ಬೆಂಗಳೂರು: ಶಾಪಿಂಗ್ ಮಾಲ್‌ಗಳಿಗೆ, ಸೂಪರ್ ಮಾರ್ಕೆಟ್‌ಗೆ (Shopping Mall and Super Market) ಕುಟುಂಬ ಸಮೇತ ಹೋದಾಗ ಪುರುಷರಿಗೆ ಬೇಗನೆ ಬೋರ್ (Men feel bore) ಆಗಿಬಿಡುತ್ತದೆ. ಹೆಣ್ಮಕ್ಕಳೂ ಶಾಪಿಂಗ್ (Womens Shopping) ಮಾಡುವಾಗ ನಾವೇನ್ಮಾಡೋಣ ಅಂತ ಬೇಜಾರು ಮಾಡಿಕೊಳ್ಳುವ ಗಂಡಸರಿಗೆ ಒಂದು ಗುಡ್ ನ್ಯೂಸ್ (Good News for Men). ಆದರೆ, ಇದು ಎಲ್ಲ ಪುರುಷರಿಗೆ ಅನ್ವಯ ಅಲ್ಲ!
ವಿಷಯ ಏನಪ್ಪಾ ಅಂದರೆ, ಇನ್ನು ಮುಂದೆ ಶಾಪಿಂಗ್ ಮಾಲ್, ಸೂಪರ್ ಮಾರ್ಕೆಟ್‌ಗಳಲ್ಲೂ ಮದ್ಯ ಮಾರಾಟಕ್ಕೆ (Liqour business) ಸರ್ಕಾರ ಪ್ಲ್ಯಾನ್ ಮಾಡಿದೆ. ಹೀಗಾಗಿ ಇನ್ನು ಮುಂದೆ ಹೆಣ್ಮಕ್ಕಳು ಶಾಪಿಂಗ್‌ಗೆ ಅಂತ ಹೊರಟಾಗ ನೀವು ಹೋಗ್ಬನ್ನಿ, ನಾನು ಬರೋಲ್ಲ ಅನ್ನೋ ಗಂಡಸರು ಕೂಡಾ ನಾನೂ ಬರ್ತೀನಿ ಇರಿ ಅನ್ನಬಹುದು!
ದೊಡ್ಡ ದೊಡ್ಡ ಮಾಲ್, ಸೂಪರ್ ಮಾರ್ಕೆಟ್‌ಗಳಲ್ಲಿ ಆಗಾಗಲೇ ಸಿಎಲ್-2 ಪರವಾನಗಿ ಹೊಂದಿರುವವರಿಂದ ಮದ್ಯ ಖರೀದಿಸಿ ಮಾರಾಟ ಮಾಡಲಾಗುತ್ತಿದೆ. ಆದರೆ, ಮಾಲ್‌ಗಳಿಗೆ ಪ್ರತ್ಯೇಕ ಪರವಾನಗಿ ನೀಡಿಲ್ಲ. ಇದೀಗ ಮಾಲ್, ಸೂಪರ್ ಮಾರ್ಕೆಟ್‌ಗಳಲ್ಲಿ ಮದ್ಯ ಮಾರಾಟಕ್ಕೆ ಪರವಾನಗಿ ನೀಡೋದಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಅಬಕಾರಿ ಸಚಿವರ ಜತೆಗೆ ಒಂದು ಸುತ್ತಿನ ಸಭೆ ನಡೆದಿದೆ ಎಂದು ತಿಳಿದುಬಂದಿದೆ. ಇನ್ನು ಸರ್ಕಾರ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ.
ಅಂದ ಹಾಗೆ ಈ ಸುದ್ದಿ ಓದಿ, ಇದೇನಿದು ಪುರುಷರಿಗೆ ಮಾತ್ರಾನಾ ಅಂತ ಹೆಣ್ಮಕ್ಕಳು ತಲೆ ಕೆಡಿಸಿಕೊಳ್ಳಬೇಕಿಲ್ಲ, ಸಿಟ್ಟು ಮಾಡ್ಕೊಳ್ಳೋದೂ ಬೇಕಾಗಿಲ್ಲ. ಶಾಪಿಂಗ್‌ಗೆ ಬಂದಿರೋರು ಆರಾಮವಾಗಿ ಲಿಕ್ಕರ್ ಶಾಪ್‌ಗೆ ಹೋಗಿ ತಮಗಿಷ್ಟವಾದ ಬ್ರಾಂಡನ್ನು ಚೂಸ್ ಮಾಡಿಕೊಳ್ಳಲು ಅವಕಾಶವಿರುತ್ತದೆ. ಇದು ಪುರುಷರು ಮತ್ತು ಹೆಣ್ಮಕ್ಕಳಿಗೆ ಇಬ್ಬರಿಗೂ ಓಪನ್.
