Site icon Vistara News

VISTARA TOP 10 NEWS : ಸಿದ್ದರಾಮಯ್ಯ-ಡಿಕೆಶಿ ಜಾತಿ ಗಣತಿ ವಾರ್; ಬೆಂಗಳೂರಿನಲ್ಲಿ ತಾಲಿಬಾನ್ ಶಿಕ್ಷಣ ಮತ್ತಿತರ ಪ್ರಮುಖ ಸುದ್ದಿಗಳು

Masala Dose

1. ಸಿದ್ದರಾಮಯ್ಯ-ಡಿಕೆಶಿ ಮಧ್ಯೆ ಜಾತಿ ಗಣತಿ ವಾರ್;‌ ರಾಹುಲ್‌ ಹೆಸರು ತಂದ ಸಿಎಂ!
ಬೆಂಗಳೂರು: ಎಚ್‌. ಕಾಂತರಾಜು ನೇತೃತ್ವದ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿರುವ ‘ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ -2015’ ವರದಿ (ಜಾತಿ ಗಣತಿ – Caste Census) ಈಗ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ನಡುವಿನ ನೇರ ಸಂಘರ್ಷಕ್ಕೆ ಕಾರಣವಾಗಿದೆ. ಜಾತಿ ಗಣತಿ ವರದಿಯನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬಾರದು ಎಂಬ ಒಕ್ಕಲಿಗರ ಸಂಘದ ಮನವಿ ಪತ್ರಕ್ಕೆ ಡಿ.ಕೆ. ಶಿವಕುಮಾರ್‌ ಮನವಿ ಸಹಿ ಹಾಕುತ್ತಿದ್ದಂತೆ, ಇತ್ತ ಸಿಎಂ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದು, ರಾಹುಲ್‌ ಗಾಂಧಿ ಅವರ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ. ಅವರ ನಿಲುವಿಗೆ ನನ್ನ ಪೂರ್ಣ ಸಹಮತ ಇದೆ ಎಂದು ಹೇಳುವ ಮೂಲಕ ಡಿಕೆಶಿಯನ್ನು ಇಕ್ಕಟ್ಟಿಗೆ ಸಿಲುಕಿಸುವ ದಾಳ ಉರುಳಿಸಿದ್ದಾರೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : Caste Census : ಜಾತಿ ಗಣತಿ ವರದಿ ತಿರಸ್ಕಾರ ಮನವಿಗೆ ಸಹಿ ಹಾಕಿದ ಡಿ.ಕೆ. ಶಿವಕುಮಾರ್!

2. ಕೆಲವೇ ದಿನದಲ್ಲಿ 30-40 ಶಾಸಕರು ಕಾಂಗ್ರೆಸ್‌ನಿಂದ ಔಟ್‌ ಎಂದ ಕಟೀಲ್‌
ಮಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಮತ್ತಿತರ ಕಾಂಗ್ರೆಸ್‌ ನಾಯಕರು ಆಪರೇಷನ್‌ ಹಸ್ತ (Operation Hasta) ನಡೆಸಲು ಪ್ರಯತ್ನ ನಡೆಸುತ್ತಿದ್ದಾರೆ. ಅದರ ನಡುವೆಯೇ ಹಸ್ತದೊಳಗೇ ಆಪರೇಷನ್‌ ನಡೆಯುತ್ತಿರುವುದು ಅವರಿಗೆ ಗೊತ್ತಾಗುತ್ತಿಲ್ಲ. ಇನ್ನು ಕೆಲವೇ ದಿನಗಳಲ್ಲಿ 30-40 ಶಾಸಕರು ಕಾಂಗ್ರೆಸ್‌ನಿಂದ ಹೊರಬರಲಿದ್ದಾರೆ ಎಂದು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ (Nalin Kumar Kateel) ಹೇಳಿದ್ದಾರೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.

