ಯಾದಗಿರಿ: ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ರಾಜ ವೆಂಕಟಪ್ಪ ನಾಯಕ 113,559 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
ಈ ಬಾರಿ ಇಲ್ಲಿ ಕಾಂಗ್ರೆಸ್‌ನಿಂದ ರಾಜ ವೆಂಕಟಪ್ಪ ನಾಯಕ, ಬಿಜೆಪಿಯಿಂದ ನರಸಿಂಹ ನಾಯಕ (ರಾಜುಗೌಡ) ಹಾಗೂ ಜೆಡಿಎಸ್‌ನಿಂದ ಶ್ರವಣಕುಮಾರ ನಾಯಕ ಕಣದಲ್ಲಿದ್ದರು.
ಇಲ್ಲಿ ಕಳೆದ ನಾಲ್ಕು ಚುನಾವಣೆಗಳಿಂದಲೂ (2004ರಿಂದ) ನೇರ ಹಣಾಹಣಿ ರಾಜಾ ವೆಂಕಟಪ್ಪ ನಾಯಕ ಹಾಗೂ ನರಸಿಂಹ ನಾಯಕರ ನಡುವೆಯೇ ಇದೆ. 200ರಲ್ಲಿ ನರಸಿಂಹ ನಾಯಕ ಕೆಎನ್‌ಡಿಪಿಯಿಂದ, 2008ರಲ್ಲಿ ಬಿಜೆಪಿಯಿಂದ, 2013ರಲ್ಲಿ ವೆಂಕಟಪ್ಪ ನಾಯಕ ಕಾಂಗ್ರೆಸ್‌ನಿಂದ ಗೆದ್ದಿದ್ದರು. 2018ರ ಚುನಾವಣೆಯಲ್ಲಿ ನರಸಿಂಹನಾಯಕ ಬಿಜೆಪಿಯಿಂದ ಸ್ಪರ್ಧಿಸಿ, 22,568 ಮತಗಳ ಅಂತರದಿಂದ ಮತ್ತೊಮ್ಮೆ ಗೆಲುವಿನ ನಗೆ ಬೀರಿ ಮೂರನೇ ಬಾರಿಗೆ ಶಾಸಕರಾಗಿದ್ದರು.
ಇಲ್ಲಿ ಇರುವ ಒಟ್ಟು ಮತಗಳು 268,678. ಪುರುಷರು 135,310 ಹಾಗೂ ಸ್ತ್ರೀಯರು 133,348.
ಇದನ್ನೂ ಓದಿ: Bellary Rural Election Results : ಬಳ್ಳಾರಿ ಗ್ರಾಮೀಣ ಕ್ಷೇತ್ರ ಗೆದ್ದ ನಾಗೇಂದ್ರ, ಸಚಿವ ರಾಮುಲುಗೆ ಸೋಲು