ಇದರ ಹಿಂದೆ ಇರುವುದು ಗ್ಯಾರಂಟಿ ಪಾಲಿಟಿಕ್ಸ್
ಹಾಗಂತ ಇದನ್ನು ಯಾರೋ ಪುರುಷರು ಖುಷಿಯಾಗಿರ್ಲಿ, ಮಾಲ್‌ಗಳಲ್ಲಿ ಮದ್ಯ ಸಿಗ್ಲಿ ಅಂತ ಮಾಡ್ತಿಲ್ಲ ಸರ್ಕಾರ. ಸಾಲು ಸಾಲು ಗ್ಯಾರಂಟಿಗಳನ್ನ ಜಾರಿ ಮಾಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರೋ ಸರ್ಕಾರ, ಇದೀಗ ತನ್ನ ಆದಾಯವನ್ನ ಹೆಚ್ಚಿಸಿಕೊಳ್ಳಲು ಈ ಅಸ್ತ್ರ ಬಳಸಲು ತಯಾರಿ ನಡೆಸಿದೆ. ಮದ್ಯಪ್ರಿಯರಿಗೆ ಗುಡ್‌ನ್ಯೂಸ್ ಕೊಡೋದರ ಜೊತೆಗೆ ಆದಾಯ ಏರಿಕೆಗೂ ಪ್ಲಾನ್ ಮಾಡಿಕೊಂಡಿದೆ.
ಜನರಿಗೆ ಸಾಲು ಸಾಲು ಗ್ಯಾರಂಟಿಗಳನ್ನ ನೀಡಿದ್ದ ಸರ್ಕಾರ, ಇದೀಗ ತನ್ನ ಬೊಕ್ಕಸ ತುಂಬಿಸಿಕೊಳ್ಳಲು ಮಾರ್ಗಗಳನ್ನು ಹುಡುಕುತ್ತಿರುವ ಸರ್ಕಾರ ಅಬಕಾರಿ ಇಲಾಖೆ ಮೇಲೆ ಕಣ್ಣಿಟ್ಟಿದೆ. ಮದ್ಯ ಮಾರಾಟದ ಮೂಲಕ ತನ್ನ ಖಜಾನೆ ತುಂಬಿಸಿಕೊಳ್ಳೋಕೆ ಪ್ಲಾನ್ ಮಾಡಿಕೊಂಡಿದೆ. ಸದ್ಯ ಬಾರ್, ರೆಸ್ಟೋರೆಂಟ್‌ಗಳಲ್ಲಿ ಮಾತ್ರ ಮದ್ಯ ಮಾರಾಟಕ್ಕೆ ಲೈಸೆನ್ಸ್ ನೀಡಿದ್ದ ಸರ್ಕಾರ, ಇನ್ಮುಂದೆ ಮಾಲ್ ಹಾಗೂ ಸೂಪರ್ ಮಾರ್ಕೆಟ್‌ಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ನೀಡಲು ಮುಂದಾಗಿದೆ.
ಅಬಕಾರಿ ತೆರಿಗೆ ಸಂಗ್ರಹವೂ ಹೆಚ್ಚಳ
ಈ ಹಿಂದೆ ಅಬಕಾರಿ ಸುಂಕವನ್ನ ಹೆಚ್ಚಿಸಿದ್ದ ಸರ್ಕಾರ 30 ಸಾವಿರ ಕೋಟಿ ತೆರಿಗೆ ಸಂಗ್ರಹಕ್ಕೆ ಟಾರ್ಗೆಟ್ ನೀಡಿತ್ತು. ಸದ್ಯ ಏಪ್ರಿಲ್ 1ರಿಂದ ಆ.28ವರೆಗೆ 13,515 ಕೋಟಿ ಆದಾಯ ಸಂಗ್ರಹವಾಗಿದೆ. ಇದೀಗ 1994ರ ನಂತರ ಹೊಸ ಸಿಎಲ್-2, ಸಿಎಲ್-9 ಪರವಾನಗಿ ನೀಡದ ಸರ್ಕಾರ, ಹೊಸ ಪಬ್‌ಗಳಿಗೂ ಲೈಸೆನ್ಸ್ ನೀಡೋ ಮೂಲಕ ಆದಾಯ ಹೆಚ್ಚಿಸಕೊಳ್ಳೋಕೆ ಸಜ್ಜಾಗಿದೆ. ಅಲ್ಲದೇ ಲೈಸೆನ್ಸ್ ವರ್ಗಾವಣೆ ಶುಲ್ಕವನ್ನು ಕೂಡ ಶೇಕಡ 5ರಷ್ಟು ಹೆಚ್ಚಳ ಮಾಡುವ ಯೋಚನೆಯಲ್ಲಿದೆ.
ಇದನ್ನೂ ಓದಿ: Drink and Drive!: ಎರಡು ಪೆಗ್ ಹಾಕಿ ಡ್ರೈವ್ ಮಾಡಲು ಅವಕಾಶ ಕೊಡಿ ಪ್ಲೀಸ್; ಲಿಕ್ಕರ್ ಅಸೋಸಿಯೇಷನ್ ಮನವಿ!
ಗ್ಯಾರಂಟಿಗಳ ಮೂಲಕ ಆರ್ಥಿಕ ಸ್ಥಿತಿಯಲ್ಲಿ ಅಸಮತೋಲನ ಕಾಣುತ್ತಿರುವ ಸರ್ಕಾರಕ್ಕೆ ಅಬಕಾರಿ ಇಲಾಖೆ ಚಿನ್ನದ ಮೊಟ್ಟೆ ಇಡುವ ಕೋಳಿಯಂತೆ ಕಾಣುತ್ತಿದೆ. ಮದ್ಯದ ಮೇಲೆ ಎಷ್ಟೇ ಟ್ಯಾಕ್ಸ್ ಹಾಕಿದರೂ ಕೇಳಲ್ಲ ಅನ್ನೋದು ಕೂಡಾ ಸರ್ಕಾರಕ್ಕಿರುವ ಒಂದು ನೆಮ್ಮದಿ!