3. ಬೆಂಗಳೂರಿನ ಯತೀಮ್‌ ಖಾನಾದಲ್ಲಿ 200 ಮಕ್ಕಳಿಗೆ ತಾಲಿಬಾನ್‌ ಶಿಕ್ಷಣ?
ಬೆಂಗಳೂರು: ರಾಜಧಾನಿಯ ಮುಸ್ಲಿಂ ಅನಾಥಾಶ್ರಮವೊಂದರಲ್ಲಿ (Muslim Yateem Khana) 200 ಪುಟ್ಟ ಪುಟ್ಟ ಮಕ್ಕಳು ಅಸಹನೀಯ ಬದುಕು ಬದುಕುತ್ತಿದ್ದು, ಅವರಿಗೆ ತಾಲಿಬಾನ್‌ ಮಾದರಿಯಲ್ಲಿ ಶಿಕ್ಷಣ (Taliban Education) ನೀಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮಕ್ಕಳನ್ನು ವಸ್ತುಶಃ ಕೋಣೆಗಳಲ್ಲಿ ಕೂಡಿ ಹಾಕಲಾಗಿದ್ದು, ಅವರಿಗೆ ಅಕಾಡೆಮಿಕ್‌ ಶಿಕ್ಷಣ ನೀಡಲಾಗುತ್ತಿಲ್ಲ, ಕೇವಲ ಇಸ್ಲಾಮಿಕ್‌ ಧಾರ್ಮಿಕ ಶಿಕ್ಷಣ (Islamic Education) ನೀಡಲಾಗುತ್ತಿದೆ ಎಂದು ರಾಷ್ಟ್ರೀಯ ಮಕ್ಕಳ ಆಯೋಗದ ಅಧ್ಯಕ್ಷರೇ (National Children Commission president) ಭೇಟಿ ನೀಡಿ ದೂರು (Taliban Training) ನೀಡಿದ್ದಾರೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.

4. ಕರ್ನಾಟಕಕ್ಕೆ ತಪ್ಪಿದ ಟೆಸ್ಲಾ ಫ್ಯಾಕ್ಟರಿ ಮಹಾರಾಷ್ಟ್ರ, ತಮಿಳು ನಾಡು, ಗುಜರಾತ್‌ನಲ್ಲಿ ಸ್ಥಾಪನೆ?
ನವದೆಹಲಿ: ಅಮೆರಿಕ ನಿರ್ಮಿತ ಟೆಸ್ಲಾ ಕಾರುಗಳನ್ನು (Tesla Car) ಭಾರತೀಯ ಮಾರುಕಟ್ಟೆಗೆ (Indian Market) ತರುವ ಸಂಬಂಧ ಟೆಸ್ಲಾ ಕಂಪನಿ ಮತ್ತು ಭಾರತೀಯ ಸರ್ಕಾರವು (Indian Government) ಒಪ್ಪಂದವನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. ಮುಂದಿನ ವರ್ಷ ಟೆಸ್ಲಾ ಭಾರತೀಯ ಮಾರುಕಟ್ಟೆಗೆ ಪ್ರವೇಶ ಪಡೆಯಲಿದೆ ಬ್ಲೂಮ್‌ಬರ್ಗ್ ತಿಳಿಸಿದೆ. 2024ರಲ್ಲಿ ಟೆಸ್ಲಾ ಕಂಪನಿ ಭಾರತದಲ್ಲಿ ಫ್ಯಾಕ್ಟರಿ (Tesla Factory) ಕೂಡ ಆರಂಭಿಸಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಟೆಸ್ಲಾ ಕಂಪನಿ ಭಾರತಕ್ಕೆ ಎಂಟ್ರಿ ಕೊಡಲಿದೆ ಎನ್ನುವ ಸುದ್ದಿಗಳು ಮೊದಲಿಗೆ ಹೊರ ಬಂದಾಗಲೇ ಕರ್ನಾಟಕದಲ್ಲಿ ಫ್ಯಾಕ್ಟರಿ ತೆರೆಯಬಹುದು ಎಂದು ಹೇಳಲಾಗಿತ್ತು. ಆದರೆ, ಈಗ ಕಂಪನಿಯ ಯೋಜನೆಗಳು ಬದಲಾಗಿವೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.

5. ಇತಿಹಾಸದ ಪಠ್ಯದಲ್ಲಿ ರಾಮಾಯಣ, ಮಹಾಭಾರತ! ಶಾಲೆಗಳಲ್ಲಿ ಕಲಿಸಲು ಎನ್‌ಸಿಇಆರ್‌ಟಿಗೆ ಶಿಫಾರಸು
ನವದೆಹಲಿ: ರಾಮಾಯಣ (Ramayana) ಮತ್ತು ಮಹಾಭಾರತದಂತಹ (Mahabhart) ಮಹಾಕಾವ್ಯಗಳನ್ನು (Epics of India) ಭಾರತದ ‘ಶಾಸ್ತ್ರೀಯ ಅವಧಿ’ ಅಡಿಯಲ್ಲಿ ಇತಿಹಾಸದ ಪಠ್ಯಕ್ರಮದ ಭಾಗವಾಗಿ ಶಾಲೆಗಳಲ್ಲಿ ಕಲಿಸಬೇಕು ಎಂದು ಉನ್ನತ ಮಟ್ಟದ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಸಮಿತಿ ಶಿಫಾರಸು ಮಾಡಿದೆ. ಹಾಗೆಯೇ, ಸಂವಿಧಾನದ ಪೀಠಿಕೆಯನ್ನು (Preamble of the Constitution) ಎಲ್ಲಾ ತರಗತಿಗಳ ಗೋಡೆಗಳ ಮೇಲೆ ಸ್ಥಳೀಯ ಭಾಷೆಗಳಲ್ಲಿ ಬರೆಯುವಂತೆ ಸಮಿತಿಯು ಶಿಫಾರಸು ಮಾಡಿದೆ ಎಂದು ಸಮಿತಿಯ ಅಧ್ಯಕ್ಷ ಪ್ರೊ ಸಿ ಐ ಐಸಾಕ್ ತಿಳಿಸಿದ್ದಾರೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.

