ಶಿವಮೊಗ್ಗ: ಅಪ್ರಾಪ್ತ ಬಾಲಕನಿಗೆ ವಾಹನ ಚಾಲನೆ ಮಾಡಲು ಅವಕಾಶ ನೀಡಿದ್ದಕ್ಕೆ ಭಾರಿ ದಂಡ (Traffic Violation) ಹಾಕಲಾಗಿದೆ. ನಂದಿನಿ ಹಾಲಿನ ವಾಹನದ ಮಾಲೀಕನಿಗೆ ಶಿವಮೊಗ್ಗದ 4ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ಬರೋಬ್ಬರಿ 25,500 ರೂ. ದಂಡವನ್ನು ವಿಧಿಸಿದೆ.
ಶಿವಮೊಗ್ಗದಲ್ಲಿ ಮಾಲೀಕ ಧನುಷ್ ಎಂಬಾತ 17 ವರ್ಷದ ಬಾಲಕನಿಗೆ ವಾಹನ ಚಲಾಯಿಸಲು ಕೊಟ್ಟಿದ್ದ. ಇದೇ ವೇಳೆ ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸರು, ಸಮವಸ್ತ್ರ ಧರಿಸದೇ ವಾಹನ ಚಾಲನೆ ಮಾಡುತ್ತಿದ್ದ ವಾಹನಗಳ ತಪಾಸಣೆ ಮಾಡುವಾಗ ಅಪ್ರಾಪ್ತ ಬಾಲಕ ಸಿಕ್ಕಿಬಿದ್ದಿದ್ದ. ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿದ್ದ ಅಪ್ರಾಪ್ತ ಬಾಲಕನಿಗೆ ದಂಡ ವಿಧಿಸಿ ಶಿವಮೊಗ್ಗದ 4ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ.
ಮಗನ ಕೈಗೆ ಬೈಕ್ ಕೊಟ್ಟ ತಂದೆಗೆ 25 ಸಾವಿರ ರೂ. ದಂಡ
ನಮ್ಮ ಮಕ್ಕಳು ಸಣ್ಣ ವಯಸ್ಸಲ್ಲೇ ಗಾಡಿ ಓಡಿಸ್ತಾರೆ (Minors driving) ಅಂತ ಹೇಳಿಕೊಳ್ಳುವುದು ಕೆಲವು ಹೆತ್ತವರಿಗೆ ಹೆಮ್ಮೆ ವಿಷಯ. ಬೈಕ್, ಕಾರುಗಳನ್ನು ಮಕ್ಕಳ ಕೈಯಲ್ಲಿ ಕೊಟ್ಟು ಓಡಿಸೋದು ಒಂಥರಾ ಖುಷಿ. ಇನ್ನು ಕೆಲವು ಮಕ್ಕಳು ಹಠ ಮಾಡಿ ಗಾಡಿ ಓಡಿಸ್ತಾರೆ.. ಈ ಎರಡೂ ಕೆಟಗರಿಯವರಿಗೆ ಎಚ್ಚರಿಕೆ (traffic rules) ನೀಡೊ ಒಂದು ಘಟನೆ ಶಿವಮೊಗ್ಗದಲ್ಲಿ (Shivamogga news) ನಡೆದಿದೆ. ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬ ದ್ವಿಚಕ್ರ ವಾಹನ ಚಲಾಯಿಸಿದ್ದಕ್ಕೆ (Minor boy rides scooter) ಅವನ ಅಪ್ಪನಿಗೆ 25 ಸಾವಿರ ರೂ. ದಂಡ (Father gets 25000 penalty) ಬಿದ್ದಿದೆ!
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೊಹಮ್ಮದ್ ಹಯಾನ್ (42) ಎಂಬುವವರು ದಂಡ ತೆತ್ತವರು. ಮೊಹಮ್ಮದ್ ಅವರು ತಮ್ಮ 17 ವರ್ಷದ ಮಗನಿಗೆ ದ್ವಿಚಕ್ರ ವಾಹನವನ್ನು ಓಡಿಸಿಕೊಂಡು ಹೋಗುತ್ತಿದ್ದಾಗ ತೀರ್ಥಹಳ್ಳಿ ಟೌನ್ ದೊಡ್ಮನೆ ಕೇರಿ ಬಳಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ವಾಹನ ಚಾಲನಾ ಪರವಾನಿಗೆ ಇಲ್ಲದೆ ಇರುವುದು, ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿದ್ದಕ್ಕೆ 25 ಸಾವಿರ ದಂಡ ವಿಧಿಸಿ ತೀರ್ಥಹಳ್ಳಿ ಪಿಸಿಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಆದೇಶಿಸಿದೆ.
ಇದನ್ನೂ ಓದಿ: Self Harming : ಜಮೀನಿನಲ್ಲಿ ನೇತಾಡುತ್ತಿತ್ತು ಪೊಲೀಸ್ ಕಾನ್ಸ್‌ಟೇಬಲ್ ಡೆಡ್ ಬಾಡಿ
ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಯುವಕನ ಹುಚ್ಚಾಟ
ಧಾರವಾಡದ ಜುಬಲಿ ವೃತ್ತದಲ್ಲಿ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಯುವಕನೊಬ್ಬ ಹುಚ್ಚಾಟ ಮೆರೆದಿದ್ದಾನೆ. ಕುಡಿದು ಕಾರು ಚಾಲನೆ ಮಾಡಿ, ಖಾಸಗಿ ಬಸ್ ಹಾಗೂ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ. ಕೆಸಿಡಿ ಕಾಲೇಜು ಕಡೆಯಿಂದ ಅತಿವೇಗವಾಗಿ ಚಾಲನೆ ಮಾಡಿ ಬೈಕ್‌ಗೆ ಮೊದಲು ಡಿಕ್ಕಿ ಹೊಡೆದಿದ್ದಾನೆ. ಬಳಿಕ ಖಾಸಗಿ ಬಸ್‌ಗೆ ಗುದ್ದಿ ನಂತರ ತನ್ನದೇ ಕಾರಿನ ಮೇಲೆ ನಿಂತು ಹುಚ್ಚಾಟ ತೋರಿದ್ದಾನೆ. ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯುವಕನನ್ನು ವಶಕ್ಕೆ ಪಡೆದಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