ರಿಪ್ಪನ್‌ಪೇಟೆ: ಮನೆಯಲ್ಲಿ ಒಣಗಿಸಿಡುತಿದ್ದ ಅಡಿಕೆ (Betelnut) ಹಾಗೂ ರಬ್ಬರ್‌ಶೀಟ್‌ಗಳನ್ನು (Rubber Sheets) ಕಳ್ಳತನ ಮಾಡುತಿದ್ದ ಕಳ್ಳರ ಜಾಲವೊಂದನ್ನು ಭೇದಿಸಿರುವ ಪಟ್ಟಣ ಠಾಣೆಯ ಪೊಲೀಸರು, ಇಬ್ಬರು ಆರೋಪಿಗಳನ್ನು ಮಾಲು ಹಾಗೂ ವಾಹನ ಸಮೇತ ಬಂಧಿಸಿರುವ ಘಟನೆ ಜರುಗಿದೆ.
ರಾಘವೇಂದ್ರ ಹರತಾಳು, ಶ್ರೀಧರ್ ನಂಜವಳ್ಳಿ ಎಂಬುವವೇ ಬಂಧಿತ ಆರೋಪಿಗಳು. ಪ್ರವೀಣ್ ಶಿವಪುರ, ನಾಗಭೂಷಣ್ ಶಿವಪುರ ಮತ್ತು ಪ್ರತಾಪ್ ಎಂಬ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.
ಈಚೆಗೆ ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳಂದೂರು ಗ್ರಾಮದ ವೀರೇಶ್ ಎಂಬುವವರ ಮನೆಯಲ್ಲಿ ಒಣಗಿಸಿದ್ದ 105 ರಬ್ಬರ್ ಶೀಟ್ ಹಾಗೂ ಕ್ವಾಡ್ರಿಗಿ ಗ್ರಾಮದ ಬಾಲರಾಜ್ ಎಂಬುವವರ ಮನೆಯಲ್ಲಿ ಒಣಗಿಸಿಟ್ಟಿದ್ದ 1 ಲಕ್ಷಕ್ಕೂ ಹೆಚ್ಚು ಮೌಲ್ಯದ ಅಡಿಕೆ ಕಳ್ಳತನವಾಗಿತ್ತು ಹಾಗೂ ಇನ್ನಿತರ ಕಡೆಗಳಲ್ಲಿ ರಬ್ಬರ್ ಶೀಟ್‌ಗಳ ಕಳ್ಳತನವಾಗಿತ್ತು. ಈ ಹಿನ್ನಲೆಯಲ್ಲಿ ಪಟ್ಟಣದ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಇದನ್ನೂ ಓದಿ: Ind vs Aus : ಭಾರತ- ಆಸೀಸ್ 3ನೇ ಪಂದ್ಯಕ್ಕೆ ಮಳೆಯ ಅಡಚಣೆ ಆಗಬಹುದೇ?
ಪಿಎಸ್‌ಐ ಪ್ರವೀಣ್ ಎಸ್.ಪಿ. ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬಂಧಿತರಿಂದ ಅಂದಾಜು ಒಂದು ಲಕ್ಷಕ್ಕೂ ಹೆಚ್ಚು ಮೌಲ್ಯದ ಅಡಿಕೆ ಹಾಗೂ 50 ಸಾವಿರಕ್ಕೂ ಹೆಚ್ಚು ಮೌಲ್ಯದ ರಬ್ಬರ್ ಹಾಗೂ ಕೃತ್ಯಕ್ಕೆ ಬಳಸಿದ ವಾಹನವನ್ನು ವಶ ಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: Ind vs Aus : 3ನೇ ಪಂದ್ಯದ ವೇಳೆ ಆಟಗಾರರು ಸೃಷ್ಟಿಸಬಲ್ಲ ಕೆಲವು ಮೈಲುಗಲ್ಲುಗಳ ವಿವರ ಇಲ್ಲಿದೆ
ಕಾರ್ಯಾಚರಣೆಯಲ್ಲಿ ಠಾಣೆಯ ಸಿಬ್ಬಂದಿಗಳಾದ ಶಿವಕುಮಾರ್ ನಾಯ್ಕ್ , ಉಮೇಶ್, ಸಂತೋಷ್ ಕೊರವರ, ಮಧುಸೂಧನ್, ರಾಮಚಂದ್ರ, ಮಂಜುನಾಥ್, ಪ್ರೇಮ್ ಕುಮಾರ್ ಹಾಗೂ ಶಿವಮೊಗ್ಗ ಎಎನ್‌ಸಿ ತಂಡದ ಇಂದ್ರೇಶ್, ಗುರುರಾಜ್ ಮತ್ತು ವಿಜಯ್ ಪಾಲ್ಗೊಂಡಿದ್ದರು.