6.ಭಾರತ ವಿಶ್ವ ಕಪ್​ ಸೋಲಲು ಮೋದಿಯ ಕಾಲ್ಗುಣವೇ ಕಾರಣ ಎಂದ ರಾಹುಲ್​
ನವದೆಹಲಿ: 2023 ರ ವಿಶ್ವಕಪ್ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 6 ವಿಕೆಟ್​ಗಳ ಸೋಲನುಭವಿಸಲು ಪಂದ್ಯವನ್ನು ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಹೋಗಿದ್ದೇ ಕಾರಣ. ಅವರೊಬ್ಬ ಅಪಶಕುನ ವ್ಯಕ್ತಿ ಎಂಬುದಾಗಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ (Rahul Gandhi) ಟೀಕಿಸಿದ್ದಾರೆ. ರಾಜಸ್ಥಾನದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಭಾರತವು ಪಂದ್ಯವನ್ನು ಸೋಲುವಂತೆ ಮಾಡಿದ್ದು “ಪನೌತಿ” (ಕೆಟ್ಟ ಶಕುನ) ಎಂದು ರಾಹುಲ್​ ಹೇಳಿದ್ದಾರೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಇದನ್ನೂ ಓದಿ : 24,789 ಕೋಟಿಗೆ ವಿಶ್ವಕಪ್‌ ಪ್ರಸಾರ ಹಕ್ಕು ಪಡೆದಿದ್ದ ಡಿಸ್ನಿ; 2.2 ಲಕ್ಷ ಕೋಟಿ ರೂ. ಆದಾಯ!

7. ಬಾಹ್ಯಾಕಾಶದಲ್ಲಿ ಚೀನಾದ ಸೇನಾ ನೆಲೆ; ಇನ್ನು ಆಕಾಶದಿಂದಲೇ ಎರಗಲಿದೆ ಹೈಪರ್‌ಸಾನಿಕ್ ಕ್ಷಿಪಣಿ!
ಮಾರಣಾಂತಿಕ ಹೈಪರ್‌ಸಾನಿಕ್ (Hypersonic) ಶಸ್ತ್ರಾಸ್ತ್ರಗಳನ್ನು ಹೊಂದಿರುವ ವಿಶ್ವದ ಮೊದಲ ʼನಿಯರ್-ಸ್ಪೇಸ್ ಕಮಾಂಡ್’ (near-space command) ಅನ್ನು ಚೀನಾ ನಿರ್ಮಿಸಿದೆ ಎಂದು ಹಾಂಗ್ ಕಾಂಗ್‌ನ ಎಸ್‌ಸಿಎಂಪಿ ಪತ್ರಿಕೆ ವರದಿ ಮಾಡಿದೆ. ಆ ನೆಲೆ, ಇನ್ನು ಮುಂದೆ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ (peoples liberation army) ಐದನೇ ಪಡೆಯಾಗಿ ಕಾರ್ಯನಿರ್ವಹಿಸಲಿದೆಯಂತೆ. ಉಳಿದ ನಾಲ್ಕು ಪಡೆಗಳು ಭೂಸೇನೆ, ನೌಕಾಪಡೆ, ವಾಯುಪಡೆ ಮತ್ತು ರಾಕೆಟ್ ಫೋರ್ಸ್. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.

