ಶಿವಮೊಗ್ಗ : ಸಾವರ್ಕರ್ ಫ್ಲೆಕ್ಸ್ ಹೆಸರಲ್ಲಿ ಹುಟ್ಟಿಕೊಂಡ ಹಿಂದು-ಮುಸ್ಲಿಂ ತಂಡಗಳ ನಡುವಿನ ಜಟಾಪಟಿಯ ಬಳಿಕ ಆ.15ರಂದು ಚೂರಿ (Shivamogga News) ಇರಿತದಲ್ಲಿ ಗಾಯಗೊಂಡಿದ್ದ ಪ್ರೇಮ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳ ವಿರುದ್ಧ ಪೊಲೀಸರು AUPA (AUPA – THE UNLAWFUL ACTIVITIES (PREVENTION) ACT-1967) ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನ್ಯಾಯಾಂಗ ಬಂಧನದಲ್ಲಿರುವ ನಾಲ್ವರು ಆರೋಪಿಗಳಾದ ತನ್ವೀರ್ ಅಹ್ಮದ್, ನದೀಮ್ ಫೈಸಲ್, ಅಬ್ದುಲ್ ರೆಹಮಾನ್, ಮೊಹಮ್ಮದ್ ಜಬೀ ವಿರುದ್ಧ AUPA ಕಾಯ್ದೆಯನ್ನು ಪೊಲೀಸರು ದಾಖಲಿಸಿದ್ದಾರೆ.
ಇದನ್ನೂ ಓದಿ | ಸಿದ್ದರಾಮಯ್ಯ ಮತ್ತೆ ಕೊಡಗಿಗೆ ತೆರಳಲು ದಿನಾಂಕ ನಿಗದಿ: ಸಿಎಂ, ಪಿಎಂಗೆ ಬಹಿರಂಗ ಸವಾಲು
ಜಬಿ ಹೊರತುಪಡಿಸಿ ಮೂವರನ್ನು ನಾಲ್ಕು ದಿನ ಕಸ್ಟಡಿಗೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು. ಜಬೀಗೆ ಕಾಲಿಗೆ ಗುಂಡೇಟು ತಗುಲಿ ಮೆಗ್ಗಾನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಗುರುವಾರ (ಆ.26) ಆರೋಪಿಗಳ ಮನೆ ಸೇರಿದಂತೆ ಎಸ್‌ಡಿಪಿಐ ಕಚೇರಿ, ಜಬೀ ಸಹೋದರನ ಮನೆಗಳಲ್ಲಿ ಪೊಲೀಸರು ದಾಳಿ ನಡೆಸಿದ್ದರು. ಪ್ರಮುಖ ಸಾಕ್ಷ್ಯಾಧಾರಗಳು ದೊರೆತ ಹಿನ್ನೆಲೆಯಲ್ಲಿ AUPA ಕಾಯ್ದೆಯನ್ನು ಪೊಲೀಸರು ದಾಖಲಿಸಿದ್ದಾರೆ.
ಇದನ್ನೂ ಓದಿ | shimogga clash | ಚೂರಿ ಇರಿತ ಆರೋಪಿ ಜಬಿ ಪಿಎಫ್‌ಐ ಕಾರ್ಯಕ್ರಮದಲ್ಲಿ? ಫೋಟೊ ವೈರಲ್