Site icon Vistara News

Shortage of medicines: ರಾಜಧಾನಿ ಬೆಂಗಳೂರಿನಲ್ಲಿ ಸೀಸನಲ್ ಫ್ಲೂಗೆ ಸಿಗ್ತಿಲ್ಲ ಮೆಡಿಸಿನ್ಸ್‌! ರೋಗಿಗಳ ಪರದಾಟ

Medicines not available for the season flu in Bengaluru! Patients struggle

Medicines not available for the season flu in Bengaluru! Patients struggle

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಸೀಸನಲ್‌ ಫ್ಲೂಗೆ (ಹವಾಮಾನ ಬದಲಾವಣೆಯಾದಾಗ ಬರುವ ಸಾಮಾನ್ಯ ಶೀತ ಜ್ವರ) ಸಂಬಂಧಿಸಿದ ಔಷಧಗಳ ಕೊರತೆ (Shortage of medicines) ಎದುರಾಗಿದೆ. ಬೇಸಿಗೆ ಕಾಲದಲ್ಲಿ ಸಾಮಾನ್ಯವಾಗಿ ಕಾಡುವ ಕಾಯಿಲೆಗಳೆಂದರೆ ಟೈಫಾಯ್ಡ್‌ ಜ್ವರ, ಕಾಮಾಲೆ, ದಡಾರ, ಚಿಕನ್‌ ಫಾಕ್ಸ್‌ ಸೇರಿದಂತೆ ಹಲವು ಸೀಸನ್‌ ಫ್ಲೋಗಳು ಜನರನ್ನು ಕಾಡುತ್ತದೆ. ಆದರೆ ಇಂತಹ ಗಂಭೀರ ಕಾಯಿಲೆಗಳಿಗೆ ನೀಡುವ ಔಷಧಗಳನ್ನು ಕೇಳಲು ಹೋದರೆ ಜನರಿಗೆ ನೋ ಸ್ಟಾಕ್‌ ಎಂಬ ಉತ್ತರ ಸಿಗುತ್ತಿದೆ.

ಬೆಂಗಳೂರು ನಗರದಲ್ಲಿರುವ ಮೆಡಿಕಲ್‌ ಸ್ಟೋರ್‌ಗಳಲ್ಲಿ ಔಷಧ ಕೊರತೆ ಇದ್ದು, ಸರಿಯಾದ ಸಮಯಕ್ಕೆ ಜನರಿಗೆ ಔಷಧಗಳು ಸಿಗುವುದು ಕಷ್ಟ ಎನ್ನಲಾಗಿದೆ. ಇಂತಹದೊಂದು ಸಮಸ್ಯೆಯನ್ನು ಆರೋಗ್ಯ ಇಲಾಖೆಯ ಆಯುಕ್ತ ರಣದೀಪ್‌ ತಿಳಿಸಿದ್ದಾರೆ. ಕೋವಿಡ್ ಸೋಂಕು ಜತೆಗೆ ಈಗ ಬೇಸಿಗೆ ಕಾಲದಲ್ಲಿ ಕಾಡುವ ಸಾಂಕ್ರಾಮಿಕ ಕಾಯಿಲೆಗಳು ಜನರನ್ನು ಭಾದಿಸುತ್ತೇವೆ.

ಬಹುತೇಕ ಮಧ್ಯಮ ವರ್ಗದವರು, ಬಡವರು ಅನಾರೋಗ್ಯ ಎಂದರೆ ಸರ್ಕಾರಿ ಆಸ್ಪತ್ರೆ, ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದುಕೊಂಡರೆ, ಜನೌಷಧಿ ಕೇಂದ್ರ ಹಾಗೂ ಜನತಾ ಬಜಾರ್‌, ಜೆನೆರಿಕ್‌ ಔಷಧ ಮಳಿಗೆಯಲ್ಲಿ ಔಷಧಗಳನ್ನು ಖರೀದಿ ಮಾಡುತ್ತಾರೆ. ಆದರೆ ಇದೀಗ ಔಷಧ ಇಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಆರೋಗ್ಯ ಇಲಾಖೆ ಆಯುಕ್ತ ರಂದೀಪ್, ದೀರ್ಘಕಾಲಿಕ ಕಾಯಿಲೆಗಳನ್ನು ಹೊರತುಪಡಿಸಿ ಸೀಸನ್‌ ಫ್ಲೂ ಕಾಣಿಸಿಕೊಂಡಾಗ ಔಷಧಗಳ ಕೊರತೆ ಎದುರಾಗುವುದು ಸಹಜ. ವೈರಲ್‌ ಫೀವರ್‌ಗಳು ಅಲ್ಪಾವಧಿಯ ಅವಶ್ಯಕತೆ ಆಗಿರುವುದರಿಂದ ಬೇಡಿಕೆ ಅನುಗುಣವಾಗಿ ಪೂರೈಕೆ ಮಾಡಲಾಗುತ್ತದೆ.

ಇದನ್ನೂ ಓದಿ: Sumalatha Ambareesh: ಬಿಜೆಪಿಗೆ ಬೆಂಬಲ ಕೊಟ್ಟ ಸುಮಲತಾ; ರಂಗಮಂದಿರದಲ್ಲಿದ್ದ ಫೋಟೊ ತೆರವುಗೊಳಿಸಿ ಆಕ್ರೋಶ

ಈಗಾಗಲೇ ಕೆಎಸ್‌ಎಂಎಲ್‌ಸಿಗೆ ಅಲ್ಪಾವಧಿ ಟೆಂಡರ್‌ ಕರೆದಿದ್ದು, 3-4 ದಿನದೊಳಗೆ ಆ ಪ್ರಕ್ರಿಯೆ ಮುಗಿಯಲಿದೆ. ತುರ್ತು ಅಗತ್ಯ ಇರುವ ಸುಮಾರು 259 ಔಷಧಿಗಳನ್ನು ಟೆಂಡರ್‌ ಮಾಡಿ ಏಪ್ರಿಲ್‌ನಿಂದ ಪೂರೈಕೆ ಮಾಡುವಂತೆ ತಯಾರಿ ನಡೆಸಲಾಗಿದೆ. ಈಗಾಗಲೇ ಆಯುಷ್ಮಾನ್‌ ಭಾರತ ಅಡಿ ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಅನುದಾನ ಹೋಗಿದೆ. ಎಲ್ಲಿ ಔಷಧ ಇಲ್ಲವೇ ಸ್ಥಳೀಯವಾಗಿ ಖರೀಸಲು ಕೂಡ ಅನುಮತಿ ನೀಡಲಾಗಿದೆ ಎಂದು ಆಯುಕ್ತ ರಣದೀಪ್‌ ತಿಳಿಸಿದ್ದಾರೆ.

ರಾಜ್ಯದ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version