8. ಮುಂಬೈ ದಾಳಿ; ಲಷ್ಕರ್ ಉಗ್ರ ಸಂಘಟನೆ ನಿಷೇಧಿಸಿದ ಇಸ್ರೇಲ್, ಭಾರತದಿಂದ ‘ಹಮಾಸ್‌’ ಬ್ಯಾನ್?
ನವದೆಹಲಿ/ಜೆರುಸಲೇಂ: ಭಾರತ ಹಾಗೂ ಇಸ್ರೇಲ್‌ ನಡುವೆ ಉತ್ತಮ ಬಾಂಧವ್ಯವಿದೆ. ಅದರಲ್ಲೂ, ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು (Benjamin Netanyahu) ಅವರು ಆತ್ಮೀಯ ಸ್ನೇಹಿತರಾಗಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ 2008ರ ನವೆಂಬರ್‌ 26ರಂದು ಮುಂಬೈ ಮೇಲೆ ಉಗ್ರ ದಾಳಿ (26/11 Mumbai Attack) ನಡೆಸಿದ ಲಷ್ಕರೆ ತಯ್ಬಾ (Lashkar-e-Taiba) ಉಗ್ರ ಸಂಘಟನೆಯನ್ನು ಇಸ್ರೇಲ್‌ ನಿಷೇಧಿಸಿದೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : Death Threat: ಮೋದಿ, ಯೋಗಿಗೆ ಜೀವ ಬೆದರಿಕೆ; ಕರೆ ಮಾಡಿದ ಕಮ್ರಾನ್ ಖಾನ್‌ ಯಾರು?

9. ವಿದ್ಯುತ್‌ ಸ್ಪರ್ಶದಿಂದ ತಾಯಿ-ಮಗು ಸಾವಿಗೆ ಇಲಿ ಕಾರಣ ಎಂದ ಸಚಿವ ಜಾರ್ಜ್!
ಬೆಂಗಳೂರು: ವೈಟ್‌ ಫೀಲ್ಡ್‌ ಬಳಿ ಬಸ್ಸಿನಿಂದ ಇಳಿದು ಓಫಾರ್ಮ್‌ ಸರ್ಕಲ್‌ ಬಳಿ ನಡೆದು ಬರುತ್ತಿದ್ದಾಗ ತುಂಡಾಗಿ ಬಿದ್ದಿದ್ದ ವಿದ್ಯುತ್‌ ಲೈನ್‌ ತುಳಿದು ತಾಯಿ – ಮಗು ಸಜೀವ ದಹನ (Electricuted Case ) ಆಗಿದ್ದ ಪ್ರಕರಣಕ್ಕೆ ಇಲಿ ಕಾರಣ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ (Energy Minister KJ George) ಹೇಳಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಚಿವರು, ಔದುಂಬರ ಹೋಮ್ಸ್ ಅಪಾರ್ಟ್ಮೆಂಟ್‌ನಲ್ಲಿ ಖಾಸಗಿ ಟ್ರಾನ್ಸ್‌ಫಾರ್ಮರ್ ಅನ್ನು ಹಾಕಿಕೊಳ್ಳಲಾಗಿದ್ದು, ಅದರಲ್ಲಿ ಇಲಿ ಹೋಗಿ ಹಾಳು ಮಾಡಿದ್ದರಿಂಧ ಟ್ರಿಪ್‌ ಆಗಿ ಈ ಅವಘಡ ಉಂಟಾಗಿದೆ ಎಂದು ಹೇಳಿದರು. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.

10.ಈತ ಸೆಲೆಬ್ರಿಟಿ ಮನೆಗಳ್ಳ; ಖಾಲಿ ಸೈಟ್‌ಗಳೇ ಕದ್ದ ಒಡವೆಗಳ ಸೀಕ್ರೆಟ್‌ ಲಾಕರ್‌
ಬೆಂಗಳೂರು: ಆತ ಕಳ್ಳತನಕ್ಕೆ ಒಬ್ಬಂಟಿಯಾಗಿಯೇ ಇಳಿಯುತ್ತಿದ್ದ. ಒಂಟಿ ಮನೆ ಕಣ್ಣಿಗೆ ಬಿದ್ದರೆ ಸಾಕು ಕ್ಷಣಾರ್ಧದಲ್ಲೇ ಲೂಟಿ ಮಾಡಿ (Theft Case) ಪರಾರಿ ಆಗುತ್ತಿದ್ದ. ಅದರಲ್ಲೂ ಸೆಲೆಬ್ರಿಟಿ ಮನೆಗಳಿಗೆ ಗಾಳ ಹಾಕುತ್ತಿದ್ದ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ. ಸೆಲೆಬ್ರಿಟಿ ಮನೆಗಳ್ಳ ಕಾರ್ತಿಕ್ ಅಲಿಯಾಸ್ ಎಸ್ಕೇಪ್ ಕಾರ್ತಿಕ್ ಬಂಧಿತ ಆರೋಪಿ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಮತ್ತಷ್ಟು ವೈರಲ್‌ ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ

Exit mobile version