಪಂದನ ಕಾರ್ಯಕ್ರಮದಲ್ಲೂ ದೂರು ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version