Site icon Vistara News

Siddalinga Swamiji: ಹೃದಯಾಘಾತದಿಂದ ಅರಭಾವಿ ಮಠದ ಸಿದ್ದಲಿಂಗ ಸ್ವಾಮೀಜಿ ಲಿಂಗೈಕ್ಯ

Siddalinga Swamiji

ಬೆಳಗಾವಿ: ಅರಭಾವಿ ಮಠದ ದುರದುಂಡೇಶ್ವರ ಸಿದ್ಧಸಂಸ್ಥಾನ ಮಠದ ಶ್ರೀ ಸಿದ್ದಲಿಂಗ ಮಹಾ ಸ್ವಾಮೀಜಿ (64) ಅವರು ಹೃದಯಾಘಾತದಿಂದ ಭಾನುವಾರ ರಾತ್ರಿ ಲಿಂಗೈಕ್ಯರಾದರು. ಮಠದಲ್ಲಿರುವಾಗಲೇ ಸ್ವಾಮೀಜಿಗೆ (Siddalinga Swamiji) ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಗೋಕಾಕ್‌ನ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಲಿಂಗೈಕ್ಯರಾಗಿದ್ದಾರೆ.

ಸ್ವಾಮೀಜಿ ನಿಧನದಿಂದ ಅಪಾರ ಭಕ್ತ ಸಮೂಹ ಶೋಕಸಾಗರಲ್ಲಿ ಮುಳುಗಿದೆ. ಸ್ವಾಮೀಜಿಯ ಅಂತಿಮ ದರ್ಶನ ಪಡೆಯಲು ಜಿಲ್ಲೆಯ ಗೋಕಾಕ ತಾಲೂಕಿನ ಅರಭಾವಿಯಲ್ಲಿರುವ ದುರದುಂಡೇಶ್ವರ ಮಠದ ಕಡೆ ಭಕ್ತರು ಧಾವಿಸುತ್ತಿದ್ದಾರೆ.

ಇದನ್ನೂ ಓದಿ | KC Raghu : ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಆಹಾರ ತಜ್ಞ ಕೆ.ಸಿ.ರಘು ಇನ್ನಿಲ್ಲ

Exit mobile version